ಅರವಿಂದಾಲಯೇ ತಾಯೇ

ಅರವಿಂದಾಲಯೇ ತಾಯೇ

( ರಾಗ ಕೇದಾರಗೌಳ ತ್ರಿಪುಟ ತಾಳ) ಅರವಿಂದಾಲಯೇ ತಾಯೇ ,ಶರಣು ಹೊಕ್ಕೆನು ಕಾಯೇ ಸಿರಿ ರಮಣನ ಪ್ರಿಯೇ , ಜಗನ್ಮಾತೇ ||ಪ|| ಕಮಲ ಸುಗಂಧಿಯೇ, ಕಮಲದಳ ನೇತ್ರೆಯೆ, ಕಮಲ ವಿಮಲ ಶೋಭಿತೇ ಕಮನೀಯ ಹಸ್ತಪಾದ, ಕಮಲ ವಿರಾಜಿತೇ, ಕಮಲೇ ಕಾಯೇ ಎನ್ನನು|| ನಿನ್ನ ಕರುಣಾ ಕಟಾಕ್ಷ ವೀಕ್ಷಣದಿಂದಲಿ ತನುಮನಗಳನಿತ್ತೆ ಧನ್ಯ ವಿರಾಜಿತೇ, ಅಜ ಭವಾದಿಗಳ ಪ್ರಸನ್ನೇ, ಕಾಯೇ ಎನ್ನನು|| ಹರಿ ನಿನ್ನ ಉರದಲ್ಲಿ ಧರಿಸಿದನೆಂಬಂಥ ಗರುವದಿ ಮೆರೆಯದಿರೆ ನಿರತ ನಿನ್ನಯ ಮುದ್ದು ಪುರಂದರ ವಿಠಲನ ಚರಣ ಕಮಲವ ತೋರಿಸೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು