ಧರ್ಮಕ್ಕೆ ಕೈ ಬಾರದೀ ಕಾಲ

(ರಾಗ ಪೂರ್ವಿ. ಅಟ ತಾಳ) ಧರ್ಮಕ್ಕೆ ಕೈ ಬಾರದೀ ಕಾಲ , ಪಾಪ - ಕರ್ಮಕ್ಕೆ ಮನಸೋಲೋದೀ ಕಲಿಕಾಲ ದಂಡ ದ್ರೋಹಕೆ ಉಂಟು ಪುಂಡು ಪೋಕರಿಗುಂಟು ಹೆಂಡತಿ ಮಕ್ಕಳಿಗಿಲ್ಲೀ ಕಾಲ ದಿಂಡೇರಿಗುಂಟು ಜಗ ಭಂಡರಿಗುಂಟು ಅಂಡಲೆವರಿಗಿಲ್ಲವೀ ಕಾಲ ಮತ್ತೆ ಸುಳ್ಳರಿಗುಂಟು ನಿತ್ಯ ಹಾದರಕುಂಟು
ದಾಸ ಸಾಹಿತ್ಯ ಪ್ರಕಾರ
ಬರೆದವರು

ದಾಸರ ನಿಂದಿಸಬೇಡ

(ರಾಗ ಮಾರವಿ. ಏಕ ತಾಳ) ದಾಸರ ನಿಂದಿಸಬೇಡ ಮನುಜ , ಹರಿ- ದಾಸರ ನಿಂದಿಸ ಬೇಡ ರಾಮನ ನಿಂದಿಸಿ ರಾವಣ ಕೆಟ್ಟ ವಿಭೀಷಣಗಾಯಿತು ಪಟ್ಟ ಭೂಮಿಯ ಲೋಭದಿ ಕೌರವ ಕೆಟ್ಟ ಧರ್ಮಗೆ ರಾಜ್ಯವ ಬಿಟ್ಟ ಉಡಿಯಲ್ಲಿ ಕೆಂಡವ ಕಟ್ಟಿಕೊಂಡರೆ ಸುಡದಲೆ ಬಿಡುವುದೇನಣ್ಣ ಪೊಡವಿಯ ಜನರಿಗೆ ಬಡತನ ಬಂದರೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಲಿಯುಗದ ಮಹಿಮೆಯು ಕಾಣಬಂತೀಗ

(ರಾಗ ಕಾಂಭೋಜ ಝಂಪೆ ತಾಳ) ಕಲಿಯುಗದ ಮಹಿಮೆಯು ಕಾಣಬಂತೀಗ ಜಲಜಾಕ್ಷ ಮೇಲ್ಗಿರಿಯ ಶ್ರೀವೆಂಕಟೇಶ ||ಪ|| ಹರಿಕಥೆಯನೆ ಬಿಟ್ಟು ಹೀನನುಡಿ ನುಡಿಯುವರು ಗುರುಹಿರಿಯರ ದೂಷಿಸಲು ಎಣಿಸುವರು ಪೊರೆದ ತಾಯ್ತಂದೆಗಳ ಮಾತುಗಳ ಮನ್ನಿಸದೆ ತರುಣಿಯರ ನುಡಿಗೇಳಲಿಚ್ಛಿಸುತ್ತಿಹರು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕರವ ಮುಗಿದನು

(ರಾಗ ಕಾನಡ ತ್ರಿಪುಟತಾಳ ) ಕರವ ಮುಗಿದನು, ಮುಖ್ಯಪ್ರಾಣ ಕರವ ಮುಗಿದನು ||ಪ|| ಕರವ ಮುಗಿದ ಶ್ರೀ ಹರಿಯ ಇದಿರಾಗಿ ದುರುಳರ ಸದೆದು ಶರಣರ ಪೊರೆಯೆಂದು || ಅ.ಪ|| ಜೀವೇಶರೈಕ್ಯವು ಜಗತು ಮಿಥ್ಯವೆಂದು ಈ ವಿಧ ಪೇಳುವ ಮಾಯಿಗಳಳಿಯೆಂದು || ಇಲ್ಲಿ ಮಾತ್ರವು ಭೇದ , ಅಲ್ಲಿ ಒಂದೇ ಎಂಬ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಣ್ಣಾರೆ ಕಂಡೆನಚ್ಯುತನ

(ರಾಗ ಧನಶ್ರೀ ಅಟತಾಳ ) ಕಣ್ಣಾರೆ ಕಂಡೆನಚ್ಯುತನ , ಕಂಚಿ ಪುಣ್ಯಕೋಟಿ ಕರಿರ್‍ಆಜವರದನ ||ಪ|| ವರ ಮಣಿಮುಕುಟಮಸ್ತಕನ , ಸರ್ವ ಸುರಸನಕಾದಿ ವಂದಿತ ಪಾದಯುಗನ ತರುಣಿ ಲಕ್ಷ್ಮಿಮನೋಹರನ , ಪೀತಾಂ- ಬರದುಡುಗೆಯಲ್ಲಿ ರಂಜಿತ ವಿಗ್ರಹನ || ಕಸ್ತೂರಿತಿಲಕನೊಸಲನ , ತೋರ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂಡೆ ನಾ ಗೋವಿಂದನ

(ರಾಗ ಪಂತುವರಾಳಿ ಅಟತಾಳ ) ಕಂಡೆ ನಾ ಗೋವಿಂದನ ಪುಂಡರೀಕಾಕ್ಷ ಪಾಂಡವಪಕ್ಷ ಕೃಷ್ಣನ ||ಪ || ಕೇಶವ ನಾರಾಯಣ ಶ್ರೀಕೃಷ್ಣನ ವಾಸುದೇವ ಅಚ್ಯುತಾನಂತನ ಸಾಸಿರ ನಾಮದ ಶ್ರೀಹೃಷೀಕೇಶನ ಶೇಷಶಯನ ನಮ್ಮ ವಸುದೇವಸುತನ || ಮಾಧವ ಮಧುಸೂದನ ತ್ರಿವಿಕ್ರಮ ಯಾದವಕುಲವಂದ್ಯನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂಡೆ ಕರುಣಾನಿಧಿಯ

(ರಾಗ ನಾದನಾಮಕ್ರಿಯೆ ಆದಿತಾಳ ) ಕಂಡೆ ಕರುಣಾನಿಧಿಯ , ಗಂಗೆಯ ಮಂಡೆಯೊಳಿಟ್ಟ ದೊರೆಯ ||ಪ || ಶಿವನ , ರುಂಡಮಾಲೆ ಸಿರಿಯ , ನೊಸಲೊಳು , ಕೆಂಡಗಣ್ಣಿನ ಬಗೆಯ ಹರನ ||ಅ.ಪ|| ಗಜಚರ್ಮಾಂಬರನ , ಗೌರಿಯ , ವರ ಜಗದೀಶನ, ತ್ರಿಜಗನ್ಮೋಹನ , ತ್ರಿಪುರಾಂತಕ , ತ್ರಿಲೋಚನ ಶಿವನ ಹರನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂಡೆ ಕಂಡೆ ರಾಜರ

(ರಾಗ ಭೈರವಿ ಅಟತಾಳ ) ಕಂಡೆ ಕಂಡೆ , ರಾಜರ , ಕಂಡೆ ಕಂಡೆ ||ಪ|| ಕಂಡೆ ಕಂಡೆನು ಕರುಣನಿಧಿಯನು ಕರಗಳಂಜಲಿ ಮಾಡಿ ಮುಗಿವೆನು ಲಂಡ ಮಾಯಿಗಳ ಗುಂಡಿ ಒಡೆಯಲು- ದ್ದಂಡ ಮಾರುತಿ ಪದಕೆ ಬರುವನ ||ಅ.ಪ|| ಪಂಚ ವೃಂದಾವನದಿ ಮೆರೆಯುವ ಪಂಚಬಾಣನ ಪಿತನ ಸ್ಮರಿಸುವ ಪಂಚನಂದನ ಮುಂದೆ ಆಗುತ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂಡೆ ಕಂಡೆ ಸ್ವಾಮಿಯ

(ರಾಗ ಮುಖಾರಿ ಮಟ್ಟೆತಾಳ) ಕಂಡೆ ಕಂಡೆ ಸ್ವಾಮಿಯ ಬೇಡಿಕೊಂಡೆ ||ಪ|| ಕಂಡೆ ತಿರುಪತಿವೆಂಕಟೇಶನ ಕಾರುಣಾತ್ಮಕ ಸಾರ್ವಭೌಮನ ಕಾಮಿತಾರ್ಥಗಳೀವ ದೇವನ ಕರುಣನಿಧಿ ಎಂದೆನಿಸಿ ಮೆರೆವನ ||ಅ.ಪ|| ಕೋಟಿಸೂರ್ಯ ಪ್ರಕಾಶವೆನಿಪ ಕಿರೀಟವನು ಮಸ್ತಕದಲಿ ಕಂಡೆನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಚ್ಚರಿಕೆ ಎಚ್ಚರಿಕೆ ಮನವೆ

(ರಾಗ ಸೌರಾಷ್ಟ್ರ ಅಟತಾಳ) ಎಚ್ಚರಿಕೆ ಎಚ್ಚರಿಕೆ ಮನವೆ ಅಚ್ಯುತನ ಪಾದಾರವಿಂದದಲ್ಲಿ ||ಪ|| ಬಲ್ಲಿದನು ನೀನೆಂದು ಬಡವರ ಬಾಯ ಬಡೆಯದಿರೆಚ್ಚರಿಕೆ ಎಳ್ಳಷ್ಟು ತಪ್ಪಿದರೆ ಯಮನಾಳು ನರಕಕ್ಕೆ ಎಳೆದೊಯ್ವರೆಚ್ಚರಿಕೆ || ಮಾಡು ದಾನಧರ್ಮ ಪರರುಪಕಾರವ ಮರೆಯದಿರೆಚ್ಚರಿಕೆ , ಇದು
ದಾಸ ಸಾಹಿತ್ಯ ಪ್ರಕಾರ
ಬರೆದವರು