ಗೋವಿಂದಾ ನಮೋ

( ರಾಗ ಆನಂದಭೈರವಿ. ತ್ರಿಪುಟ ತಾಳ) ಗೋವಿಂದಾ ನಮೋ ಗೋವಿಂದಾ ನಮೋ ಗೋವಿಂದಾ ನಾರಾಯಣ ಗೋವರ್ಧನ ಗಿರಿಯನೆತ್ತಿದ ಗೋವಿಂದಾ ನಮ್ಮ ರಕ್ಷಿಸೈ || ಮಂಚ ಬಾರದು ಮಡದಿ ಬಾರಳು ಕಂಚು ಕನ್ನಡಿ ಬಾರದು ಸಂಚಿತಾರ್ಥದ ದ್ರವ್ಯ ಬಾರದು ಮುಂಚೆ ಮಾಡಿದ ಧರ್ಮವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗೋಪಿಯ ಭಾಗ್ಯವಿದು

( ರಾಗ ಬೆಹಾಗ್. ಆದಿ ತಾಳ) ಗೋಪಿಯ ಭಾಗ್ಯವಿದು ಶ್ರೀಪತಿ ತಾ ಶಿಶು ರೂಪಿನಲ್ಲಿರುವುದು ||ಪ|| ಕಡು ಮುದ್ದು ರಂಗನ ತೊಡೆಯ ಮೇಲೆತ್ತುತ ಜಡೆಯ ಹೆಣೆದು ಹೂ ಮುಡಿಸಿ ಬೇಗ ಬಿಡದೆ ಮುತ್ತಿನ ಚೆಂದರಳೆಲೆಯನು ಸಡಗರಿಂದಲಂಕರಿಸಿದಳು || ನಿತ್ಯನಿರ್ಮಲನಿಗೆ ನೀರನೆರೆದು ತಂ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗೋಪಿ ನಿನ್ನ ಮಗಗಂಜುವೆನಮ್ಮ

( ರಾಗ ಕೇದಾರಗೌಳ. ಆದಿ ತಾಳ) ಗೋಪಿ ನಿನ್ನ ಮಗಗಂಜುವೆನಮ್ಮ ಪರಮಾತ್ಮನು ಬೆಣ್ಣೆಯ ಬೇಡುತ್ತಲಿಹನೆ ಗೋಪಿ ನಿನ್ನ ಮಗಗಂಜುವೆನಮ್ಮ ||ಪ|| ಕಡೆವುತ್ತ ಪಾಡಲು ಅತಿಶಯ ಹರುಷದಿ ಕಡಗ ಪೆಂಡೆಯ ಕಾಲ್ ಝಣರೆನುತ ಕಡೆಯದೆ ಕೈಯಾಡದೆ ಸುಮ್ಮನಿರಲು ತುಡುಕಿ ಬೆಣ್ಣೆಯ ಮೆದ್ದು ಓಡಿ ಹೋಹ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗೋಪಿ ನಿನ್ನ ಮಗಗಾಗಿ

( ರಾಗ ನಾದನಾಮಕ್ರಿಯಾ. ಆದಿ ತಾಳ) ಗೋಪಿ ನಿನ್ನ ಮಗಗಾಗಿ ಕೇರಿಯ ಬಿಟ್ಟು ಪೋಪೆವು ಬೆಳಗಾಗೆ ||ಪ|| ಮಕ್ಕಳನಾಡಗೊಡ, ಮನೆಯ ಪೊಕ್ಕು ಉಕ್ಕುವ ಹಾಲು ಬಿಡ ಘಕ್ಕನೆ ಕೊಂಡೋಡುವ, ಬೆನ್ನಟ್ಟಲು ನಕ್ಕು ತಾ ಸೆರಗ ಬಿಡ || ಮೊಸರನೆಲ್ಲವ ಸುರಿವ, ನೆಲುವಿನ ಹೊಸ ಬೆಣ್ಣೆಗೆ ಹಾರುವ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗೊಲ್ಲತೇರೆಲ್ಲ ಕೂಡಿ

( ರಾಗ ನಾದನಾಮಕ್ರಿಯ. ಏಕ ತಾಳ) ಗೊಲ್ಲತೇರಲ್ಲ ಕೂಡಿ ಎನ್ನ ಮೇಲೆ ಇಲ್ಲದ ಸುದ್ದಿ ಪುಟ್ಟಿಸಿ ||ಪ|| ಕಳ್ಳನೆಂದು ದೂರುತಾರೆ ಅಮ್ಮಯ್ಯಾ, ನೀ ಕೇಳಬೇಕೆಂದಾಬಗೆಯ ||ಅ|| ಹರವಿಯ ಹಾಲು ಕುಡಿಯಲು, ಎನ್ನ ಹೊಟ್ಟೆ ಕೆರೆಯೇನೆ ಕೇಳೆ ಅಮ್ಮಯ್ಯ ಕರೆದು ಅಣ್ಣನ ಕೇಳು, ಉಂಟಾದರೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗೋಕುಲದೊಳು ನಿನ್ನ ಮಗನ ಹಾವಳಿ

( ರಾಗ ಸೌರಾಷ್ಟ್ರ. ಅಟ ತಾಳ) ಗೋಕುಲದೊಳು ನಿನ್ನ ಮಗನ ಹಾವಳಿ ಘನವಾಯಿತಮ್ಮ ಜೋಕೆ ಮಾಡಿಕೊ ಇಂಥ ದುರುಳತನಕೆ ನಾವು ನಿಲ್ಲೆವಮ್ಮ ||ಪ|| ಬಾಲರ ಒಡಗೂಡಿ ಬಂದೆಮ್ಮ ಮನೆಗಳ ಪೊಗುವನಮ್ಮ , ಒರಳ ಮೇಲೇರಿ ನೆಲುವಿನ ಮೇಲಿದ್ದ ಬೆಣ್ಣೆಯ ಮೆಲುವನಮ್ಮ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗೋಕುಲದೊಳಗಿರಲಾರೆವಮ್ಮ

( ರಾಗ ಆನಂದಭೈರವಿ ಅಟ ತಾಳ) ಗೋಕುಲದೊಳಗಿರಲಾರೆವಮ್ಮ ಗೋಪ್ಯಮ್ಮ ಕೇಳೆ ಸಾಕು ಸಾಕು ನಮಗೇಕೀ ವ್ರಜವು ಆ ಕೃಷ್ಣನ ಕಾಟದಿ ||ಪ || ಹಾಲು ಮೊಸರು ಕದ್ದರೆ ಕದಿಲಿ ಗೋಪ್ಯಮ್ಮ ಕೇಳೆ ಮೇಲಿಟ್ಟ ಬೆಣ್ಣೆ ಮೆದ್ದರೆ ಮೆಲಲಿ ಗೋಪ್ಯಮ್ಮ ಕೇಳೀ- ರೇಳು ಭುವನದೊಳೋಲಾಡುತ್ತಿರಲಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗೋಕುಲದಲಿ ನಾನಿರಲಾರೆ

( ರಾಗ ವಸಂತಭೈರವಿ. ಆದಿ ತಾಳ) ಗೋಕುಲದಲಿ ನಾನಿರಲಾರೆ, ಗೋಪ್ಯಮ್ಮ ಕೇಳೇ ||ಪ || ಹಾಲು ಮೊಸರ ನಾನೊಲ್ಲೆಂಬೆ ಭರದಿಂದಲಿ ಬಂದು ಕಾಲಲಿ ಬಿದ್ದು ಕುಡಿಸುವರು ||ಅ || ತನುವಿಗೆ ಬಲವೆಂದು ಬೆಳೆಯಬೇಕೆಂದು ಒಳಕಳುಹುತ ಕಳವಿನಿಕ್ಕಿಲಿ ಮಗುವು ಒಳಗಿನ ಗುಟ್ಟು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೊಬ್ಬಿರಲು ಬೇಡವೋ

( ರಾಗ ಪೂರ್ವಿ. ಅಟ ತಾಳ) ಕೊಬ್ಬಿರಲು ಬೇಡವೋ, ಹೇ ಮನುಜ ||ಪ || ಸಿರಿ ಬಂದ ಕಾಲಕೆ ಬಲು ಗರ್ವ ತೋರುತ್ತ ಬಿರಿ ಬಿರಿ ಕಣ್ಣು ಮೇಲಕ್ಕೆ ನೋಡುವರು ಸಿರಿ ಹೋದ ಮರುದಿನ ಬಡತನ ಬಂದರೆ ಹುರುಕು ಕಜ್ಜಿಯ ತುರಿಸಿ ತಿರುಗುವರಯ್ಯ || ಒಡವೆ ವಸ್ತುಗಳಿಟ್ಟು ಬಡಿವಾರ ಮಾಡುವರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗೆದ್ದೆಯೋ ಹನುಮಂತ

( ರಾಗ ಕಲ್ಯಾಣಿ. ಅಟ ತಾಳ) ಗೆದ್ದೆಯೋ ಹನುಮಂತ, ಅಸುರರ ಒದ್ದ್ಯೋ ನೀ ಬಲವಂತ ||ಪ || ಬದ್ಧಾಂಜಲಿಯಿಂದ ರಘುಪತಿಪಾದವ ಹೃದ್ಯದಿ ಭಜನೆ ಮಾಡುವ ಬುದ್ಧಿವಂತ ||ಅ || ಅಂಜನೆ ಸುತನೀತ, ಲಂಕಾಪುರದಿ ಅಕ್ಷಯನ ಕೊಂದಾತ ಕಂಜಾಕ್ಷಿ ಸೀತೆತ್ಯ ಕಂಡು ಮುದ್ರಿಕೆಯಿತ್ತು
ದಾಸ ಸಾಹಿತ್ಯ ಪ್ರಕಾರ
ಬರೆದವರು