ಆವ ಕುಲ ತಿಳಿಯಲಾಗದು

( ರಾಗ ಪೂರ್ವಿ ಅಟ ತಾಳ) ಆವ ಕುಲ ತಿಳಿಯಲಾಗದು ||ಪ|| ಕಡಲ ಮಗಳ ಕಂಡನಂತೆ ಅಡವಿಯೊಳಗೆ ಮಡದಿಯಂತೆ ಪೊಡವಿಗೆ ತಾನೊಡೆಯನಂತೆ ಕೊಡೆಯ ಪಿಡಿದು ಬೇಡಿದನಂತೆ ರಕ್ಕಸರಲ್ಲಿ ಕಾಳಗವಂತೆ ಮರ್ಕಟರೆಲ್ಲ ಬಂಟರಂತೆ ಪಕ್ಷಿಯನೇರಿ ಮೆರೆದನಂತೆ ಮುಕ್ಕಣ್ಣೇಶ್ವರ ಮೊಮ್ಮಗನಂತೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆತನ ಪಾಡುವೆ ಅನವರತ

( ರಾಗ ಪೂರ್ವಿ ಅಟ ತಾಳ) ಆತನ ಪಾಡುವೆ ಅನವರತ ಪ್ರೀತಿಯಿಂದಲಿ ತನ್ನ ಭಕುತರ ಸಲಹುವ ||ಪ|| ಆವಾತನ ಕೀರ್ತಿ ಪರೀಕ್ಷಿತ ಕೇಳಿ ಪಾವನನಾದನು ಮೂಜಗವರಿಯೆ ಭಾವಶುದ್ಧಿಯಲಿ ಶುಕನಾರ ಪೊಗಳುವ ಆವಾಗ ಪ್ರಹ್ಲಾದನಾರ ನೆನೆವನಯ್ಯ ಶಿಲೆಯ ಬಾಲೆಯ ಮಾಡಿದ ಪಾದವಾರದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆರು ಸರಿ ನಿನಗೆ ಬೊಮ್ಮಾಂಡದೊಳಗೆ

( ರಾಗ ಸಾವೇರಿ ಝಂಪೆ ತಾಳ) ಆರು ಸರಿ ನಿನಗೆ ಬೊಮ್ಮಾಂಡದೊಳಗೆ ವೀರ ರಾಮನ ಬಂಟ ಧೀರ ಹನುಮಂತ ||ಪ|| ತೆಂಕ ಜಲಧಿಯ ಲಘುವಿಂದ ದಾಟಿ ಅಕ- ಳಂಕ ರಾಮನ ಬೆರಳ ಮುದ್ರಿಕೆಯನು ಲಂಕಾವಿದೆಂದು ಕೊಟ್ಟವನಿಜೆಯ ಸಂತೈಸಿ ಲಂಕೆಯನುರುಪಿದೆ ನಿಶ್ಶಂಕ ಹನುಮಂತ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆರೋಗಣೆಯ ಮಾಡೇಳಯ್ಯ

( ರಾಗ ಮುಖಾರಿ ಝಂಪೆ ತಾಳ) ಆರೋಗಣೆಯ ಮಾಡೇಳಯ್ಯ ||ಪ|| ಸರಸಿಜ ಭವಾಂಡದೊಳ್ ಮೇರು ಮಂಟಪದಿ ಸುರದಿನಕರಾದೀಪ್ತಾಜ್ಯೋತಿಶ್ಚಕ್ರಾ ತರಣಿ ಮಂಡಲವ ಪೋಲುವ ರತುನದ ಹೊನ್ನ ಹರಿವಾಣದಲಿ ದೇವಿ ಬಡಿಸಿದಳಯ್ಯ ಅಲ್ಲ ಹೇರ್‍ಅಳೆ ಲಿಂಬೆ ಮೆಣಸು ಯಾಲಕ್ಕಿಕಾಯಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅರಿಯರು ಮನುಜರರಿಯರು

( ರಾಗ ಪಂತುವರಾಳಿ ಅಟ ತಾಳ) ಅರಿಯರು ಮನುಜರರಿಯರು ||ಪ|| ಅರಿಯರು ಮನುಜರು ಅರಿತೂ ಅರಿಯರು ಧರೆ ಈರೇಳಕ್ಕೆ ಹರಿಯಲ್ಲದಿಲ್ಲವೆಂದು ||ಅ|| ನಾರದಮುನಿ ಬಲ್ಲ ವಾರಿಜೋದ್ಭವ ಬಲ್ಲ ಪಾರಾಶರ ಬಲ್ಲ ಮನು ಬಲ್ಲನು ಧೀರ ಭೀಷ್ಮನು ಬಲ್ಲ ಪಾರ್ವತಿ ಬಲ್ಲಳು ಕಾರುಣಿಕನು ಶ್ರೀ ಹರಿಯಲ್ಲದಿಲ್ಲವೆಂದು || ಶಿವ ಬಲ್ಲ ಧ್ರುವ ಬಲ್ಲ ದ್ರೌಪದಿ ಬಲ್ಲಳು ಅವನಿಪಾಲಕ ಜನಕನೃಪ ಬಲ್ಲನು ಯುವತಿಗೆ ಶಾಪವಿತ್ತ ಗೌತಮ ಮುನಿ ಬಲ್ಲ ಭವರೋಗ ವೈದ್ಯ ಶ್ರೀ ಹರಿಯಲ್ಲದಿಲ್ಲವೆಂದು || ದಿಟ್ಟ ಪ್ರಹ್ಲಾದ ಬಲ್ಲ ಕೆಟ್ಟ ಅಜಮಿಳ ಬಲ್ಲ ಸಿಟ್ಟಿನಿಂದಲಿ ಒದ್ದ ಭೃಗು ಬಲ್ಲನು ಕೊಟ್ಟ ಬಲಿ ಬಲ್ಲ ಮೊರೆಯಿಟ್ಟ ಗಜೇಂದ್ರ ಬಲ್ಲ ಸೃಷ್ಟೀಶ ಪುರಂದರ ವಿಠಲನೆ ಪರ ದೈವವೆಂದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅರಿಯದೆ ಬಂದೆವು ಕಿಂಸನ್

( ರಾಗ ಸಾರಂಗ ತ್ರಿಪುಟ ತಾಳ) ಅರಿಯದೆ ಬಂದೆವು ಕಿಂಸನ್ ಪರಿಹರಿಸಯ್ಯ ಭಂಸನ್ ||ಪ|| ಪರಿಪರಿಯಿಂದಲೆ ಹರಿ ಹರಿಯೆಂದರೆ ದುರಿತದ ಭಯ ಒಂದಿಲ್ಲಲ್ಲಾ ||ಅ|| ಮತ್ಸ್ಯಾವತಾರಗೆ ಕಿಂಸನ್ ಕೂರ್ಮಾವತಾರಗೆ ಭಂಸನ್ ಸ್ವಚ್ಛಾನಂತನ ಸ್ಮರಣೆಯ ಮಾಡಿದರೆ ಮೋಕ್ಷಪದವೇಕಲ್ಲಲ್ಲಾ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ

( ರಾಗ ಮುಖಾರಿ ಝಂಪೆ ತಾಳ) ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ ಚಿಂತೆಯನು ಬಿಟ್ಟು ಶ್ರೀ ಹರಿಯ ನೆನೆ ಮನವೆ ||ಪ|| ದಿವ ರಾತ್ರಿಯೆನ್ನದೆ ವಿಷಯಲಂಪಟನಾಗಿ ಸವಿಯೂಟಗಳನುಂಡು ಭ್ರಮಿಸ ಬೇಡ ಅವನ ಕೊಂದಿವನ ಕೊಂದರ್ಥವನು ಗಳಿಸುವರೆ ಜವನ ದೂತರು ಬರುವ ಹೊತ್ತ ನೀನರಿಯೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂದೆ ನಿರ್ಣಯವಾದುದಕೆ

( ರಾಗ ಸೌರಾಷ್ಟ್ರ ಆದಿ ತಾಳ) ಅಂದೆ ನಿರ್ಣಯವಾದುದಕೆ, ಸಿರಿ ಇಂದಿರಾಪತಿ ಪರ ದೇವತೆಯೆಂದು ||ಪ|| ಅಂದು ಸ್ವಯಂವರದಲ್ಲಿ ಬ್ರಹ್ಮರುದ್ರಾದಿ ಇಂದ್ರಾದಿಗಳೆಲ್ಲರ ಜರೆದು ಇಂದಿರೆ ನಿತ್ಯಾನಂದ ನಿರ್ದೋಷ ಗುಣ ಪೂರ್ಣ- ನೆಂದು ಮಾಲೆಯ ತಾ ಹಾಕಿದಳು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಮ್ಮ ಎನ್ನ ಕೂಡ್ಯಾಡುವ ಮಕ್ಕಳು

( ರಾಗ ಧನಶ್ರೀ ಚಾಪು ತಾಳ) ಅಮ್ಮ ಎನ್ನ ಕೂಡ್ಯಾಡುವ ಮಕ್ಕಳು ಅಣಗಿಸುವರು ನೋಡೆ ||ಪ|| ಯಾರು ಪಡೆದನೆಂಬೋರೆ, ಅಮ್ಮಯ್ಯ ದಾರು ಪಡೆದರೆಂಬೊರೆ ಕೇರಿಯ ಬೆಣ್ಣೆಯ ಕದ್ದು ತಿಂದವನೆಂದು ನಾರಿಯರು ದೂರುತಾರೆ ಕೇಳಮ್ಮ || ಮಾತೆ ನೀನಲ್ಲವಂತೆ, ಅಮ್ಮಯ್ಯ ಪಿತನು ಇಲ್ಲಿಲ್ಲವಂತೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆಡಿದನೋ ರಂಗ ಅದ್ಭುತದಿಂದಲಿ

( ರಾಗ ಅರಭಿ ಆದಿ ತಾಳ) ಆಡಿದನೋ ರಂಗ ಅದ್ಭುತದಿಂದಲಿ ಕಾಳಿಂಗನ ಫಣೆಯಲಿ ||ಪ|| ಪಾಡಿದವರಿಗೆ ಬೇಡಿದ ವರಗಳ ನೀಡುತಲಿ ದಯ ಮಾಡುತಲಿ ನಲಿ- ದಾಡುತಲಿ ಬೆಣ್ಣೆ ಬೇಡುತಲಿ ಕೃಷ್ಣ ||ಆ|| ಅಂಬುರುಹೋದ್ಭವ ಅಖಿಳ ಸುರರು ಕೂಡಿ ಅಂಬರದಲಿ ನಿಂತು ಅವರ್ ಸ್ತುತಿಸೆ
ದಾಸ ಸಾಹಿತ್ಯ ಪ್ರಕಾರ
ಬರೆದವರು