ಏನೇನು ದಾನವ ಮಾಡಲಿ

(ರಾಗ ಪಂತುವರಾಳಿ. ಛಾಪು ತಾಳ.) ಏನೇನು ದಾನವ ಮಾಡಲಿ ಹರಿ- ಧ್ಯಾನಕ್ಕೆ ಸಮವಾದ ದಾನಗಳುಂಟೆ ಶತಕೋಟಿ ಕನ್ಯಾಪ್ರದಾನವ ಮಾಡಲಿ ಅತಿಶಯ ಉದಕ ದಾನವ ಮಾಡಲಿ ಮತಿ ಶುದ್ಧವಾಗಿ ಭೂದಾನವ ಮಾಡಲಿ ಕೃತಿ ರಮಣನ ಧ್ಯಾನಕೆ ಸರಿಯುಂಟೆ ದಿನಕೊಂದು ಸಾವಿರ ಗೋದಾನ ಮಾಡಲಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನೆಂತೊಲಿವೆ , ನಿನ್ನವರಂತೆ ಕೆಡುಬುದ್ಧಿ ಎನ್ನೊಳಿಲ್ಲ

(ರಾಗ ಸೌರಾಷ್ಟ್ರ. ಅಟ ತಾಳ) ಏನೆಂತೊಲಿದೆ ನಿನ್ನವರಂತೆ ಕೆಡುಬುದ್ಧಿ ಎನ್ನೊಳಿಲ್ಲ ಗುಣ- ಹೀನರಲ್ಲದ ದೀನಜನರ ಪಾಲಿಪ ಬುದ್ಧಿ , ನಿನ್ನೊಳಿಲ್ಲ ತರಳ ಪ್ರಹ್ಲಾದನಂದದಿ ನಿನ್ನ ರೂಪವ ಕೆಡಿಸಲಿಲ್ಲ ನರನಂತೆ ನಾ ನಿನ್ನ ಬಂಡಿಬೋವನ ಮಾಡಿ ಹೊಡೆಸಲಿಲ್ಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನಾಯಿತು ರಂಗಗೆ

(ರಾಗ ಶಂಕರಾಭರಣ ಅಟ ತಾಳ) ಏನಾಯಿತು ರಂಗಗೆ ನೋಡಿರಮ್ಮ ||ಪ|| ನಿಧಾನಿಸಿ ಎನಗೊಂದು ಪೇಳಿರಮ್ಮ ||ಅ.ಪ|| ಪುಟ್ಟಿದಾರಭ್ಯ ಕಣ್ಣ ಮುಚ್ಚನಮ್ಮ , ತಾನು ಎಷ್ಟಾದರು ಮೊಲೆಯುಣ್ಣನಮ್ಮ ತಟುಕು ಮುಖ ಮೇಲಕೆತ್ತನಮ್ಮ, ಹೀಗೆ ಎಷ್ಟು ಹೇಳಲಿ ಬಾಯ ಮುಚ್ಚನಮ್ಮ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎನಗೊಬ್ಬ ದೊರೆಯು ದೊರಕಿದನು

ಎನಗೊಬ್ಬ ದೊರೆಯು ದೊರಕಿದನು (ರಾಗ ಧನಶ್ರಿ. ಝಂಪೆ ತಾಳ) ಎನಗೊಬ್ಬ ದೊರೆಯು ದೊರಕಿದನು ||ಪ|| ವನಜ ಸಂಭವ ಜನಕ ಹನುಮಂತರ್ಯಾಮಿ ||ಅ.ಪ|| ಮಾತ ಪಿತನಾದ ಭ್ರಾತೃ ಬಾಂಧವನಾದ ಪ್ರೀತಿಯಿಂದಲಿ ತಾನೆ ನಾಥನಾದ ಖ್ಯಾತನು ತಾನಾದ ದಾತನು ತಾನಾದ ಭೂತೇಶ ವಂದ್ಯ ವಿಭೂತಿ ಪ್ರಿಯನಾದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏಕೆನ್ನೊಳಿಂತು ಕೃಪೆಯಿಲ್ಲ

(ಆಗ ಮುಖಾರಿ. ಝಂಪೆ ತಾಳ) ಏಕೆನ್ನೊಳಿಂತು ಕೃಪೆಯಿಲ್ಲ ಹರಿಯೆ ಕಾಕು ಮಾಡದೆ ಕಾಯೊ ಸಂಗದೊಳು ಬಳಲಿದೆನು ಕಂದರ್ಪಬಾಧೆಯಿಂ ಮಾನಿನಿಯರೊಶನಾಗಿ ಮಂದಮತಿಯಿಂದ ನಾ ಮರುಳಾದೆನು ಸಂದಿತೈ ಯೌವನವು ಬುದ್ಧಿ ಬಂದಿತು ಈಗ ಸಂದೇಹಬಡದೆ ನೀ ಕರುಣಿಸೈ ಎನ್ನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏಕೇ ಮೂರ್ಖನಾದ್ಯೋ

(ರಾಗ ಕಾಂಭೋಜ್. ಚಾಪು ತಾಳ) ಏಕೇ ಮೂರ್ಖನಾದ್ಯೋ , ಮನವೆ, ಏಕೇ ಮೂರ್ಖನಾದ್ಯೋ ಕಾಕು ಬುದ್ಧಿಯ ಬಿಟ್ಟು ಲೋಕನಾಯಕನ ನೆನೆ ಕಂಡ್ಯ ಮನವೆ ಹೆಂಡಿರು ಮಕ್ಕಳು ನಿನ್ನವರೆಂದು ರೊಕ್ಕವಾದರು ಗಳಿಸಿ ಕೊಂಡು ಸೊಕ್ಕಿನಿಂದ ತಿರುಗುವೆಯೇನೋ ಮನುಜ ರಕ್ಕಸನ ದೂತರು ಬಂದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏಕಾರತಿಯ ನೋಡುವ ಬನ್ನಿ

(ರಾಗ ಪೂರ್ವಿ ಝಂಪೆ ತಾಳ) ಏಕಾರತಿಯ ನೋಡುವ ಬನ್ನಿ ||ಪ| ನಮ್ಮ ಲೋಕನಾಥನ ಸಿರಿ ಪಾದಕ್ಕೆ ಬೆಳಗುವ ||ಅ.ಪ|| ಹರುಷದಿಂದ ಏಕಾರತಿಯ ಬೆಳಗಲು ನರಕದಿಂದುದ್ಧಾರ ಮಾಡುವನು ಪರಮ ಭಕುತಿಯಿಂದ ನರರನು ಹರಿ ತನ್ನ ಉದರದೊಳಿರಿಸುವನು ತುಪ್ಪದೊಳ್ಬೆರೆಸಿದ ಮೂರು ಬತ್ತಿಯನಿಟ್ಟು
ದಾಸ ಸಾಹಿತ್ಯ ಪ್ರಕಾರ
ಬರೆದವರು

ದೂರು ಮಾಡುವರೇನೆ

(ರಾಗ ಕಾಂಭೋಜ. ಝಂಪೆ ತಾಳ) ದೂರು ಮಾಡುವರೇನೆ , ರಂಗಯ್ಯನ ದೂರು ಮಾಡುವರೇನೆ ||ಪ|| ದೂರು ಮಾಡುವರೇನೆ ಚಾರು ಮಂದಿಯೊಳಗೆ ಮೂರು ಲೋಕಕೆ ಮುದ್ದು ತೋರೋ ರಂಗಯ್ಯನ ||ಅ.ಪ|| ನಂದಗೋಕುಲದಲ್ಲಿ ಮಂದೆ ಗೋವುಗಳ ಮುಂದೆ ಕೊಳಲನೂದಿ ಚಂದದಿ ಬರುವನ || ಕಳ್ಳತನದಲ್ಲಿ ಗೊಲ್ಲರ ಮನೆ ಪೊಕ್ಕು
ದಾಸ ಸಾಹಿತ್ಯ ಪ್ರಕಾರ
ಬರೆದವರು

ದೃಷ್ಟಿ ನಿನ್ನ ಪಾದದಲ್ಲಿ ನೆಡೊ ಹಾಗೆ

(ರಾಗ ಶಂಕರಾಭರಣ. ಆದಿ ತಾಳ) ದೃಷ್ಟಿ ನಿನ್ನ ಪಾದದಲ್ಲಿ ನೆಡೊ ಹಾಗೆ , ಧರೆ ದುಷ್ಟಜನಸಂಗಗಳ ಬಿಡೋ ಹಾಗೆ ಕೆಟ್ಟ ಮಾತು ಕಿವಿಯಿಂದ ಕೇಳದ ಹಾಗೆ ,ಮನ ಕಟ್ಟಿ ಸದಾ ನಿನ್ನ ಧ್ಯಾನ ಬಿಡದ ಹಾಗೆ ||ಪ|| ದಿಟ್ಟನಾಗಿ ಕೈಯನೆತ್ತಿ ಕೊಡೊ ಹಾಗೆ , ಶ್ರೀ ಕೃಷ್ಣ ನಿನ್ನ ಪೂಜೆಯನು ಮಾಡೋ ಹಾಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಧೂಪಾರತಿಯ ನೋಡುವ ಬನ್ನಿ

(ರಾಗ ಪೂರ್ವಿಕಲ್ಯಾಣಿ. ಅಟ ತಾಳ) ಧೂಪಾರತಿಯ ನೋಡುವ ಬನ್ನಿ ||ಪ|| ನಮ್ಮ ಗೋಪಾಲ ಕೃಷ್ಣ ದೇವರ ಪೂಜೆಯ ||ಅ.ಪ|| ಮುತ್ತು ಛತ್ರ ಚಾಮರ ಪತಾಕ ಧ್ವಜ ರತ್ನ ಕೆತ್ತಿಸಿದ ಪದಕ ಹಾರಗಳು ಮತ್ತೆ ಕೋಟಿ ಸೂರ್ಯ ಪ್ರಭೆಯ ಧಿಕ್ಕರಿಸುವ ಸತ್ಯಭಾಮೆ ರುಕ್ಮಿಣಿಯರಸ ಶ್ರೀ ಕೃಷ್ಣನ
ದಾಸ ಸಾಹಿತ್ಯ ಪ್ರಕಾರ
ಬರೆದವರು