ಅಕ್ಕ ನಂದಗೋಪನ ಅರಮನೆಯೊಳಗೊಬ್ಬ

( ರಾಗ ಮೋಹನ ಆದಿ ತಾಳ) ಅಕ್ಕ ನಂದಗೋಪನ ಅರಮನೆಯೊಳಗೊಬ್ಬ, ಅಕ್ರೂರ ಬಂದನಂತೆ ಹೊಕ್ಕು ಬಳಸುವಳಲ್ಲ ಹುಸಿಯನಾಡುವಳಲ್ಲ, ಅಕ್ಕೋ ಬಾಗಿಲ ಮುಂದೀಗ ರಥವ ಕಂಡೆ ||ಪ|| ಮಧುರಾಪಟ್ಟಣವಂತೆ ಮಾವ ಕರೆಸಿದನಂತೆ ನದಿಯ ದಾಟಲು ಬೇಕಂತೆ ಬದಲು ಮಾತಿಲ್ಲವಂತೆ ಏನೆಂಬೆ ಏಣಾಕ್ಷಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂಗಿ ತೊಟ್ಟೇನೆ, ಗೋಪಿ

( ರಾಗ ತೋಡಿ ಆದಿ ತಾಳ) ಅಂಗಿ ತೊಟ್ಟೇನೆ, ಗೋಪಿ, ಶೃಂಗಾರವಾದೇನೆ ಹಾಲ ಕುಡಿದೇನೆ, ಗೋಪಿ, ಆಕಳ ಕಾಯ್ದೇನೆ ||ಪ|| ಚಕ್ಕುಲಿ ಕೊಡು ಎನಗೆ, ಗೋಪಿ, ಅಕ್ಕರದಿ ಬಂದೆನೆ ಗೊಲ್ಲರ ಮಕ್ಕಳ ಎಲ್ಲರೊಡಗೂಡಿ, ಹಲವು ಗೋವ್ಗಳ ಕಾಯ್ದು ಬಂದೆನೆ ಅಮ್ಮಣ್ಣಿ ಕೊಡು ಎನಗೆ, ಗೋಪಿ, ಬೆಣ್ಣೆಯ ತೋರೆ ಮೇಲೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆನೆ ಬಂದಿತಮ್ಮಮ್ಮ

( ರಾಗ ಶ್ರೀರಾಗ ಆದಿ ತಾಳ) ಆನೆ ಬಂದಿತಮ್ಮಮ್ಮ, ಮರಿ- ಯಾನೆ ಬಂದಿತಮ್ಮಮ್ಮ ||ಪ|| ತೊಲಗಿರೆ ತೊಲಗಿರೆ ಪರಬ್ರಹ್ಮ ಬಲು ಸರಪಣಿ ಕಡಕೊಂಡು ಬಂತಮ್ಮ ||ಅ|| ಕಪಟನಾಟಕದ ಮರಿಯಾನೆ ನಿಕಟಸಭೆಯಲಿ ನಿಂತಾನೆ ಕಪಟನಾಟಕದಿಂದ ಸೋದರ ಮಾವನ ನಕಟಕಟೆನ್ನದೆ ಕೊಂದಾನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಕ್ಕ ಎತ್ತಣ ಬಿಲ್ಲಹಬ್ಬ ಬಂತೆಮಗೆ

( ರಾಗ ಆನಂದಭೈರವಿ ಅಟ ತಾಳ) ಅಕ್ಕ ಎತ್ತಣ ಬಿಲ್ಲಹಬ್ಬ ಬಂತೆಮಗೆ ಪ್ರಾಣಕಾಂತನ ಕರದೊಯ್ವರು ಮಧುರೆಗೆ ||ಪ|| ಅಕ್ಕ ಮಧುರಾಪಟ್ಟಣದ ನಾರಿಯರು ಅಕ್ಕ ಚದುರೆ ಚೆಲುವೆ ಚಪಲೆಯರು ಅಕ್ಕ ಮದನಶಾಸ್ತ್ರದಿ ನಿಪುಣೆಯರು ಸಿಕ್ಕ ಮಾಧವನ ಕಂಡರೆ ಅವರ್ ಬಿಡರು ಅಕ್ಕ ಮೋಹನ ಕಾಣೆ ಮಧುರಾಪುರ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಕ್ಕಾ ಅಕಟಕಟೆನ್ನ ಗಂಡ ವೈಷ್ಣವನಾದ ಕಾರಣ

( ರಾಗ ಧನಶ್ರೀ ಏಕತಾಳ) ಅಕ್ಕಾ ಅಕಟಕಟೆನ್ನ ಗಂಡ ವೈಷ್ಣವನಾದ ಕಾರಣ ರಕ್ಕಸಾಂತಕನ ಭಜಿಸಿ ಬರಿದಾಯ್ತೆನ್ನ ಬದುಕು |||ಪ|| ಅಡ್ಡ ಗಂಧವನಿಟ್ಟುಕೊಂಡು ರುದ್ರ ದೇವರ ಭಜಿಸುವಾಗ ಬಡ್ಡಿಗೆ ಹಣವ ಕೊಟ್ಟು ಸುಖದೊಳಿದ್ದೆವು ಅಡ್ಡ ಗಂಧ ಬಿಟ್ಟು ದೊಡ್ಡ ನಾಮ ಮುದ್ರೆ ಧರಿಸಲಾಗಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆಗಲಾಗಲಿ ರಂಗಯ್ಯ

( ರಾಗ ಪಂತುವರಾಳಿ ಅಟ ತಾಳ) ಆಗಲಾಗಲಿ ರಂಗಯ್ಯ, ನಿಮ್ಮಯ್ಯಗೆ ಹೋಗಿ ಹೇಳುವೆನು ನಾನು ||ಪ|| ಮೊಸರ ಕಡೆವ ವೇಳ್ಯದಿ, ನೀ ಪಿಡಿದೆಯೊ ಮಿಸುನಿಯ ಕಡೆಗೋಲ ಹಸುಮಗನೇ ನೀನು, ಮೋಸದಿ ಬಂದು ನುಸುಳದೆ ತೆರಳೆಂದಳು ಬೇರಿರಿಸಿದೆ ಮೊಸರು, ಹಾಲು ಪಾತ್ರೆ ಸಾರಿ ಹೇಳುವೆ ನಿನಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆರಿಗೆ ಮೊರೆಯಿಡಲೊ

( ರಾಗ ಶಂಕರಾಭರಣ ಆದಿ ತಾಳ) ಆರಿಗೆ ಮೊರೆಯಿಡಲೊ ಹರಿಯೆ ವಿ- ಚಾರಿಸುವರ ಒಬ್ಬರ ಕಾಣೆ ||ಪ|| ಹಲವಂಗ ಗುಣದವನೊಬ್ಬರಸು ತಲೆಯಿಲ್ಲದವನೊಬ್ಬ ಪ್ರಧಾನಿ ತಳವಾರ ಕಿಡಿಗಣ್ಣಿನವನೊಬ್ಬ ಬಲುಬೊಟ್ಟು ಗುಣದೊಬ್ಬ ಶ್ಯಾನಭೋಗ ಅರಸನ ಹೆಂಡತಿ ರತಿಗಾರಿ ಅರಸನ ಮಗಳು ಅಹಂಕಾರಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅನುದಿನದಲಿ ಬಂದು ತನುವ ಸ್ನೇಹವ ಮಾಡಿ

( ರಾಗ ಯದುಕುಲಕಾಂಭೋಜ ತ್ರಿಪುಟತಾಳ) ಅನುದಿನದಲಿ ಬಂದು ತನುವ ಸ್ನೇಹವ ಮಾಡಿ ಎನ ಬಿಟ್ಟು ಹೋಗುತೀಯಾ ಜೀವವೆ ||ಪ|| ಘನ ಕೋಪದಿಂದ ಬಂದು ಯಮನವರೆಳೆದೊಯ್ವಾಗ ನಿನ ಕೂಡಿನ್ನೇತರ ಮಾತೋ ಕಾಯವೆ ||ಅ|| ಬೆಲ್ಲದ ಹೇರಿನಂತೆ ಬೇಕಾದ ಬಂಧುಬಳಗ ನಿಲ್ಲೋ ಮಾತು ಹೇಳುತೇನೋ ಜೀವವೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂಜಲೇತಕೆ ಮನವೆ

(ರಾಗ ಮುಖಾರಿ ಝಂಪೆ ತಾಳ) ಅಂಜಲೇತಕೆ ಮನವೆ ಅನುಗಾಲವು ಕಂಜನಾಭನ ಭಕ್ತಿ ಕೈಗೊಂಡ ಬಳಿಕ ||ಪ|| ನಾರಾಯಣವೆಂಬೊ ನಾಲ್ಕು ಅಕ್ಷರದಿಂದ ಘೋರ ದುರಿತಗಳೆಲ್ಲ ಕಳೆಯಬಹುದು ಶ್ರೀರಾಮನಾಮವೆಂಬೊ ಸಿಂಗಾಡಿ ತಕ್ಕೊಂಡು ವೈರಿಷಡ್ವರ್ಗಗಳ ವಧೆ ಮಾಡಬಹುದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆವಾಗ ನೆನೆ ಮನವೆ

( ರಾಗ ಮೋಹನಕಾಂಭೋಜ ಛಾಪು ತಾಳ) ಆವಾಗ ನೆನೆ ಮನವೆ ಭವದ ಬಗೆಯ ತಪ್ಪಿಸಿ ಕಾವಡಿದು ಕೃಷ್ಣ ನಾಮ ||ಪ|| ದೇವಾದಿ ದೇವನೆಯೆಂದು ಕರಿಮೊರೆಯಿಡಲು ತಾನೊಲಿದ ದಿವ್ಯ ನಾಮ ದ್ರೌಪದೀದೇವಿಯಭಿಮಾನವನೆ ರಕ್ಷಿಸಿತು ಶ್ರೀಪತಿಯ ದಿವ್ಯ ನಾಮ
ದಾಸ ಸಾಹಿತ್ಯ ಪ್ರಕಾರ
ಬರೆದವರು