ವಾಸುದೇವನ ನಾಮಾವಳಿಯ
ವಾಸುದೇವನ ನಾಮಾವಳಿಯ. ರಾಗ: ಮುಖಾರಿ. ಝಂಪೆ ತಾಳ.
ಪಲ್ಲವಿ: ವಾಸುದೇವನ ನಾಮಾವಳಿಯ ಕ್ಲಪ್ತಿಯನು ವ್ಯಾಸರಾಯರ ಪರ್ಯಂತ ವರ್ಣಿಸಿದೆ ನಾನು
ಚರಣಗಳು:
೧: ಕೇದಾರ ರಾಮೇಶ್ವರ ಕಿರುಕುಳದ ಭೂತಳದ ಪಾದಾರವಿಂದ ತೀರ್ಥ ಪ್ರತಿ ಕ್ಷೇತ್ರವ
ಆದರದಿ ಲಕ್ಷ ಇಪ್ಪತ್ತೈದು ಸಾವಿರ ಕೃತಿಯ ವೇದ ಶಾಸ್ತ್ರ ಪುರಾಣ ವಿವಿಧ ಸಮ್ಮತಿಯಿಂದ
೨: ಸುಳಾದಿ ಅರುವತ್ತನಾಲ್ಕು ಸಾಸಿರ ಬಹು ವ್ರತವು ನಾಮಾವಳಿಯು ಮೂವತ್ತೈದು ಸಾಸಿರವಾಗಿ
ನಲಿದು ಶ್ವೇತ ದ್ವೀಪ ಅನಂತಾಸನ ವೈಕುಂಠ ಸಕಲೇಶನ ಮಹಿಮೆಯ ಬಣ್ಣಿಸಿದೆನು
೩: ಬ್ರಹ್ಮಲೋಕ ಕೈಲಾಸ ಭರದಿ ದಿಗ್ಪಾಲಕರ ಪ್ರಮೇಯ ಎಂಬತ್ತು ಸಾಸಿರ ಪೇಳಿದೇನು
ಸಮ್ಮತ ಹಲವು ಕಥೆಸಾರ ತೊಂಬತ್ತು ಸಾಸಿರವು ಒಮ್ಮನದಿ ಹೇಳಿದೆನು ಒದಗಿ ಜನರೆಲ್ಲ ಕೇಳಿ
೪: ಆಹ್ನಿಕ ಗುಣ ಜನ್ಮಾಷ್ಟಮಿ ಏಕಾದಶಿ ನಿರ್ಣಯ ಶ್ರುತಿ ಸಹಿತ ವರ್ಣಿಸಿದೇನು
ಅನಘ ಅಗಣಿತ ಮೂರ್ತಿ ಗಂಡಕೀ ಶಿಲೆಯನು ಘನ ಕಲ್ಯಾಣ ದೇಶ ಅರುವತ್ತು ಸಾಸಿರದಿ
೫: ಮಧ್ವರಾಯರ ಮಹಿಮೆ ಮಹಾ ಗುರು ಪರಂಪರೆ ಪ್ರಸಿದ್ಧ ವ್ಯಾಸರಾಯರ ಪರಿಯಂತವು
ಸಿದ್ಧ ತಂತ್ರಸಾರೋಕ್ತ ಸೇವಕರ ತಾರತಮ್ಯ ಉದ್ಧರಿಸಿ ನಾ ನಿಮಗೆ ಊರ್ವಿಯಲಿ ಪೇಳಿಸಿದೆ
೬: ಅವರವರ ಮೂರ್ತಿ ಧ್ಯಾನ ಅವರವರ ವರ ಕೀರ್ತಿಮಾನ ವಿವರದಲಿ ನಾ ನಿಮಗೆ ವಿಸ್ತರಿಸಿದೆ
ಹವಣೆಯಿಂದಿಪ್ಪತ್ತೈದು ಸಾಸಿರ ಕೃತಿಯನ್ನು ಭುವನದಲಿ ಪೇಳಿದೇನು ಬುಧಜನರೆಲ್ಲ ಕೇಳಿ
೭: ಇನ್ತು ನಾಲ್ಕು ಲಕ್ಶ ಎಪ್ಪತ್ತೊಮ್ಬತ್ತು ಸಾಸಿರ ಕೃತಿಯ ಕಂತುಜನಕನ ನಾಮ ಘನ ಮಹಿಮೆಯ
ಸಂತಸದಿ ಶ್ರುತಿ ಸಮ್ಮತಿ ಪ್ರಮಾಣದಲಿ ಶ್ರೀಮಂತ ಪುರಂದರ ವಿಠಲ ವ್ಯಾಸಮುನಿಗೆ ಪೇಳಿಸಿದ
ದಾಸ ಸಾಹಿತ್ಯ ಪ್ರಕಾರ
- Log in to post comments