ಇದು ಏನಂಗ ಮೋಹನಾಂಗ

(ರಾಗ ದರ್ಬಾರ್ ಅಟತಾಳ) ಇದು ಏನಂಗ ಮೋಹನಾಂಗ ||ಪ|| ಮದನಜನಕ ತೊರವೆಯ ನರಸಿಂಗ ||ಅ|| ಸುರರು ಸ್ತುತಿಸಿ ಕರೆಯೆ ತುಟಿಯ ಮಿಸುಕದವ ಬರಿದೆ ಏತಕೆ ಬಾಯ ತೆರೆದೆ ಹೇಳೊಮ್ಮೆ || ವರನೀಲ ಮುತ್ತುಮಾಣಿಕ ಹಾರಗಳಿರೆ ಕೊರಳಲಿ ಕರುಳಮಾಲೆಯ ಹಾಕಿ ಮೆರೆವುದು || ತೊರವೆಯ ನರಹರಿ ಪುರಂದರವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇದಿರ್ಯಾರೊ ಗುರುವೆ

( ರಾಗ ಆನಂದಭೈರವಿ ಏಕತಾಳ) ಇದಿರ್ಯಾರೊ ಗುರುವೆ ಸಮರ್ಯಾರೊ ||ಪ|| ಮದನಜನಕ ಪ್ರಿಯ ಮಧ್ವರಾಯ ||ಅ|| ಸನ್ನುತಮಹಿಮ ಪ್ರಸನ್ನವದನ ನಿನ- ಗನ್ಯನಲ್ಲವೋ ನೀ ಎನ್ನ ರಕ್ಷಿಸಬೇಕೋ ನಿನ್ನ ನೋಡಿದವರು ಧನ್ಯರಾಗುವರು ನಿನ್ನ ದಯಾಮೂರ್ತಿ ಮನ್ನಿಸಿನೋಡೊ || ದುರ್ಜನರ ಗರ್ಜನದಿಂದ ಓಡಿಸಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಂದು ನಿನ್ನ ಮರೆಯ ಹೊಕ್ಕೆ

(ರಾಗ ಖರಹರ ಮಟ್ಟೆತಾಳ ) ಇಂದು ನಿನ್ನ ಮರೆಯ ಹೊಕ್ಕೆ ವೆಂಕಟೇಶನೆ ಎಂದಿಗಾದರೆನ್ನ ಕಾಯೊ ಶ್ರೀನಿವಾಸನೆ || ಶೇಷಗಿರಿಯವಾಸ ಶ್ರೀಶ ದೋಷರಹಿತನೆ ಏಸು ದಿನಕು ನಿನ್ನ ಪಾದದಾಸನು ನಾನೆ ಕ್ಲೇಶಗೈಸದಿರು ಎನ್ನ ಸ್ವಾಮಿಯು ನೀನೆ || ಕಮಲನಯನ ಕಾಮಜನಕ ಕರುಣವಾರಿಧೇ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಂಥಾ ಹೆಣ್ಣಿನ ನಾನೆಲ್ಲ್ಯೂ ಕಾಣೆನೊ

(ರಾಗ ಭೈರವಿ ಆದಿತಾಳ) ಇಂಥಾ ಹೆಣ್ಣಿನ ನಾನೆಲ್ಲ್ಯೂ ಕಾಣೆನೊ ಹೊಂತಕಾರಿ ಕಾಣಿರೋ ||ಪ|| ಸಂತತ ಸುರರಿಗೆ ಅಮೃತವನುಣಿಸಿದ ಪಂಕ್ತಿಯೊಳಗೆ ಪರವಂಚನೆ ಮಾಡಿದ ||ಅ|| ಮಂದರಗಿರಿ ತಂದು ಸಿಂಧುವಿನೊಳಗಿಟ್ಟು ಚಂದದಿ ಕಡೆದು ಅಮೃತವ ತೆಗೆದು ಇಂದುಮುಖಿಯೆ ನೀ ಬಡಿಸೆಂದು ಕೊಟ್ಟರೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಂತು ವೇದಾಂತಗಳಲ್ಲಿ

(ರಾಗ ಭೈರವಿ ಆದಿತಾಳ) ಇಂತು ವೇದಾಂತಗಳಲ್ಲಿ ಸುರರು ನಿನ್ನ ಎಣಿಸುವರಹುದಹುದೈ ಅಂತ ತಿಳಿಯಲು ಬ್ರಹ್ಮಾದ್ಯರಿಗೆ ಅಳವಲ್ಲಹುದಹುದೈ || ರಂಡೆಯ ಮಕ್ಕಳು ಕುಂಡಗೋಳಕರು ರಾಯರು ನಿನ್ನಿಂದೈ ಪಂಡಿತರಾದ ದ್ವಿಜರಿಗೆ ಭಿಕ್ಷಾಪಾತ್ರವು ನಿನ್ನಿಂದೈ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಲಿದಾಡೆ ಎನ್ನ ನಾಲಿಗೆ ಮೇಲೆ

(ರಾಗ ಮುಖಾರಿ ಆದಿ ತಾಳ ) ನಲಿದಾಡೆ ಎನ್ನ ನಾಲಿಗೆ ಮೇಲೆ, ಸರಸ್ವತಿ ದೇವಿ ಕುಣಿದಾಡೆ ಎನ್ನ ನಾಲಿಗೆ ಮೇಲೆ ||ಪ|| ಸಲಿಲಜೋದ್ಭವನ ವದನನಿಲಯಳೆ ಇಳೆಯೊಳಪ್ರತಿಮ ಗುಣಗಣಾಂಬುಧಿ ತಾಯೆ ||ಅ.ಪ|| ಘಲು ಘಲು ಘಲು ಗೆಜ್ಜೆಯ ನಾದ ಭಳಿಭಳಿರೆ ನಿಮ್ಮ ಹೊಳೆವ ಬೆರಳುಂಗುರ ಕಿಣಿ ಕಿಣಿ ನಾದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎನ್ನ ಮನದ ಡೊಂಕ ತಿದ್ದಿಸೊ

(ರಾಗ ಪಂತುವರಾಳಿ ಅಟತಾಳ) ಎನ್ನ ಮನದ ಡೊಂಕ ತಿದ್ದಿಸೋ, ಶ್ರೀನಿವಾಸ ಎನ್ನ ಮನದ ಡೊಂಕ ತಿದ್ದಿಸೋ ||ಪ|| ಎನ್ನ ಮನದ ಡೊಂಕ ತಿದ್ದಿಸಿ ನಿನ್ನ ಸೇವಕನಾದ ಮೇಲೆ ಇನ್ನು ಸಂಶಯವೇಕೆ ಕೃಷ್ಣ ನಿನ್ನ ಚರಣದಲ್ಲಿ ಸೇರಿಸೋ ||ಅ.ಪ|| ಉದಯವಾದರೆ ಊಟದ ಚಿಂತೆ ಅದರ ಮೇಲೆ ಭೋಗದ ಚಿಂತೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೆಮ್ಮೆಯಾಡಲು ಬೇಡಿ

(ರಾಗ ಮುಖಾರಿ ಝಂಪೆ ತಾಳ) ಹೆಮ್ಮೆಯಾಡಲು ಬೇಡಿ, ಹೆಮ್ಮೆ ನೀಡಾಡುವುದು ಹೆಮ್ಮೆಯಿಂದಲಿ ನೀವು ಕೆಡಬೇಡಿರಯ್ಯ ||ಪ|| ಮುನ್ನೊಮ್ಮೆ ರಾವಣನು ಜನಕನ ಸಭೆಯಲ್ಲಿ ತನ್ನಳವನರಿಯದೆ ಧನುವೆತ್ತಲು ಉನ್ನತದ ಧನು ಎದೆಯ ಮೇಲೆ ಬೀಳಲು, ಬಲು ಬನ್ನಬಟ್ಟುದ ನೀವು ಕೇಳಿ ಬಲ್ಲಿರಿಯಾ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹನುಮಂತ ದೇವ ನಮೋ

(ರಾಗ: ಭೂಪಾಳಿ. ಏಕ ತಾಳ) ಹನುಮಂತ ದೇವ ನಮೋ ||ಪ|| ವನಧಿಯನು ದಾಟಿ ದಾನವರ ದಂಡಿಸಿದ ||ಅ.ಪ|| ಅಂಜನೆಯ ಗರ್ಭ ಪುಣ್ಯೋದಯನೆಂದೆನಿಪೆ ಕಂಜಸಖ ಮಂಡಲಕೆ ಕೈದುಡುಕಿದೆ ಭುಂಜಿಸಿ ಇರಲು ಜನಂಗಳನು ನಡುಗಿಸಿದೆ ಭಂಜರತ್ಮಕೆ ನಿನಗೆ ಸರಿ ಯಾರು ಗುರುವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹನುಮ ಭೀಮ ಮಧ್ವ ಮುನಿಯ

(ರಾಗ: ಮೋಹನ ಏಕ ತಾಳ) ಹನುಮ ಭೀಮ ಮಧ್ವ ಮುನಿಯ ನೆನೆದು ಬದುಕಿರೋ ||ಪ|| ಅನುಮಾನಂಗಳಿಲ್ಲದಲೆ ಮನೋಭೀಷ್ಟಂಗಳನೀವ ||ಅ.ಪ|| ಪ್ರಾಣಿಗಳ ಪ್ರಾಣೋದ್ಧಾರ ಜೀವರೋತ್ತಮರು ಮತ್ತು ಪ್ರಾಣಾಪಾನ ವ್ಯಾನೋದಾನ ಸಮಾನರೊಳುತ್ಕೃಷ್ಟ ಕಾಣಿರೇನೊ ಕಾಯ ಕರ್ಮ ಚಕ್ಷುರಿಂದ್ರಿಯಗಳಿಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು