ಆಡ ಹೋದಲ್ಲೆ ಮಕ್ಕಳು

ಆಡ ಹೋದಲ್ಲೆ ಮಕ್ಕಳು

( ರಾಗ ಹಿಂದುಸ್ಥಾನಿ ದೇಸಿ ಅಟತಾಳ) ಆಡ ಹೋದಲ್ಲೆ ಮಕ್ಕಳು ಆಡಿಇ ಕೊಂಬುವರು ನೋಡಮ್ಮ ||ಪ|| ನೋಡಿ ನೋಡಿ ಎನ್ನ ಮುಖವ ನೋಡಿ ಕಣ್ಣು ಮೀಟುವರಮ್ಮ ||ಅ.ಪ|| ದೇವಕಿ ಹೆತ್ತಳಂತೆ ವಸು- ದೇವನೆಂಬವ ಪಿತನಂತೆ ಕಾವಲಲ್ಲಿ ಹುಟ್ಟಿದೆನಂತೆ ಮಾವಗಂಜಿಲ್ಲಿ ತಂದರಂತೆ || ವಿಷವು ತುಂಬಿದ ಮೊಲೆಯನುಂಡು ಅಸುರೆಯ ನಾ ಕೊಂದೆನಂತೆ ನಿಶಿಚರ ಶಕಟಾಸುರನ ಶಿಶುಗಾಲಿಲೊರಸಿದೆನಂತೆ || ನೀನೆನ್ನ ಹಡೆದಿಲ್ಲವಂತೆ ನಾ ನಿನ್ನ ಮಗನಲ್ಲವಂತೆ ಧೇನು ಕಾಯುವರಿಲ್ಲವೆಂದು ಸಾನುರಾಗದಿ ಸಲಹಿದೆಯಂತೆ || ಕಿಚ್ಚ ನಾ ಗಡ ನುಂಗಿದೆನಂತೆ ವತ್ಸಾಸುರನ ಕೆಡಹಿದೆನಂತೆ ಕಚ್ಚ ಬಂದ ಕಾಳಿಂಗನ ಕೊಚ್ಚಲು ಮಡುವ ಧುಮುಕಿದೆನಂತೆ || ಹದ್ದು ಎನ್ನ ವಾಹನನಂತೆ ಹಾವು ಎನ್ನ ಹಾಸಿಗೆಯಂತೆ ಕದ್ದು ಬೆಣ್ಣೆಯ ನಾ ತಿಂದೆನಂತೆ ಮುದ್ದು ಪುರಂದರ ವಿಠಲನಂತೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು