ಸ್ಮರಿಸಿ ಬದುಕಿರೊ ದಿವ್ಯ ಚರಣಕ್ಕೆರಗಿರೊ

ರಚನೆ - ವ್ಯಾಸ ವಿಠಲ (ಕಲ್ಲೂರು ಸುಬ್ಬಣ್ಣಾಚಾರ್ಯ) ಸ್ಮರಿಸಿ ಬದುಕಿರೊ ದಿವ್ಯ ಚರಣಕೆರಗಿರೊ ದುರಿತ ತರಿದು ಪೊರೆವ ವಿಜಯ ಗುರುಗಳೆಂಬರಾ ದಾಸರಾಯನ ದಯವ ಸೂಸಿ ಪಡೆದನಾ ದೋಷರಹಿತನಾ ಸಂತೋಷಭರಿತನಾ ||೧|| ಜ್ಞಾನವಂತನ ಬಲು ನಿಧಾನಿ ಶಾಂತನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅದರಿಂದೇನು ಫಲ ಇದರಿಂದೇನು ಫಲ

( ರಾಗ ನಾದನಾಮಕ್ರಿಯ ಆದಿ ತಾಳ) ಅದರಿಂದೇನು ಫಲ ಇದರಿಂದೇನು ಫಲ, ನಮ್ಮ ಪುರಂದರ ವಿಠಲನ ನಾಮವ ನೆನೆಯದೆ ||ಪ|| ಹೃದಯ ಕಮಲವನು ತೊಳೆಯಲಾರದೆ ವ್ಯರ್ಥ ಉದಯಾಸ್ತಮಾನ ನೀರೊಳು ಮುಳುಗುವರು ಅದಗಿಂತ ಸರ್ವದಾ ನೀರೊಳಗಿರುತಿಪ್ಪ ಮುದಿಕಪ್ಪೆ ಮಾಡಿದ ತಪ್ಪೇನಯ್ಯ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಚ್ಯುತಾನಂತ ಗೋವಿಂದ

( ರಾಗ ಮಧ್ಯಮಾವತಿ ಅಟ ತಾಳ) ಅಚ್ಯುತಾನಂತ ಗೋವಿಂದ, ಹರಿ, ಸಚ್ಚಿದಾನಂದ ಸ್ವರೂಪ ಮುಕುಂದ ||ಪ|| ಕೇಶವ ಕೃಷ್ಣ ಮುಕುಂದ, ಹರಿ, ವಾಸುದೇವ ಗುರು ಜಗದಾದಿವಂದ್ಯ ಯಶೋದೆಯ ಸುಕೃತದ ಕಂದ, ಸ್ವಾಮಿ, ಶೇಷ ಶಯನ ಭಕ್ತ ಹೃದಯಾನಂದ ನಾರಾಯಣ ನಿನ್ನ ನಾಮವೆನ್ನ, ನಾಲಿಗೆ ಮೇಲಿರಬೇಕೆಂಬ ನೇಮ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆರು ಬದುಕಿದರೇನು

( ರಾಗ ಕಾಂಭೋಜ ಅಟ ತಾಳ) ಆರು ಬದುಕಿದರೇನು ಆರು ಬಾಳಿದರೇನು ಪೂರ್ವ ಜನ್ಮದ ಕರ್ಮ ವಿಧಿ ತೀರದನಕ ||ಪ|| ಪತಿ ಭಕುತಿಯಿಲ್ಲದಿಹ ಸತಿಯಿದ್ದು ಫಲವೇನು ಮತಿಯಿಲ್ಲದವಗೆ ಬೋಧಿಸಿದರೇನು ಪತಿಯಿಲ್ಲದವಳಿಗೆ ಬಹು ಭೋಗವಿದ್ದರೇನು ಮತಿ ಹೀನನಾದಂಥ ಮಗನ ಗೊಡವೇನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆರು ಬದುಕಿದರಯ್ಯ ಹರಿ ನಿನ್ನ ನಂಬಿ

( ರಾಗ ಕಾಂಭೋಜ ಝಂಪೆ ತಾಳ) ಆರು ಬದುಕಿದರಯ್ಯ ಹರಿ ನಿನ್ನ ನಂಬಿ ||ಪ|| ತೋರು ಈ ಜಗದೊಳಗೆ ಒಬ್ಬರನು ಕಾಣೆ ||ಅ|| ಕರ ಪತ್ರದಿಂದ ತಾಮ್ರ ಧ್ವಜನ ತಂದೆಯ ಕೊರಳ ಕೊಯಿಸಿದೆ ನೀನು ಕುಂದಿಲ್ಲದೆ ಮರುಳನಂದದಿ ಪೋಗಿ ಭೃಗು ಮುನಿಯ ಕಣ್ಣೊಡೆದೆ ಅರಿತು ತ್ರಿಪುರಾಸುರನ ಹೆಂಡಿರನು ಬೆರೆದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅನುಭವದಡುಗೆಯ ಮಾಡಿ

( ರಾಗ ನಾದನಾಮಕ್ರಿಯ ಛಾಪು ತಾಳ) ಅನುಭವದಡುಗೆಯ ಮಾಡಿ, ಅದ- ಕ್ಕನುಭವಿಗಳು ಬಂದು ನೀವೆಲ್ಲ ಕೂಡಿ ||ಪ|| ತನುವೆಂಬ ಭಾಂಡವ ತೊಳೆದು, ಕೆಟ್ಟ ಮನದ ಚಂಚಲವೆಂಬ ಮುಸುರೆಯ ಕಳೆದು ಘನವಾಗಿ ಮನೆಯನ್ನು ಬಳಿದು, ಅಲ್ಲಿ ಮಿನುಗುವ ತ್ರಿಗುಣದ ಒಲೆ ಗುಂಡ ನೆಡೆದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂದಿಂದ ನಾ ನಿನ್ನ ನೆರೆ ನಂಬಿದೆನೊ

( ರಾಗ ಕಲ್ಯಾಣಿ ತ್ರಿಪುಟ ತಾಳ) ಅಂದಿಂದ ನಾ ನಿನ್ನ ನೆರೆ ನಂಬಿದೆನೊ ಕೃಷ್ಣ ||ಪ|| ತಂದೆ ಗೋವಿಂದ ಮುಕುಂದ ನಂದನ ಕಂದ ||ಅ|| ಬಲವಂತನುತ್ತಾನಪಾದರಾಯನ ಕಂದ ಮಲತಾಯಿ ನೂಕಲು ಅಡವಿಯೊಳು ಜಲಜಾಕ್ಷ ನಿನ್ನ ಕುರಿತ ತಪವಿರಲಾಗಿ ಒಲಿದು ಧ್ರುವಗೆ ಪಟ್ಟ ಗಟ್ಟಿದ್ದು ಕೇಳಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂದಿಗಲ್ಲದೆ ಮನದ ಪರಿತಾಪವಡಗದೊ

( ರಾಗ ಮುಖಾರಿ ಅಟ ತಾಳ) ಅಂದಿಗಲ್ಲದೆ ಮನದ ಪರಿತಾಪವಡಗದೊ ಮು- ಕುಂದ ಮಾಧವ ಮುರಾರೆ ಶೌರೇ ||ಪ|| ಎಂದಿಗೆ ನಿನ್ನ ಭಕ್ತರ ಸಂಗ ಸೌಖ್ಯಗಳೊ ಎಂದಿಗಭಯವ ಪಡೆವೆನೊ ಕೃಷ್ಣ ||ಅ|| ಎಂದಿಗೀ ಜನನ ಮರಣಾದಿಗಳು ಪರಿಹರವು ಎಂದಿಗೆ ಏಕಾಂತ ಭಕ್ತಿಯೋ ಕೃಷ್ಣ ಎಂದಿಗೀ ಮಾನಾಪಮಾನ ಸುಖ ದುಃಖ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ

( ರಾಗ ಮೋಹನ ಝಂಪೆ ತಾಳ) ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ ಸುಜ್ಞಾನಿಗಳ ಕೂಡೆ ಜಗಳವೆ ಲೇಸು ಉಂಬುಡುವುದಕ್ಕಿರದ ಅರಸನೋಲಗಕ್ಕಿಂತ ತುಂಬಿದೂರೊಳಗೆ ತಿರಿದುಂಬುವುದೆ ಲೇಸು ಹಂಬಲಿಸಿ ಹಾಳುಹರಟೆಗಳ ಹರಟೆಗಿಂತ ನಂಬಿ ಹರಿದಾಸರೊಳು ಪೊಂದುವುದೆ ಲೇಸು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂಬಿಗ ನಾ ನಿನ್ನನಂಬಿದೆ

( ರಾಗ ಶಂಕರಾಭರಣ ಅಟ ತಾಳ) ಅಂಬಿಗ ನಾ ನಿನ್ನನಂಬಿದೆ, ಜಗ- ದಂಬಾರಮಣ ನಂಬಿದೆ ||ಪ|| ತುಂಬಿದ ಹರಿಗೋಲಂಬಿಗ, ಅದ- ಕೊಂಭತ್ತು ಛಿದ್ರವು ಅಂಬಿಗ ಸಂಭ್ರಮದಿಂ ನೋಡಂಬಿಗ ಅದ- ರಿಂಬು ನೋಡಿ ನಡೆಸಂಬಿಗ ಹೊಳೆಯ ಭರವ ನೋಡಂಬಿಗ, ಅದಕೆ ಸೆಳವು ಘನವಯ್ಯ ಅಂಬಿಗ
ದಾಸ ಸಾಹಿತ್ಯ ಪ್ರಕಾರ
ಬರೆದವರು