ಗೋಪಿ ನಿನ್ನ ಮಗಗಾಗಿ

ಗೋಪಿ ನಿನ್ನ ಮಗಗಾಗಿ

( ರಾಗ ನಾದನಾಮಕ್ರಿಯಾ. ಆದಿ ತಾಳ) ಗೋಪಿ ನಿನ್ನ ಮಗಗಾಗಿ ಕೇರಿಯ ಬಿಟ್ಟು ಪೋಪೆವು ಬೆಳಗಾಗೆ ||ಪ|| ಮಕ್ಕಳನಾಡಗೊಡ, ಮನೆಯ ಪೊಕ್ಕು ಉಕ್ಕುವ ಹಾಲು ಬಿಡ ಘಕ್ಕನೆ ಕೊಂಡೋಡುವ, ಬೆನ್ನಟ್ಟಲು ನಕ್ಕು ತಾ ಸೆರಗ ಬಿಡ || ಮೊಸರನೆಲ್ಲವ ಸುರಿವ, ನೆಲುವಿನ ಹೊಸ ಬೆಣ್ಣೆಗೆ ಹಾರುವ ಹಸುಳೆರೆಲ್ಲರಿಗೆ ಈವ, ಕೃಷ್ಣಯ್ಯ ತಾ ಮುಸುಕಿನೊಳಗೆ ಜಾರುವ || ಅಂಥಿಂಥವನಲ್ಲಮ್ಮ ಈ ಮಗ ಜಗದಂತರ್ಯಾಮಿ ಕಾಣಮ್ಮ ಎಂತು ತಪ್ಪಿಸಿಕೊಂಡೆವು ನಾವು ಶ್ರೀ- ಕಾಂತ ಪುರಂದರವಿಠಲನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು