ಬರಿದೆ ಹೋಯಿತು ಹೊತ್ತು.

( ರಾಗ ಬಿಲಹರಿ. ಅಟ ತಾಳ) ಬರಿದೆ ಹೋಯಿತು ಹೊತ್ತು ||ಪ|| ನರ ಜನ್ಮ ಸ್ಥಿರವೆಂದು ನಾನಿದ್ದೆನೊ ರಂಗ ||ಅ|| ಆಸೆಯೆಬುದು ಎನ್ನ ಕ್ಲೇಶ ಪಡಿಸುತಿದೆ ಘಾಸಿಯಾದೆನೊ ಹರಿ ಶೇಷಶಾಯಿ ವಾಸುದೇವನೆ ನಿನ್ನ ಧ್ಯಾನವ ಮಾಡದೆ ನಾಶವಾಯಿತು ಜನ್ಮ ಮೋಸ ಹೋದೆನು ಕೃಷ್ಣ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾರೇ ಗೋಪಮ್ಮ ನಿಮ್ಮ ಬಾಲಯ್ಯನಳುತಾನೆ

( ರಾಗ ಸೌರಾಷ್ಟ್ರ ಛಾಪು ತಾಳ) ಬಾರೇ ಗೋಪಮ್ಮ ನಿಮ್ಮ ಬಾಲಯ್ಯನಳುತಾನೆ, ಬಾರೇ ಗೋಪಮ್ಮ ||ಪ|| ಆರು ತೂಗಿದರು ಮಲಗನು ಮುರವೈರಿ, ಬಾರೇ ಗೋಪಮ್ಮ ||ಅ|| ನೀರೊಳು ಮುಳುಗಿ ಮೈ ಒರೆಸೆಂದಳುತಾನೆ, ಬಾರೇ ಗೋಪಮ್ಮ ಮೇರುವ ಹೊತ್ತು ಮೈ ಭಾರವೆಂದಳುತಾನೆ, ಬಾರೇ ಗೋಪಮ್ಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾರಯ್ಯ ರಂಗ ಬಾರಯ್ಯ ಕೃಷ್ಣ

( ರಾಗ ಶಂಕರಾಭರಣ. ಅಟ ತಾಳ) ಬಾರಯ್ಯ ರಂಗ ಬಾರಯ್ಯ ಕೃಷ್ಣ ಬಾರಯ್ಯ ಸ್ವಾಮಿ ಬಾರಯ್ಯ ||ಪ|| ವಾರಣಭಯವ ನಿವಾರಣ ಮಾಡಿದ ಕಾರುಣ್ಯನಿಧಿಯೆನ್ನ ಹೃದಯ ಮಂದಿರಕೆ ||ಅ|| ಮೊದಲಿಂದ ಬರಬಾರದೆ ನಾನು ಬಂದೆ ತುದಿ ಮೊದಲಿಲ್ಲದ್ಹೊಂದಿದೆ ಅಪನಿಂದೆ ಇದು ಗೆದ್ದು ಕಳೆದುಪೋಪುದು ಹೇಗೆ ಮುಂದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಂದು ನಿಂದಿಹ ನೋಡಿ

( ರಾಗ ಮಧ್ಯಮಾವತಿ. ಅಟ ತಾಳ) ಬಂದು ನಿಂದಿಹ ನೋಡಿ ಭೂತಳದಿ ವೆಂಕಟ ಇಂದಿರೆಯ ಒಡಗೂಡಿ ಒಪ್ಪುವ ನಿರಂತರ ಪೊಂದಿ ಭಜನೆಯ ಮಾಡಿ ಆನಂದಗೂಡಿ || ಪ|| ವಂದಿಸುತ ಮನದೊಳಗೆ ಇವನಡಿ ದ್ವಂದವ ಭಜಿಸಲು ಬಂದ ಭಯಹರ ಇಂದುಧರ ಸುರ ವೃಂದನುತ ಗೋ- ವಿಂದ ಘನ ದಯಾ ಸಿಂಧು ಶ್ರೀ ಹರಿ ||ಅ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಂದನೇನೆ ರಂಗ

( ರಾಗ ಶ್ರೀ. ಆದಿ ತಾಳ) ಬಂದನೇನೆ ರಂಗ ಬಂದನೇನೆ, ಎನ್ನ ||ಪ|| ತಂದೆ ಬಾಲಕೃಷ್ಣ ನವನೀತ ಚೋರ ||ಅ|| ಘಿಲುಘಿಲುಘಿಲುರೆಂಬ ಪೊನ್ನಂದುಗೆ ಗೆಜ್ಜೆ ಹೊಳೆ ಹೊಳೆಯುವ ಪಾದವನೂರುತ ನಲಿನಲಿದಾಡುವ ಉಂಗುರ ಅರಳೆಲೆ ಥಳಥಳಥಳ ಹೊಳೆಯುತ ಶ್ರೀ ಕೃಷ್ಣ || ಕಿಣಿಕಿಣಿಕಿಣಿರೆಂಬ ಕರದ ಕಂಕಣ ಬಳೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಿನ್ನಹಕೆ ಬಾಯಿಲ್ಲವಯ್ಯ

( ರಾಗ ಕಾಂಭೋಜ ಝಂಪೆ ತಾಳ) ಬಿನ್ನಹಕೆ ಬಾಯಿಲ್ಲವಯ್ಯ ಅನಂತ ಅಪರಾಧ ಎನ್ನಲ್ಲಿ ಇರಲಾಗಿ ||ಪ|| ಶಿಶುಮೋಹ ಸತಿಮೋಹ ಜನನಿಜನಕರ ಮೋಹ ರಸಿಕಭ್ರಾತರ ಮೋಹ ರಾಜಮೋಹ ಪಶುಮೋಹ ಭೂಮೋಹ ಬಂಧುವರ್ಗದ ಮೋಹ ಅಸುರಾರಿ ನಿನ್ನ ಮರೆತೆನೊ ಕಾಯೊ ಹರಿಯೆ ಅನ್ನಮದ ಅರ್ಥಮದ ಅಖಿಲವೈಭವದ ಮದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಿಲ್ಲೆಗಾರನು ಆದನು ರಂಗಯ್ಯ

( ರಾಗ ಶಂಕರಾಭರಣ. ಆದಿ ತಾಳ) ಬಿಲ್ಲೆಗಾರನು ಆದನು ರಂಗಯ್ಯ ರಂಗ ||ಪ|| ಬಿಲ್ಲೆಗಾರನಾಗಿ ಎನ್ನ ಕಾವಲಾದ ಬಲ್ಲವರ ಭಾಗ್ಯವೊ ಎಲ್ಲವರಿತ ಸ್ವಾಮಿ ||ಅ|| ಸಾಟಿಯಿಲ್ಲದ ಪರಿ ತಲೆಯಲಿ ಕಟ್ಟಿಹ ನೀಟಾಗಿ ಧರಿಸಿಪ್ಪ ಅಂಗಿಗಳು ನೋಟಕ್ಕೆ ಆಶ್ಚರ್ಯ ಕಾಲಲಿ ತೊಟ್ಟದ್ದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಲವು ಬಲವೆ ನಿನ್ನ ಬಲವಲ್ಲದೆ

ಬಲವು ಬಲವೆ ನಿನ್ನ ಬಲವಲ್ಲದೆ ( ರಾಗ ಮುಖಾರಿ. ಝಂಪೆ ತಾಳ) ಬಲವು ಬಲವೆ ನಿನ್ನ ಬಲವಲ್ಲದೆ ಮಿಕ್ಕ ಬಲಗಳುಂಟೆ ಬಣಗು ಗ್ರಹಗಳಿಂದ ||ಪ|| ಹರಿ ನಿನ್ನ ಕೃಪೆಯೆನಗೆ ಚಂದ್ರ ತಾರಾ ಬಲವು ಹರಿ ನಿನ್ನ ಕರುಣವೆ ರವಿಯ ಬಲವು ಹರಿ ನಿನ್ನ ಮೋಹವೇ ಎನಗೆ ಗುರು ಭೃಗು ಬಲವು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬದುಕಿದೆನು ಬದುಕಿದೆನು

ಬದುಕಿದೆನು ಬದುಕಿದೆನು ( ರಾಗ ಕಾಂಭೋಜ. ಝಂಪೆ ತಾಳ) ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು ಪದುಮನಾಭನ ಪಾದದೊಲುಮೆ ಎನಗಾಯಿತು ||ಪ|| ಮುಕ್ತರಾದರು ಎನ್ನ ನೂರೊಂದು ಕುಲದವರು ಮುಕ್ತಿ ಮಾರ್ಗಕೆ ಯೋಗ್ಯ ನಾನಾದೆನು ಮುಕ್ತಿದಾಯಕನ ಭಕ್ತಿಗೆ ಮನವು ನೆಲೆಸಿತು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಭಂಗಾರವಿಡಬಾರೆ

( ರಾಗ ಧನಶ್ರೀ. ಆದಿ ತಾಳ) ಭಂಗಾರವಿಡಬಾರೆ, ನಿನಗೊಪ್ಪುವ ಭಂಗಾರವಿಡಬಾರೆ ||ಪ|| ರಂಗನಾಥನ ದಿವ್ಯ ಮಂಗಳ ನಾಮವೆಂಬ ಭಂಗಾರವಿಡಬಾರೆ ||ಅ|| ಮುತ್ತೈದೆತನವೆಂಬ ಮುಖದಲಿ ಕುಂಕುಮದ ಕಸ್ತೂರಿಯ ಬೊಟ್ಟನಿಡೆ ನಿನ್ನ ಫಣೆಗೆ ಕಸ್ತೂರಿಯ ಬೊಟ್ಟನಿಡೆ ಹೆತ್ತವರ ಕುಲಕೆ ಕುಂದು ಬಾರದ ಹಾಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು