ಇದು ಭಾಗ್ಯವಿದು ಭಾಗ್ಯವಿದು

ಇದು ಭಾಗ್ಯವಿದು ಭಾಗ್ಯವಿದು

(ರಾಗ ಕಾಂಭೋಜ ಝಂಪೆ ತಾಳ) ಇದು ಭಾಗ್ಯವಿದು ಭಾಗ್ಯವಿದು ಭಾಗ್ಯವಯ್ಯ ||ಪ|| ಪದುಮನಾಭನ ಪಾದಭಜನೆ ಸುಖವಯ್ಯ ||ಅ|| ಕಲ್ಲಾಗಿ ಇರಬೇಕು ಕಠಿಣ ಭವತೊರೆಯೊಳಗೆ ಬಿಲ್ಲಾಗಿ ಇರಬೇಕು ಬಲ್ಲವರೊಳಗೆ ಮೆಲ್ಲನೆ ಮಾಧವನ ಮನವ ಮೆಚ್ಚಿಸಬೆಕು ಬೆಲ್ಲವಾಗಿರಬೇಕು ಬಂಧುಜನರೊಳಗೆ || ಬುದ್ಧಿಯೊಳು ತನುಮನವ ತಿದ್ದಿಕೊಳ್ಳಲುಬೇಕು ಮುದ್ದಾಗಿರಬೇಕು ಮುನಿಯೋಗಿಗಳಿಗೆ ಮಧ್ವಮತಾಬ್ಧಿಯೊಳು ಮೀನಾಗಿರಲುಬೇಕು ಶುದ್ಧನಾಗಿರಬೇಕು ಕರಣತ್ರಯಗಳಲಿ || ವಿಷಯಭೋಗದ ತೃಣಕೆ ಉರಿಯಾಗಿರಲುಬೇಕು ನಿಶಿಹಗಲು ಶ್ರೀಹರಿಯ ನೆನೆಯಬೇಕು ವಸುಧೇಶ ಪುರಂದರವಿಠಲರಾಯನ ಹಸನಾದ ದಾಸರ ಸೇವಿಸಲುಬೇಕು ||
ದಾಸ ಸಾಹಿತ್ಯ ಪ್ರಕಾರ
ಬರೆದವರು