ನೋಡಿರೈ ಕಲ್ಪಭೂರುಹರೆನಿಪರ ನೋಡಿರೈ

(ರಾಗ ಮಧ್ಯಮಾವತಿ ಅಟತಾಳ) ನೋಡಿರೈ ಕಲ್ಪಭೂರುಹರೆನಿಪರ ನೋಡಿರೈ ನಾಡೊಳು ಹರಿದಾಸರು ನರರೆ ||ಪ|| ಹರಿಯ ಪಾದದ ನೀರು ಧರೆಯೆಲ್ಲ ಸಲಹಿತು ಹರಿಯುಂಡ ಚರುವು ಪ್ರಸಾದವಾಯಿತು ಹರಿದಾಸರುಗಳೆಂಬ ನಾಮಧಾರಿಗಳನ್ನು ನರರೆನ್ನಬಹುದೆ ಸುರರಿಗಧಿಕರನ್ನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಲ್ಲಿ ಹರಿಕಥಾ ಪ್ರಸಂಗವೋ

(ರಾಗ ನಾಟ) ಎಲ್ಲಿ ಹರಿಕಥಾ ಪ್ರಸಂಗವೋ ಅಲ್ಲಿ ಗಂಗಾ ಯಮುನಾ ಗೋದಾ ಸರಸ್ವತಿ ಸಿಂಧು| ಎಲ್ಲ ತೀರ್ಥವು ಬಂದು ಎಣೆಯಾಗಿ ನಿಲ್ಲುವವು ವಲ್ಲಭ ಶ್ರೀಪುರಂದರವಿಠಲ ಮೆಚ್ಚುವನು ಜಯಜಯಾ ಹರಿಯೆಂಬುವುದೆ ಸುದಿನವು ಜಯ ಹರಿಯೆಂಬುವುದೆ ತಾರಾಬಲವು ಜಯ ಹರಿಯೆಂಬುವುದೆ ಚಂದ್ರಬಲವು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬುತ್ತಿಯ ಕಟ್ಟೋ

( ರಾಗ ರೇಗುಪ್ತಿ ಆದಿತಾಳ) ಬುತ್ತಿಯ ಕಟ್ಟೋ, ಮನುಜ , ಬುತ್ತಿಯ ಕಟ್ಟೋ ಬುತ್ತಿಯನು ಕಟ್ಟಿದರೆ ಎತ್ತಲಾದರು ಉಣಬಹುದು ||ಪ|| ಧರ್ಮವೆಂಬ ಮಡಿಕೆಯಲ್ಲಿ ನಿರ್ಮಲಮನಗಂಗೆ ತುಂಬಿ ಸಮ್ಮನದುರಿಯ ಹಚ್ಚಿ ಒಮ್ಮಾನಕ್ಯನ್ನ ಬಾಗಿ || ಅರಿವು ಎಂಬ ಅರಿವೆ ಹಾಸಿ ಹರಿವಿಹಾಲ ಮೊಸರ ತಳಿದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಿಡೆ ನಿನ್ನ ಪಾದವ

(ರಾಗ ಮೋಹನ ಅಟತಾಳ ) ಬಿಡೆ ನಿನ್ನ ಪಾದವ ಬಿಂಕವಿನ್ನೇಕೋ ಕೊಡು ಮನದೀಷ್ಟವ ಕೋಪವಿನ್ನೇಕೊ || ನೀರ ಪೊಕ್ಕರು ಬಿಡೆ ಬೆನ್ನಿನೊಳಗೆ, ಬಹು- ಭಾರ ಪೊತ್ತೆನೆಂದು ಬಿದ್ದರು ಬಿಡೆನು ಕೋರೆಯ ಮಸೆಯುತ ಕೆಸರು ಕೊಂಡರು ಬಿಡೆ ಘೋರರೂಪವ ತಾಳಿ ಘುರಿಘುರಿಸಲು ನಾನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹನುಮನ ಮತವೆ ಹರಿಯ ಮತವೋ

(ರಾಗ ಝಂಝೂಟ ಆದಿತಾಳ) ಹನುಮನ ಮತವೆ ಹರಿಯ ಮತವೋ ಹರಿಯ ಮತವೇ ಹನುಮನ ಮತವೋ ||ಪ|| ಹನುಮನು ಒಲಿದರೆ ಹರಿ ತಾನೊಲಿವನು ಹನುಮನು ಮುನಿದರೆ ಹರಿಯು ಮುನಿವ ||ಅ.ಪ|| ಹನುಮನು ಒಲಿಯಲು ಸುಗ್ರೀವನು ಗೆದ್ದ ಹನುಮನು ಮುನಿದಕೆ ವಾಲಿಯು ಬಿದ್ದ || ಹನುಮನು ಒಲಿದ ವಿಭೀಷಣ ಗೆದ್ದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಂಸ ನಿನ್ನಲ್ಲಿ ನೀ ನೋಡೋ

( ರಾಗ ಮೋಹನ ಅಟತಾಳ) ಹಂಸ ನಿನ್ನಲ್ಲಿ ನೀ ನೋಡೋ , ಭವ ಪಾಶಮುಕ್ತನಾಗಿ ಹರಿಯನ್ನು ಕೂಡೋ ||ಪ|| ಸಖಗಳೆರಡುಂಟು ನಿನಗೆ , ನೀ ಹೊಕ್ಕು ಹೋಗುವೆ ಮೂರುಪಂಜರದೊಳಗೆ ಲೆಕ್ಕವಿಲ್ಲದ ಬಿಟ್ಟಿ ನಿನಗೆ , ಈಗ ಸಿಕ್ಕಿದೆಯೋ ಮಾಯಾಪಾಶದೊಳಗೆ || ಹಬ್ಬದ ಸವಿಗೆ ನೀ ಬಂದೆ , ಬಲು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೇಗೆ ಉದ್ಧಾರ ಮಾಡ್ಯಾನು ಶ್ರೀಹರಿ

(ರಾಗ ಆನಂದಭೈರವಿ ಆದಿತಾಳ) ಹೇಗೆ ಉದ್ಧಾರ ಮಾಡ್ಯಾನು ಶ್ರೀಹರಿ ಹೀಗೆ ದಿನಂಗಳೆಂದಳೆದವನು ||ಪ|| ರಾಗದಿಂದಲಿ ಭಾಗವತರಿಗೆ ಬಾಗದೆ ಶಿರ ಹೋಗುವಾತನ ||ಅ.ಪ|| ಅರುಣ ಉದಯಲೆದ್ದು ಹರಿಯ ನೆನೆಯದೆ ಗೊಡ್ಡು ಹರಟೆಗೆ ಹೊತ್ತು ಏರಿಸಿದವನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆರೇನು ಮಾಡುವರು ತಾ ಪಾಪಿಯಾದರೆ

( ರಾಗ ಬೇಹಾಗ್ ಆದಿತಾಳ) ಆರೇನು ಮಾಡುವರು ತಾ ಪಾಪಿಯಾದರೆ ||ಪ|| ಊರೆಲ್ಲ ನೆಂಟರು ಉಣಬಡಿಸುವರ ಕಾಣೆ ||ಅ.ಪ|| ಬಾಯಾರಿ ಹೋದರೆ ಬಾವಿಯ ಜಲಬತ್ತಿತು ತಾಯಿ ಸೋದರರೆಂದು ಹಾರೈಸಿ ಹೋದರೆ ಆಯಾಸದಿಂದಲಿ ಕಣ್ಣಿಗೆ ತೋರದೆ ಮಾಯದಿಂದಲಿ ದೂರ ನಡೆಯುವರು ಜಗದಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶರಣೆಂಬೆ ವಾಣಿ

ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ ||ಪಲ್ಲವಿ|| ವಾಗಭಿಮಾನಿ ವರ ಬ್ರಹ್ಮಾಣಿ ಸುಂದರವೇಣಿ ಸುಚರಿತ್ರಾಣಿ ||ಅನುಪಲ್ಲವಿ|| ಜಗದೊಳು ನಿಮ್ಮ ಪೊಗಳುವೆನಮ್ಮ ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ ||೧|| ಪಾಡುವೆ ಶ್ರುತಿಯ ಬೇಡುವೆ ಮತಿಯ ಪುರಂದರವಿಠಲನ ಸೋದರಸೊಸೆಯ ||೨||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೊಲೆಯ ಹೊರಗಿಹನೆ

(ರಾಗ ಮುಖಾರಿ. ಝಂಪೆ ತಾಳ ) ಹೊಲೆಯ ಹೊರಗಿಹನೆ ಊರೊಳಗಿಲ್ಲವೆ ಶ್ರೀಹರಿಯ ಸ್ಮರಣೆಯನು ಬಲ್ಲವರು ಪೇಳಿ ಶೀಲವನು ಕೈಕೊಂಡು ನಡೆಸದಾತನೆ ಹೊಲೆಯ ಪೇಳಿದ ಹರಿ ಕಥೆಯ ಕೇಳದವ ಹೊಲೆಯ ಆಳಾಗಿ ಅರಸಂಗೆ ಕೇಡು ಬಗೆವವ ಹೊಲೆಯ ಸೂಳೆಯನು ಕಾಮಿಸುವ ಶುದ್ಧ ಹೊಲೆಯ
ದಾಸ ಸಾಹಿತ್ಯ ಪ್ರಕಾರ
ಬರೆದವರು