ಇನ್ನೂ ದಯಬಾರದೇ

ಇನ್ನೂ ದಯಬಾರದೇ

(ರಾಗ ಕಲ್ಯಾಣಿ ಅಟತಾಳ) ಇನ್ನೂ ದಯಬಾರದೇ , ದಾಸನ ಮೇಲೆ ಇನ್ನೂ ದಯಬಾರದೇ ||ಪ|| ಪನ್ನಗಶಯನನೆ ಪಾಲ್ಗಡಲೊಡೆಯನೆ ಕೃಷ್ಣ || ಅ.ಪ|| ನಾನಾದೇಶಗಳಲ್ಲಿ ನಾನಾ ಕಾಲಗಳಲ್ಲಿ ನಾನಾ ಯೋನಿಗಳಲ್ಲಿ ಪುಟ್ಟಿ ನಾನು ನನ್ನದು ಎಂಬ ನರಕದೊಳಗೆ ಬಿದ್ದು ನೀನೇ ಗತಿಯೆಂದು ನಂಬಿದ ದಾಸನ ಮೇಲೆ || ಕಾಮಾದಿ ಷಡ್ವರ್ಗ ಗಾಡಾಂಧಕಾರದಿ ಪಾಮರನಾಗಿಹ ಪಾತಕಿಯು ಮಾಮನೋಹರನೆ ಚಿತ್ತಜಜನಕನೆ ನಾಮವೆ ಗತಿಯೆಂದು ನಂಬಿದ ದಾಸನ ಮೇಲೆ || ಮಾನಸ ವಾಚಾ ಕಾಯದಿ ಮಾಳ್ಪ ಕರ್ಮವು ದಾನವಾಂತಕ ನಿನ್ನಧೀನವಲ್ತೆ ಏನು ಮಾಡಿದರೇನು ಪ್ರಾಣ ನಿನ್ನದು ಸ್ವಾಮಿ ಶ್ರೀನಾಥ ಪುರಂದರವಿಠಲ ದಾಸನ ಮೇಲೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು