ಜೋಜೋ ಶ್ರೀಕೃಷ್ಣ ಪರಮಾನಂದ

(ರಾಗ ಶಂಕರಾಭರಣ ತ್ರಿಪುಟ ತಾಳ) ಜೋಜೋ ಶ್ರೀಕೃಷ್ಣ ಪರಮಾನಂದ ಜೋಜೋ ಗೋಪಿಯ ಕಂದ ಮುಕುಂದ ಜೋಜೋ ||ಪ|| ಪಾಲಗಡಲೊಳು ಪವಡಿಸಿದವನೇ ಒಂ- ದಾಲದೆಲೆಯ ಮೇಲೆ ಮಲಗಿದ ಶಿಶುವೇ ಶ್ರೀಲತಾಂಗಿಯರ ಚಿತ್ತದೊಲ್ಲಭನೇ ಬಾಲ ನಿನ್ನನು ಪಾಡಿ ತೂಗುವೆನಯ್ಯ ಜೋಜೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಾಲಿಯ ಮರವಂತೆ ಧರೆಯೊಳು ದುರ್ಜನರು

(ರಾಗ ಮೋಹನ ಅಟತಾಳ) ಜಾಲಿಯ ಮರವಂತೆ ಧರೆಯೊಳು ದುರ್ಜನರು ಜಾಲಿಯ ಮರವಂತೆ ||ಪ|| ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂಥ ||ಅ.ಪ|| ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಿಲ್ಲ ಹಸಿದು ಬಂದವರಿಗೆ ಹಣ್ಣೂ ಇಲ್ಲ ಕುಸುಮ ವಾಸನೆಯಿಲ್ಲ ಕೂಡಲು ಸ್ಥಳವಿಲ್ಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಯ ಜಯ ಶ್ರೀರಾಮ ನಮೋ

(ರಾಗ ಭೈರವಿ ಆದಿತಾಳ) ಜಯ ಜಯ ಶ್ರೀರಾಮ ನಮೋ ಜಯ ಜಯ ಶ್ರೀ ಕೃಷ್ಣ ನಮೋ ||ಪ|| ಸಿರಿಯರಸನು ಶೃಂಗಾರವ ಮಾಡಿ ಶ್ರೀ ಗಂಧವನೆ ಹಣೆಗಿಟ್ಟು ತರುಣ ತುಲಸಿ ಮಾಲೆಯ ಧರಿಸಿ ಕರುತುರುಗಾಯಲು ಹೊರಗೆ ಹೊರಟನು ||ಅ|| ಹೊತ್ತು ಹೋಯಿತು ತುರು ಬಿಡಿರೆನ್ನುತ ಅಚ್ಯುತ ನುಡಿದ ಗೋಪಿಯರೊಡನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಲಧಿಯ ಲಂಘಿಸಿದವಗೆ , ಜಯ ಮಂಗಳ

(ರಾಗ ಪೂರ್ವಿ ಆದಿತಾಳ) ಜಲಧಿಯ ಲಂಘಿಸಿದವಗೆ , ಜಯ ಮಂಗಳ ಸುಲಲಿತ ಮುಖ್ಯಪ್ರಾಣಗೆ , ಶುಭಮಂಗಳ ||ಪ|| ಅಗ್ರಜನ್ನ ಭಯದಲಿದ್ದ ಸುಗ್ರೀವನ್ನ ತಂದು ಲಕ್ಷ್ಮಣ ಅಗ್ರಜನ್ನ ಪಾದಕಮಲಗಳಿಗೆರಗಿಸಿ ನಿಗ್ರಹಿಸಿ ವಾಲಿಯನ್ನು ಶೀಘ್ರದಲ್ಲಿ ಕಪಿರಾಜ್ಯ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಯವದೆ ಜಯವದೆ, ಈ ಮನೆತನಕೆ

(ರಾಗ ಪಕ್ಷಿಶಕುನ ಏಕತಾಳ) ಜಯವದೆ ಜಯವದೆ, ಈ ಮನೆತನಕೆ ಬಹಳ ಜಯವದೆ ||ಪ|| ಹಕ್ಕಿ ನುಡಿಯಿತಣ್ಣ ನುಡಿಯಿತು ಹಕ್ಕಿ ನುಡಿಯಿತು ಒಂದು ಶುಭವಚನ ಒಂದೆರಡಕ್ಷರ ಎರಡು ಮೂವತ್ತೆರಡಾಗಿ ನುಡಿಯಿತು ವಾಲ್ಮೀಕನ ಉದ್ಧರಿಸಿತು ಹಕ್ಕಿಶಕುನವು ಮುಕ್ಕಣ್ಣಗೆ ಜಯವಾಯಿತು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಯಮಂಗಳಂ ನಿತ್ಯ ಶುಭಮಂಗಳಂ

(ರಾಗ ಭೈರವಿ ಛಾಪುತಾಳ) ಜಯಮಂಗಳಂ ನಿತ್ಯ ಶುಭಮಂಗಳಂ ||ಪ|| ಇಂದೀವರಾಕ್ಷಗೆ ಇಭರಾಜವರದಗೆ ಇಂದಿರಾರಮಣ ಗೋವಿಂದ ಹರಿಗೆ ನಂದನಾಕಂದಗೆ ನವನೀತಚೋರಗೆ ವೃಂದಾರಕೇಂದ್ರ ಉಡುಪಿಯ ಕೃಷ್ಣಗೆ || ಕ್ಷೀರಾಬ್ಧಿವಾಸಗೆ ಕ್ಷಿತಿಜನಪಾಲಗೆ ಮಾರನ್ನ ಪಡೆದ ಮಂಗಳಮೂರ್ತಿಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಯ ಮಂಗಳಂ ನಿತ್ಯ ಶುಭ ಮಂಗಳಂ

(ರಾಗ ಭೈರವಿ ಅಟತಾಳ) ಜಯ ಮಂಗಳಂ ನಿತ್ಯ ಶುಭ ಮಂಗಳಂ ||ಪ|| ಮಂಗಳಂ ಆನಂದ ತೀರ್ಥ ಗುರುರಾಯರಿಗೆ ಮಂಗಳಂ ಮಧುರನುಡಿ ಸಂಭಾಷ್ಯಗೆ ಮಂಗಳಂ ಮೈಥಿಲಿಗೆ ಅಂಗುಲೀಯನಿತ್ತವಗೆ ಮಂಗಳಂ ಜಯ ವೀರ ಮಧ್ವಮುನಿಗೆ ||ಅ.ಪ|| ಅಂಜನೆಯ ಗರ್ಭಸಂಜಾತ ವಿಖ್ಯಾತನಿಗೆ ಸಂಜೀವನವ ತಂದ ಹನುಮಂತಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜನರ ನಡತೆ ಕೇಳಿರಯ್ಯ

(ರಾಗ ನಾದನಾಮಕ್ರಿಯೆ ಅಟತಾಳ) ಜನರ ನಡತೆ ಕೇಳಿರಯ್ಯ ||ಪ|| ಇಂಥ ಜನರ ನೋಡಿ ನೀವು ಏನನಂಬಿರಯ್ಯ ||ಅ.ಪ|| ತಾಯಿಗನ್ನವನಿಕ್ಕರಯ್ಯ , ಬಲು ಮಾಯ ಮಾತಿಗೆ ಮರುಳಾಗುವರಯ್ಯ ನ್ಯಾಯವೆಂಬುದು ಇಲ್ಲವಯ್ಯ , ಅ- ನ್ಯಾಯವೇ ಗತಿಯೆಂದು ಸಾಧಿಪರಯ್ಯ || ಉತ್ತಮ ಸ್ತ್ರೀಯಳ ಬಿಟ್ಟು , ತನ್ನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೊಳಲನೂದುತ್ತಾ ಬಂದ

(ರಾಗ ಕಾಂಭೋಜ ಆದಿತಾಳ) ಕೊಳಲನೂದುತ್ತಾ ಬಂದ ನಮ್ಮ ಗೋಪಿಯ ಕಂದ ಕೊಳಲನೂದುವುದು ಬಲು ಚಂದ ||ಪ|| ಆ ವಸುದೇವನ ಕಂದ , ಇವ ನೋಡೆ ದೇವಕಿ ಬಸಿರೊಳು ಬಂದ ಮಾವ ಕಂಸನ ಕೊಂದ ಭಾವಜನಯ್ಯ ಮುಕುಂದ || ಮುತ್ತಿನಾಭರಣವ ತೊಟ್ಟು ಹಸ್ತದಿ ಕೊಳಲ ಕೊಟ್ಟು ಕಸ್ತೂರಿ ತಿಲಕನಿಟ್ಟಾ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೊಡುವ ಕರ್ತು ಬೇರೆ ಇರುತಿರೆ

(ರಾಗ ಸುರುಟಿ ಅಟತಾಳ ) ಕೊಡುವ ಕರ್ತು ಬೇರೆ ಇರುತಿರೆ ಬಿಡು ಬಿಡು ಚಿಂತೆಯನು ||ಪ|| ಒಡೆಯನಾಗಿ ಮೂರ್ಜಗವನು ಪಾಲಿಪ ಬಡವರುದ್ಧಾರಕ ಭಕ್ತರೊಡೆಯ ಹರಿ ||ಅ.ಪ|| ಕಲ್ಲಿನೊಳಗೆ ಇರುವ ಕಪ್ಪೆಗೆ ಅಲ್ಲಿ ಉದಕ ಕೊಡುವ ಎಲ್ಲ ಕೋಟಿ ಜೀವರಾಶಿಗಳನೆ ಕಾಯ್ವ
ದಾಸ ಸಾಹಿತ್ಯ ಪ್ರಕಾರ
ಬರೆದವರು