ಆಡಹೋಗಲು ಬೇಡವೊ, ರಂಗಯ್ಯ
( ರಾಗ ಪಂತುವರಾಳಿ ಆದಿ ತಾಳ)
ಆಡಹೋಗಲು ಬೇಡವೊ, ರಂಗಯ್ಯ
ಬೇಡಿಕೊಂಬೆನೊ ನಿನ್ನ ||ಪ||
ಗಾಡಿಗಾತಿಯರ ಕೊಂಡಾಡಿ ಕೆಡಲು ಬೇಡ
ಕಾಡುವರೊ ನಿನ್ನನು ಮುಕುಂದ ||ಅ||
ನೀರೊಳು ಮುಳುಗೆಂಬರೊ, ಬೆನ್ನಿನ ಮೇಲೆ
ಭಾರವ ಹೊರಿಸುವರೋ
ಕೋರೆದಾಡೆಯ ಮುದ್ದಾಡಿ ಸೋಲಿಸುವರೋ
ಕರುಳಹಾರ ಕೊರಳನೆಂಬರೋ ||
ಪುಟ್ಟರೂಪನೆಂಬರೋ, ಅಕ್ಕಯ್ಯ
ಕೊಡಲಿ ಪಿಡಿದನೆಂಬರೋ
ಕಡೆಗಣ್ಣ ರುದ್ರನ ವರವುಳ್ಳ ದಶ-
ಕಂಠನ ಕೊಂದವನೆಂಬರೋ ||
ಬೆಣ್ಣೆ ಕಳ್ಳನೆಂಬರೋ, ಹೆಂಗಳನೆಲ್ಲ
ಭಂಗ ಮಾಡಿದನೆಂಬರೋ
ಪುಟ್ಟ ಕುದುರೆಯನೇರಿ ಕಲ್ಕಿರೂಪನಾಗಿ
ಪುರಂದರ ವಿಠಲ ಬಾ ಎಂಬರೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments