ಈಗ ಮಾಡೆಲೋ ರಾಮಧ್ಯಾನವ

ಈಗ ಮಾಡೆಲೋ ರಾಮಧ್ಯಾನವ

(ರಾಗ ಕಾಂಭೋಜ ಝಂಪೆತಾಳ) ಈಗ ಮಾಡೆಲೋ ರಾಮಧ್ಯಾನವ , ನೀ ಮೂಕನಾಗಿರಬೇಡ ಎಲೆ ಮಾನವ ||ಪ|| ಕಾಲನ ದೂತರು ಕರೆವಾಗ ನೀ ಕಾಲಗೆಟ್ಟು ಕಣ್ಣ ಬಿಡುವಾಗ ನಾಲಗೆ ಸೆಳಕೊಂಡು ಜ್ಞಾನಗೆಟ್ಟಿರುವಾಗ ನೀಲವರ್ಣನ ಧ್ಯಾನ ಬರುವುದೇನಯ್ಯ || ಸತಿಸುತರೆಂಬ ಸಂದಣಿಯೊಳು ನೀ ಮತಿಭ್ರಷ್ಟನಾಗಿ ಮನದೊಳು ಸತತ ಶ್ರೀಲಕ್ಷ್ಮಿಯ ಪತಿಯನ್ನು ನೆನೆದರೆ ಸ- ದ್ಗತಿಯ ಸನ್ಮಾರ್ಗ ಪಾರಂಪದವಿ ಈವನಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು