ಇನ್ನೇಕೆ ಯಮನ ಭಾಧೆಗಳು

ಇನ್ನೇಕೆ ಯಮನ ಭಾಧೆಗಳು

(ರಾಗ ಆನಂದಭೈರವಿ ಛಾಪುತಾಳ) ಇನ್ನೇಕೆ ಯಮನ ಭಾಧೆಗಳು , ಎನ್ನ ಜಿಹ್ವೆಲಿ ಹರಿನಾಮಸ್ಮರಣೆ ಒಂದಿರಲು || ಪತಿತಪಾವನನೆಂಬೋ ನಾಮ , ಅತಿ ಹಿತದಿಂದ ಮುನಿಗಳು ಸ್ತುತಿಸುವ ನಾಮ ಕ್ರತುಕೋಟಿ ಫಲವೀವ ನಾಮ, ಸ- ದ್ಗತಿಗೆ ಸಾಧನವಾಗುವ ಹರಿನಾಮ || ಮುನ್ನೊಬ್ಬ ಪ್ರಹ್ಲಾದ ಸಾಕ್ಷಿ, ಆ ಕನ್ಯಾಶಿರೋಮಣಿ ದ್ರೌಪದಿ ಸಾಕ್ಷಿ ಚಿಣ್ಣನೆಂದಜಮಿಳ ಸಾಕ್ಷಿ, ನಿಜ- ಪುಣ್ಯಲೋಕವನಾಳ್ವ ಧ್ರುವರಾಯ ಸಾಕ್ಷಿ || ಹದಿನಾಲ್ಕುಲೋಕವನಾಳ್ವ , ದಿವ್ಯ- ಮದನಜನಕನಾಗಿ ಮುದದಿಂದ ಬಾಳ್ವ ಪದುಮನಾಭನಾಗಿ ಇರುವ , ಗುರು ಮಧ್ವೇಶ ಪುರಂದರವಿಟ್ಠಲ ಕಾಯ್ವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು