ಕೊಟ್ಟು ಹೋಗೆನ್ನ ಸಾಲವ

(ರಾಗ ಶಂಕರಾಭರಣ ಅಟತಾಳ) ಕೊಟ್ಟು ಹೋಗೆನ್ನ ಸಾಲವ , ಕಣ್ಣ ಬಿಟ್ಟರಂಜುವನಲ್ಲ ಹೊರುಕಲ್ಲ ಕೃಷ್ಣ ||ಪ|| ಕಾಲ ತೂಗಿ ಭೂಮಿ ದಾಡೆಯೊಳಿಟ್ಟರೆ ಮೇಲೆ ನೆಗೆದು ಬಾಯಿ ಬಿಟ್ಟರೆ ಏಳು ವರ್ಷದ ಬಡ್ಡಿ ಮೂಲ ಸಹಿತವಾಗಿ ತಾಳುವನಲ್ಲೇಳೋ ತಿರುಕ ಮುಂಡಾಳಿ || ಕೊರಳಗೊಯಿಕ ಪೂರ್ವ ಸಾಲವ ಕೊಡದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೇಳಿದೆ ನಿನ್ನಯ ಸುದ್ದಿ

(ರಾಗ ಶಂಕರಾಭರಣ ಅಟತಾಳ) ಕೇಳಿದೆ ನಿನ್ನಯ ಸುದ್ದಿ , ಕೇಳಿದೆ || ನೀರೊಳು ಮುಳುಗಿದೆಯಂತೆ , ದೊಡ್ಡ ಭರ ಗಿರಿಯ ಪೊತ್ತೆಯಂತೆ , ಗಡ್ಡೆ ಬೇರು ಗೆಣಸ ಮೆದ್ದೆಯಂತೆ , ಅಹ ಮೂರೆರಡರಿಯದ ತರಳನ , ಮಾತಿಗೆ ಘೋರ ದಾನವನ ಸಂಹಾರ ಮಾಡಿದೆಯೆಂದು || ನಾರಿಯೊಬ್ಬಳ ಪೆತ್ತೆಯಂತೆ , ಹೆತ್ತ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೆಟ್ಟಿತು ಕೆಲಸವೆಲ್ಲ

(ರಾಗ ರೇಗುಪ್ತಿ ಅಟತಾಳ ) ಕೆಟ್ಟಿತು ಕೆಲಸವೆಲ್ಲ ,ಲೋಕದಿ ಕಾಮ ನಟ್ಟುಳಿ ಘನವಾಯಿತು ಬಟ್ಟೆ ತಪ್ಪಿ ಮುಂದೆ ಕೆಟ್ಟು ಕರ್ಮಿಯಾಗಿ ಬಿಟ್ಟು ಮುಂದಣ ಪಥವ, ಹೇ ದೇವ || ಪ|| ಸತ್ಯ ಶೌಚ ಕರ್ಮವು ಧರ್ಮದ ಬಲ ಮತ್ತೆ ಅಡಗಿಹೋಯಿತು ಎತ್ತ ನೋಡಲು ನೀಚವೃತ್ತಿಯು ತುಂಬಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೃಷ್ಣ ಎನಬಾರದೆ

(ರಾಗ ಸೌರಾಷ್ಟ್ರ ಛಾಪುತಾಳ ) ಕೃಷ್ಣ ಎನಬಾರದೆ , ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ||ಪ|| ನರಜನ್ಮ ಬಂದಾಗ ನಾಲಿಗೆ ಇರುವಾಗ , ಕೃಷ್ಣ ಎನಬಾರದೆ ||ಅ|| ಮಲಗಿದ್ದು ಮೈಮುರಿದು ಏಳುತಲೊಮ್ಮೆ, ಕೃಷ್ಣ ಎನಬಾರದೆ , ನಿತ್ಯ ಸುಳಿದಾಡುತ ಮನೆಯೊಳಗದರು ಒಮ್ಮೆ , ಕೃಷ್ಣ ಎನಬಾರದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೃಷ್ಣನಾಮವ ನೆನೆದು ಧನ್ಯನಾಗೋ

(ರಾಗ ಕಾಂಭೋಜ ಝಂಪೆತಾಳ) ಕೃಷ್ಣನಾಮವ ನೆನೆದು ಧನ್ಯನಾಗೋ || ಪ|| ನೆಲೆಯಿಲ್ಲ ಸಂಸಾರವಿಳಿದಂತೆ ಈ ಬಾವಿಯೊಳು ಸಿಲುಕಿ ಸಿಲುಕಿ ಭ್ರಮಿತನಾದೆ ಪಣೆಯಲಿ ಬರೆದ ಕಲ್ಪಣವದು ನರಹರಿಯ ಸ್ಮರಣೆಯೊಳಗಿರು ಕಂಡ್ಯ ಮನವೆ || ದಾರ ಪುತ್ರರಿಗೆ ನೀ ಹಂಬಲಿಸಿ ಚಿಂತಿಸಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೂಸು ಕಂಡೀರ್ಯಾ

(ರಾಗ ಕಲ್ಯಾಣಿ ಆದಿತಾಳ) ಕೂಸು ಕಂಡೀರ್ಯಾ , ಜ್ಞಾನಿಗಳೆಲ್ಲ ಕೂಸು ಕಂಡೀರ್ಯಾ || ಪ|| ಸಾಸಿರನಾಮದ ಶತಕೋಟಿತೇಜದ ಸೂಸುವ ಸುಖಮಯ ಜ್ಞಾನದ ಕೂಸು ||ಅ|| ಜ್ಞಾನಸಮುದ್ರದೊಳಾಡುವ ಕೂಸು ಜ್ಞಾನಿ ಹೃದಯದಿ ಹೊಳೆಯುವ ಕೂಸು ದೀನದಾಸರಿಗೆ ಕಾಣುವ ಕೂಸು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೂಸಿನ ಕಂಡೀರ್ಯಾ

(ರಾಗ ನಾದನಾಮಕ್ರಿಯೆ ಆದಿತಾಳ) ಕೂಸಿನ ಕಂಡೀರ್ಯಾ , ಗುರು ಮುಖ್ಯಪ್ರಾಣನ ಕಂಡೀರ್ಯಾ ||ಪ|| ಬಾಲನ ಕಂಡೀರ್ಯಾ ಬಲವಂತನ ಕಂಡೀರ್ಯಾ ||ಅ.ಪ || ಅಂಜನೆಯುದರದಿ ಪುಟ್ಟಿತು ಕೂಸು ರಾಮನ ಚರಣಕೆ ಎರಗಿತು ಕೂಸು ಸೀತೆಗೆ ಉಂಗುರ ಕೊಟ್ಟಿತು ಕೂಸು ಲಂಕಾಪುರವನೆ ಸುಟ್ಟಿತು ಕೂಸು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕರ್ಮಬಂಧನ ಛೇದನಾ

(ರಾಗ ಧನಶ್ರೀ ಆದಿತಾಳ) ಕರ್ಮಬಂಧನ ಛೇದನಾ, ರಘು ರಾಮನ ನಾಮ ನೀ ನೆನೆ ಮನವೆ || ಪ|| ಮಂತ್ರವನರಿಯೆನು ತಂತ್ರವನರಿಯೆನು ಜಗ- ದಂತ್ರವನರಿಯೆಂದೆನಬೇಡ ತಂತ್ರಸ್ವತಂತ್ರನ ಪರಮಪವಿತ್ರನ ಅಂತರಂಗದಿ ನೀ ನೆನೆ ಮನವೆ || ಜಪವನು ಅರಿಯೆನು ತಪವ ನಾನರಿಯೆನು ಉಪದೇಶವನರಿಯೆನೆಂದೆನಬೇಡ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಂಥಾ ಗಾಡಿಗಾರನೇ

( ರಾಗ ಕೇದಾರಗೌಳ. ಅಟ ತಾಳ) ಎಂಥಾ ಗಾಡಿಗಾರನೇ , ಕೃಷ್ಣಯ್ಯ ಇ- ನ್ನೆಂಥಾ ಗಾಡಿಗಾರನೇ ಕಂತುಪಿತನು ವೇಲಾಪುರದ ಚೆನ್ನಿಗರಾಯ ಎಂಥಾ ಗಾಡಿಗಾರನೇ ಹಿಂಡು ಕೂಡಿರುವ ಮಕ್ಕಳನೆಲ್ಲ ಬಡಿವರೆ , ಲಂಡನೇನೇ ಅಮ್ಮ ಉಂಡು ಹಾಲು ಬೆಣ್ಣೆ ಬೆಕ್ಕಿಗಿಕ್ಕುವರೆ ಪ್ರಚಂಡನೇನೇ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಂತಹುದೋ ನಿನ್ನ ಭಕುತಿ

(ರಾಗ ಮಧ್ಯಮಾವತಿ. ತ್ರಿಪುಟ ತಾಳ) ಎಂತಹುದೋ ನಿನ್ನ ಭಕುತಿ ಸಂತತ ನಿನ್ನ ದಾಸರ ಸಂಗ ಸುಖವೆನಗೆ ವ್ರಣವನಾಶಿಪ ಕುರುಡ ನೊಣ ಮೊಸರ ಕಂಡಂತೆ ಧನಿಕರ ಮನೆಗೆ ಕ್ಷಣ ಕ್ಷಣಕೆ ಹೋಗಿ ತನುಬಾಗಿ ತುಟಿಯೊಣಗಿ ಅಣಕ ನುಡಿ ಕೇಳುವ ಕೃ- ಪಣ ಮನಕ್ಕೆಂತಹುದು ನಿನ್ನಯ ಭಕುತಿ
ದಾಸ ಸಾಹಿತ್ಯ ಪ್ರಕಾರ
ಬರೆದವರು