ಆಡಿದ ರಂಗನಾಡಿದ

( ರಾಗ ಭೂರಿಕಲ್ಯಾಣಿ ಚಾಪು ತಾಳ) ಆಡಿದ ರಂಗನಾಡಿದ ||ಪ || ರೂಢಿಯೊಳಗೆ ನಮ್ಮ ಮಕ್ಕಳಂತೆ ||ಅ.ಪ|| ಮಣ್ಣಾಟ ಬೇಡವೊ ಬುಕ್ಕಚ್ಚಿ ಮಾಡಬೇಕು ಅಣ್ಣಯ್ಯ ಬಾರೆಂದು ಎತ್ತಿಕೊಂಡು ಎಣ್ಣೆ ಒತ್ತಿ ಬೇಗ ಎರೆದಳು ಗೋಪ್ಯಮ್ಮ ಕಣ್ಣಿಗೆ ಕಾಡಿಗೆ ಇಟ್ಟಳು ಕೇಳಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆದಿ ವರಾಹನ ಚೆಲುವ ಪಾದವ ಕಾಣದೆ

( ರಾಗ ಕಾಂಭೋಜ ಆದಿ ತಾಳ) ಆದಿ ವರಾಹನ ಚೆಲುವ ಪಾದವ ಕಾಣದೆ ಕಣ್ಣು ವೇದನೆಯಾಗಿವಳ ಬಾಧಿಸುತಲಿದೆ ಎನ್ನ ||ಪ|| ಈ ಧರಣಿ ಮುಳುಗೆ ಶುಕ್ಲ ನದಿಯ ದಕ್ಷಿಣದಲ್ಲಿದ್ದ ಮೇದಿನಿ ಕೋರೆದಾಡೆಲೆತ್ತಿದಂಥ ||ಅ|| ಅಷ್ತ ಸ್ವಯಂವ್ಯಕ್ತ ಶ್ರೀಮುಷ್ಟ ಅಷ್ಟಾಕ್ಷರ ಮಂತ್ರವನ್ನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆಡಹೋಗಲು ಬೇಡವೊ, ರಂಗಯ್ಯ

( ರಾಗ ಪಂತುವರಾಳಿ ಆದಿ ತಾಳ) ಆಡಹೋಗಲು ಬೇಡವೊ, ರಂಗಯ್ಯ ಬೇಡಿಕೊಂಬೆನೊ ನಿನ್ನ ||ಪ|| ಗಾಡಿಗಾತಿಯರ ಕೊಂಡಾಡಿ ಕೆಡಲು ಬೇಡ ಕಾಡುವರೊ ನಿನ್ನನು ಮುಕುಂದ ||ಅ|| ನೀರೊಳು ಮುಳುಗೆಂಬರೊ, ಬೆನ್ನಿನ ಮೇಲೆ ಭಾರವ ಹೊರಿಸುವರೋ ಕೋರೆದಾಡೆಯ ಮುದ್ದಾಡಿ ಸೋಲಿಸುವರೋ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆಡ ಹೋದಲ್ಲೆ ಮಕ್ಕಳು

( ರಾಗ ಹಿಂದುಸ್ಥಾನಿ ದೇಸಿ ಅಟತಾಳ) ಆಡ ಹೋದಲ್ಲೆ ಮಕ್ಕಳು ಆಡಿಇ ಕೊಂಬುವರು ನೋಡಮ್ಮ ||ಪ|| ನೋಡಿ ನೋಡಿ ಎನ್ನ ಮುಖವ ನೋಡಿ ಕಣ್ಣು ಮೀಟುವರಮ್ಮ ||ಅ.ಪ|| ದೇವಕಿ ಹೆತ್ತಳಂತೆ ವಸು- ದೇವನೆಂಬವ ಪಿತನಂತೆ ಕಾವಲಲ್ಲಿ ಹುಟ್ಟಿದೆನಂತೆ ಮಾವಗಂಜಿಲ್ಲಿ ತಂದರಂತೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆರೇನು ಮಾಡುವರು ಆರಿಂದಲೇನಹುದು

( ರಾಗ ಮುಖಾರಿ. ಝಂಪೆ ತಾಳ) ಆರೇನು ಮಾಡುವರು ಆರಿಂದಲೇನಹುದು ಪೂರ್ವ ಜನ್ಮದ ಕರ್ಮ ವಿಧಿ ಬೆನ್ನ ಬಿಡಿದು ||ಪ|| ಐದು ವರ್ಷದ ಹಸುಳೆ ವನವೆತ್ತ ತಪವೆತ್ತ ಬೈದು ಮಲತಾಯಿಯಡವಿಗೆ ನೂಕಲು ಸುಯ್ದು ಕೋಪಾಗ್ನಿಯಲಿ ಪುರ ಹೊರಟು ಪೋಪಾಗ ಐದೆ ಪಿತರುಗಳಿದ್ದು ಏನು ಮಾಡಿದರು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅರವಿಂದಾಲಯೇ ತಾಯೇ

( ರಾಗ ಕೇದಾರಗೌಳ ತ್ರಿಪುಟ ತಾಳ) ಅರವಿಂದಾಲಯೇ ತಾಯೇ ,ಶರಣು ಹೊಕ್ಕೆನು ಕಾಯೇ ಸಿರಿ ರಮಣನ ಪ್ರಿಯೇ , ಜಗನ್ಮಾತೇ ||ಪ|| ಕಮಲ ಸುಗಂಧಿಯೇ, ಕಮಲದಳ ನೇತ್ರೆಯೆ, ಕಮಲ ವಿಮಲ ಶೋಭಿತೇ ಕಮನೀಯ ಹಸ್ತಪಾದ, ಕಮಲ ವಿರಾಜಿತೇ, ಕಮಲೇ ಕಾಯೇ ಎನ್ನನು||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಪ್ಪಪ್ಪಾ ನೀ ನೋಡಪ್ಪ

( ರಾಗ ಭೈರವಿ ಆದಿ ತಾಳ) ಅಪ್ಪಪ್ಪಾ ನೀ ನೋಡಪ್ಪ ಮೈಯೆಲ್ಲವು ಕೇಸರಪ್ಪ ಕಪ್ಪು ಬಡಿವುದೇನಪ್ಪ ತೊಳೆವೆನೊ ನೀ ಬಾರಪ್ಪ ||ಪ|| ಬಾರಪ್ಪ ನೀ ಬಾರಪ್ಪ ಭಾರ ಹೊರುವುದೇನಪ್ಪ ಭಾರವೆಲ್ಲ ನಿನದಪ್ಪಾ ಸುರರ ಕಾವ ಎನ್ನಪ್ಪ ಎನ್ನಪ್ಪ ಎನ್ನಪ್ಪ ಮೋರೆ ಸೊಟ್ಟು ಯಾಕಪ್ಪ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ

( ರಾಗ ಪೀಲೂ ಅಟತಾಳ) ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ ಕಪಟ ನಾಟಕ ಸೂತ್ರಧಾರಿ ನೀನೇ ||ಪ|| ನೀನೇ ಆಡಿಸದಿರಲು ಜಡ ಒನಕೆಯ ಬೊಂಬೆ ಏನು ಮಾಡಲು ಬಲ್ಲುದು ತಾನೆ ಬೇರೆ ನೀನಿಟ್ಟ ಸೂತ್ರದಿಂ ಚಲಿಪವು ಕೈಕಾಲುಗಳು ನೀನೇ ಮುಗ್ಗಿಸಲು ಮುಗ್ಗುವ ದೇಹದವನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಪಮಾನವಾದರೆ ಒಳ್ಳಿತು

( ರಾಗ ಪೂರ್ವಿ ಅಟ ತಾಳ) ಅಪಮಾನವಾದರೆ ಒಳ್ಳಿತು ಅಪರೂಪ ಹರಿನಾಮ ಜಪಿಸುವ ಮನುಜಗೆ ||ಪ|| ಮಾನದಿಂದ ಅಭಿಮಾನ ಪುಟ್ಟುವುದು ಮಾನದಿಂದ ತಪ ಹಾನಿಯಾಗುವುದು ಮಾನಿ ದುರ್ಯೋಧನಗೆ ಹಾನಿಯಾಯಿತು ಅನು- ಮಾನವಿಲ್ಲ ಮಾನಾಪಮಾನಸಮನಿಗೆ || ಅಪಮಾನದಿಂದಲಿ ತಪ ವೃದ್ಧಿಯಾಗುವುದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎನ್ನ ಬಿಂಬ ಮೂರುತಿಯ ಪೂಜಿಸುವೆ

ರಾಗ - ಕಾಂಬೋದಿ ತಾಳ - ಝಂಪೆ ಎನ್ನ ಬಿಂಬ ಮೂರುತಿಯ ಪೂಜಿಸುವೆ ನಾನು| ಮನಮುಟ್ಟಿ ಅನುದಿನದಿ ಮರೆಯದೇ ಜನರೇ|| ಗಾತ್ರವೇ ಮಂದಿರ ಹೃದಯವೇ ಮಂಟಪ | ಸೂತ್ರವೇ ಮಹದ್ದೀಪ ಹಸ್ತ ಚಾಮರವು || ಯಾತ್ರೆ ಪ್ರದಕ್ಷಿಣೆ ಶಯನ ನಮಸ್ಕಾರ | ಶಾಸ್ತ್ರ ಮಾತುಗಳೆಲ್ಲ ಮಂತ್ರಂಗಳು ||೧||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ