ಎಂತು ನೋಡಿದರು ಚಿಂತೆ

(ರಾಗ ಕಾಂಭೋಜ ಝಂಪೆ ತಾಳ) ಎಂತು ನೋಡಿದರು ಚಿಂತೆ ,ಈ ಒಡಲು ನಿ- ಶ್ಚಿಂತರಾಗಿಹ ಒಬ್ಬರನು ಕಾಣೆ || ಬ್ರಹ್ಮನಿಗೆ ಶಿರ ಹೋಗಿ ಬಾಡಿ ಬಳಲುವ ಚಿಂತೆ ಮುನ್ನ ಮಾರುತಿಗೆ ಕಪಿಯಾದ ಚಿಂತೆ ಮನ್ಮಥಗೆ ತನು ಸುಟ್ಟು ಬೂದಿಯಾಗಿಹ ಚಿಂತೆ ಕಣ್ಣು ಮೂರುಳ್ಳವಗೆ ತಿರಿದುಂಬ ಚಿಂತೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಈಗಲೆ ಭಜಿಸೆಲೆ ಜಿಹ್ವೆ

(ರಾಗ ಸೌರಾಷ್ಟ್ರ ಆದಿತಾಳ) ಈಗಲೆ ಭಜಿಸೆಲೆ ಜಿಹ್ವೆ , ನೀ ಜಾಗುಮಾಡದೆ ಹರಿಯ ಪಾದಾಬುಜವ || ದೇಹಗೇಹ ಸಂಬಂಧಿಗಳು ನಿನ್ನ ಮೋಹಬದ್ಧನಾಗಿ ಭವದಿ ಕಟ್ಟುವರು ಆಹಾರ ಗುಹ್ಯೇಂದ್ರಿಯವೆಂಬೊ ಎರೆಡರ ವಿಹಾರದಲಿ ನೀನು ಮುಣುಗಿರದೆ ಮನ || ಮರಣವು ತೊಡದು ಮಡಗಿ, ನಿನ್ನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಈಗ ಮಾಡೆಲೋ ರಾಮಧ್ಯಾನವ

(ರಾಗ ಕಾಂಭೋಜ ಝಂಪೆತಾಳ) ಈಗ ಮಾಡೆಲೋ ರಾಮಧ್ಯಾನವ , ನೀ ಮೂಕನಾಗಿರಬೇಡ ಎಲೆ ಮಾನವ ||ಪ|| ಕಾಲನ ದೂತರು ಕರೆವಾಗ ನೀ ಕಾಲಗೆಟ್ಟು ಕಣ್ಣ ಬಿಡುವಾಗ ನಾಲಗೆ ಸೆಳಕೊಂಡು ಜ್ಞಾನಗೆಟ್ಟಿರುವಾಗ ನೀಲವರ್ಣನ ಧ್ಯಾನ ಬರುವುದೇನಯ್ಯ || ಸತಿಸುತರೆಂಬ ಸಂದಣಿಯೊಳು ನೀ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇನ್ನೂ ದಯಬಾರದೇ

(ರಾಗ ಕಲ್ಯಾಣಿ ಅಟತಾಳ) ಇನ್ನೂ ದಯಬಾರದೇ , ದಾಸನ ಮೇಲೆ ಇನ್ನೂ ದಯಬಾರದೇ ||ಪ|| ಪನ್ನಗಶಯನನೆ ಪಾಲ್ಗಡಲೊಡೆಯನೆ ಕೃಷ್ಣ || ಅ.ಪ|| ನಾನಾದೇಶಗಳಲ್ಲಿ ನಾನಾ ಕಾಲಗಳಲ್ಲಿ ನಾನಾ ಯೋನಿಗಳಲ್ಲಿ ಪುಟ್ಟಿ ನಾನು ನನ್ನದು ಎಂಬ ನರಕದೊಳಗೆ ಬಿದ್ದು ನೀನೇ ಗತಿಯೆಂದು ನಂಬಿದ ದಾಸನ ಮೇಲೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇನ್ನಾದರೂ ಹರಿಯ ನೆನೆ ಕಂಡ್ಯ

(ರಾಗ ಮುಖಾರಿ ಝಂಪೆ ತಾಳ) ಇನ್ನಾದರೂ ಹರಿಯ ನೆನೆ ಕಂಡ್ಯ ಮನುಜ ಮುನ್ನಾದ ದುಃಖವು ನಿಜವಾಗಿ ತೊಲಗುವುದು || ಊರೂರ ನದಿಗಳಲಿ ಬಾರಿಬಾರಿಗೆ ಮುಳುಗಿ ತೀರದಲಿ ಕುಳಿತು ನೀ ಹಣೆಗೆ ನಿತ್ಯ ನೀರಿನಲಿ ಮಟ್ಟಿಯನು ಕಲೆಸಿ ಬರೆಯುತ ಮೂಗ ಬೇರನ್ನು ಪಿಡಿದು ಮುಳುಗಿಕ್ಕಲೇನುಂಟು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಲ್ಲಿರುವ 638 ಪುರಂದರದಾಸರ ಕೃತಿಗಳ ಪಟ್ಟಿ (28-ಫೆಬ್ರುವರಿ-2009 ರಂದು ಇದ್ದಂತೆ)

ಅಂಗನೆಯರೆಲ್ಲ ನೆರೆದು ಅಂಗನೆಯರೆಲ್ಲ ನೆರೆದು ಚಪ್ಪಾಳಿಕ್ಕುತ ದಿವ್ಯ ಅಂಗಿ ತೊಟ್ಟೇನೆ, ಗೋಪಿ ಅಂಜಬೇಡ ಬೇಡಲೊ ಅಂಜಲೇತಕೆ ಮನವೆ ಅಂಜಿಕಿನ್ನಾತಕಯ್ಯ , ಸಜ್ಜನರಿಗೆ ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ ಅಂದಿಂದ ನಾ ನಿನ್ನ ನೆರೆ ನಂಬಿದೆನೊ

ವಾಸುದೇವನ ನಾಮಾವಳಿಯ

ವಾಸುದೇವನ ನಾಮಾವಳಿಯ. ರಾಗ: ಮುಖಾರಿ. ಝಂಪೆ ತಾಳ. ಪಲ್ಲವಿ: ವಾಸುದೇವನ ನಾಮಾವಳಿಯ ಕ್ಲಪ್ತಿಯನು ವ್ಯಾಸರಾಯರ ಪರ್ಯಂತ ವರ್ಣಿಸಿದೆ ನಾನು ಚರಣಗಳು: ೧: ಕೇದಾರ ರಾಮೇಶ್ವರ ಕಿರುಕುಳದ ಭೂತಳದ ಪಾದಾರವಿಂದ ತೀರ್ಥ ಪ್ರತಿ ಕ್ಷೇತ್ರವ
ದಾಸ ಸಾಹಿತ್ಯ ಪ್ರಕಾರ

ಋಣವೆಂಬ ಸೂತಕವು

(ರಾಗ ಮುಖಾರಿ ಅಟತಾಳ) ಋಣವೆಂಬ ಸೂತಕವು ಬಹು ಬಾಧೆ ಪಡಿಸುತಿದೆ ಗುಣನಿಧಿಯೆ ನೀನೆನ್ನ ಋಣವ ಪರಿಹರಿಸೋ ಕೊಟ್ಟವರು ಬಂದೆನ್ನ ನಿಷ್ಠುರಗಳನಾಡಿ ಕೆಟ್ಟ ಬೈಗಳ ಬೈದು ಮನದಣಿಯಲು ದಿಟ್ಟತನವನು ಬಿಟ್ಟು ಕಳೆಗುಂದಿದೆನಯ್ಯ ಸೃಷ್ಟಿಗೊಡೆಯನೆ ಎನ್ನ ಋಣವ ಪರಿಹರಿಸೋ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇನ್ನೇಕೆ ಯಮನ ಭಾಧೆಗಳು

(ರಾಗ ಆನಂದಭೈರವಿ ಛಾಪುತಾಳ) ಇನ್ನೇಕೆ ಯಮನ ಭಾಧೆಗಳು , ಎನ್ನ ಜಿಹ್ವೆಲಿ ಹರಿನಾಮಸ್ಮರಣೆ ಒಂದಿರಲು || ಪತಿತಪಾವನನೆಂಬೋ ನಾಮ , ಅತಿ ಹಿತದಿಂದ ಮುನಿಗಳು ಸ್ತುತಿಸುವ ನಾಮ ಕ್ರತುಕೋಟಿ ಫಲವೀವ ನಾಮ, ಸ- ದ್ಗತಿಗೆ ಸಾಧನವಾಗುವ ಹರಿನಾಮ || ಮುನ್ನೊಬ್ಬ ಪ್ರಹ್ಲಾದ ಸಾಕ್ಷಿ, ಆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇದು ಭಾಗ್ಯವಿದು ಭಾಗ್ಯವಿದು

(ರಾಗ ಕಾಂಭೋಜ ಝಂಪೆ ತಾಳ) ಇದು ಭಾಗ್ಯವಿದು ಭಾಗ್ಯವಿದು ಭಾಗ್ಯವಯ್ಯ ||ಪ|| ಪದುಮನಾಭನ ಪಾದಭಜನೆ ಸುಖವಯ್ಯ ||ಅ|| ಕಲ್ಲಾಗಿ ಇರಬೇಕು ಕಠಿಣ ಭವತೊರೆಯೊಳಗೆ ಬಿಲ್ಲಾಗಿ ಇರಬೇಕು ಬಲ್ಲವರೊಳಗೆ ಮೆಲ್ಲನೆ ಮಾಧವನ ಮನವ ಮೆಚ್ಚಿಸಬೆಕು ಬೆಲ್ಲವಾಗಿರಬೇಕು ಬಂಧುಜನರೊಳಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು