ಕೃಷ್ಣ

ಹ್ಯಾಂಗೆ ಮಾಡಲಯ್ಯಾ, ಪೋಗುತಿದೆ ಆಯುಷ್ಯ !

ರಚನೆ : ಗೋಪಾಲದಾಸರು ಹ್ಯಾಂಗೆ ಮಾಡಲಯ್ಯಾ ಕೃಷ್ಣ ಪೋಗುತಿದೆ ಆಯುಷ್ಯ ಮಂಗಳಾಂಗ ಭವಭಂಗ ಬಿಡಿಸಿ ನಿನ್ನ ಡಿಂಗರಿಗನ ಮಾಡೊ ಅನಂಗಜನಕ ||ಪ|| ಏಸು ಜನುಮದ ಸುಕೃತದ ಫಲವೊ ತಾನು ಜನಿಸಲಾಗಿ ಭೂಸುರ ದೇಹದ ಜನುಮವು ಎನಗೆ ಸಂಭವಿಸಲಾಗಿ ಮೋದತೀರ್ಥ ಮತ ಚಿಹ್ನಿತನಾಗದೆ ದೋಷಕೆ ಒಳಗಾಗಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎನ್ನ ಬಿಂಬ ಮೂರುತಿಯ ಪೂಜಿಸುವೆ

ರಾಗ - ಕಾಂಬೋದಿ ತಾಳ - ಝಂಪೆ ಎನ್ನ ಬಿಂಬ ಮೂರುತಿಯ ಪೂಜಿಸುವೆ ನಾನು| ಮನಮುಟ್ಟಿ ಅನುದಿನದಿ ಮರೆಯದೇ ಜನರೇ|| ಗಾತ್ರವೇ ಮಂದಿರ ಹೃದಯವೇ ಮಂಟಪ | ಸೂತ್ರವೇ ಮಹದ್ದೀಪ ಹಸ್ತ ಚಾಮರವು || ಯಾತ್ರೆ ಪ್ರದಕ್ಷಿಣೆ ಶಯನ ನಮಸ್ಕಾರ | ಶಾಸ್ತ್ರ ಮಾತುಗಳೆಲ್ಲ ಮಂತ್ರಂಗಳು ||೧||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ಜಾರತ್ವವನು ಮಾಡಿದ ಪಾಪಗಳೆಗೆಲ್ಲ

ಜಾರತ್ವವನು ಮಾಡಿದ ಪಾಪಗಳಿಗೆಲ್ಲ ಗೋಪೀಜನ ಜಾರನೆಂದರೆ ಸಾಲದೆ ? ಚೋರತ್ವವನು ಮಾಡಿದ ಪಾಪಗಳಿಗೆಲ್ಲ ನವನೀತ ಚೋರನೆಂದರೆ ಸಾಲದೆ? ಕ್ರೂರತ್ವವನು ಮಾಡಿದ ಪಾಪಗಳಿಗೆಲ್ಲ ಮಾವನ ಕೊಂದವನೆಂದರೆ ಸಾಲದೆ? ಪ್ರತಿ ದಿವಸ ಮಾಡಿದ ಪಾಪಂಗಳಿಗೆಲ್ಲಾ ಪತಿತಪಾವನನೆಂದು ಕರೆದರೆ ಸಾಲದೆ?
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ಎಲ್ಯಾಡಿ ಬಂದ್ಯೊ ಎನ್ನ ರಂಗಯ್ಯಾ ನೀ

ರಾಗ: ಶಂಕರಾಭರಣ ತಾಳ: ತ್ರಿಪುಟ ಎಲ್ಯಾಡಿ ಬಂದ್ಯೋ ಎನ್ನ ರಂಗಯ್ಯಾ ನೀ ಎಲ್ಯಾಡಿ ಬಂದ್ಯೋ ಎನ್ನ ಕಣ್ಣ ಮುಂದಾಡದೆ ||ಪ|| ಆಲಯದೊಳಗೆ ನೀನಾಡದೆ ಚಿನಿ ಪಾಲು ಸಕ್ಕರೆ ನೀನೊಲ್ಲದೆ ಚಿಕ್ಕ ಬಾಲರೊಡನೆ ಕೂಡ್ಯಾಡದೆ ಮುದ್ದು ಬಾಲಯ್ಯ ನೀ ಎನ್ನ ಕಣ್ಣ ಮುಂದಾಡದೆ ||೧||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ