ಗರುವವ್ಯಾತಕೊ ನಿನಗೆ

( ರಾಗ ಕಾಂಭೋಜ. ಝಂಪೆ ತಾಳ) ಗರುವವ್ಯಾತಕೊ ನಿನಗೆ ಪಾಮರ ಮನುಜನೆ ಧರೆಯೊಳಗೆ ಕುರುಪತಿಗೆ ಸರಿಯೆನ್ನಬಹುದೆ ||ಪ || ಬಲದಲ್ಲಿ ಹಲಧರನೆ ಛಲದಲ್ಲಿ ರಾವಣನೆ ಕುಲದಲ್ಲಿ ವಸಿಷ್ಟ ಗೌತಮನೆ ನೆಲೆಯಲ್ಲಿ ಭೃಗು ಮುನಿಯೆ ನೇಮದಲಿ ಗಾಂಗೇಯನೆ ಒಲುಮೆಯಲಿ ವಾಲ್ಮೀಕಿ ಮುನಿಯೇನೊ ನೀನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗರುವ ಗಂಭೀರ ನಾಯಕಾ

( ರಾಗ ಯದುಕುಲಕಾಂಭೋಜಿ(ಯರಕಲಕಾಂಭೋಜ?) . ಝಂಪೆ ತಾಳ) ಗರುವ ಗಂಭೀರ ನಾಯಕಾ ಹರಿಯೆ ||ಪ || ಹರಿಯೆ ಹಳಚಿಕೆವುಳ್ಳನಲ್ಲವೆ ಸುರೂಪಿ ಸಮಗುಣನು ನೀನಲ್ಲವೆ ಸಿರಿವಂತ ಸರ್ವಾಕಳಂಕ ನೀನಲ್ಲವೆ ಕರೆಸಿಕೊಳ್ಳೆಯೇಕೆನ್ನನು ಹರಿಯೆ || ವೇಳೆಯಲ್ಲವೆ ಅನು ಬಂದುದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗರುಡ ಗಮನ ಬಂದನೋ

( ರಾಗ ಬಿಲಹರಿ. ಅಟ ತಾಳ) ಗರುಡ ಗಮನ ಬಂದನೋ, ನೋಡಿರೋ ಬೇಗ ||ಪ || ಗರುಡ ಗಮನ ಬಂದ ಧರಣಿಯಿಂದೊಪ್ಪುತ ಕರೆದು ಬಾರೆನ್ನುತ ವರಗಳ ಬೀರುತ ||ಅ || ಎನ್ನ ರಕ್ಷಿಪ ದೊರೆ ಇಲ್ಲಿಗೆ ತಾ ಬಂದ ಚಿನ್ನವ ಪೋಲುವ ವಿಹಂಗಜ ರಥದಲಿ ಘನ್ನಮಹಿಮ ಬಂದ ಭಿನ್ನ ಮೂರುತಿ ಬಂದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗಂಗಾ ತೀರದ ಮನೆ ನಮ್ಮದು

( ರಾಗ ಕಾಂಭೋಜಿ. ಅಟ ತಾಳ) ಗಂಗಾ ತೀರದ ಮನೆ ನಮ್ಮದು, ಕಾಶಿ ಬಿಂದುಮಾಧವನಲ್ಲಿ ಇರುವುದು ಮನೆ ಪಂಚಾ ||ಪ || ಆವಾವ ಕಾಲದ ಆನಂದರಮನೆ ತಾವರೆ ತಳಿತದ ನದಿಯ ಮನೆ ಆವಾಗ ಕಮಲಜ ಅವತರಿಸಿದ ಮನೆ ಆ ವೇದಂಗಳಿಗೆಲ್ಲ ತೌರುಮನೆ ಪಂಚಾ || ಚಿತ್ರವಳಿದಲ್ಲಿಯ ಮನೆ ಚಿನ್ಮಯ ರೂಪದ ಮನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗಂಡ ಬಂದ ಹೇಗೆ ಮಾಡಲೇ

( ರಾಗ ನಾದನಾಮಕ್ರಿಯ. ಛಾಪು ತಾಳ) ಗಂಡ ಬಂದ ಹೇಗೆ ಮಾಡಲೇ, ಅಯ್ಯಯ್ಯೋ ಪಾಪಿ ||ಪ || ಪಂಚಮಹಾ ಪಾತಕಿ ಗಂಡ, ಹೊಂಚಿಕ್ಕಿ ನೋಡಿಕೊಂಡು ವಂಚನೆಯಿಂದಲಿ ಗುಡುಗು-ಮಿಂಚಿನಂತೆ ಬಂದು ನಿಂತ ಮಂಚದ ಕೆಳಗಾರು ಹೊಕ್ಕೊಳ್ಳೊ, ನಿಧಿ ಹಿಡಿಸುವಂಥ ಸಂಚಿಯೊಳಗಾದರು ಕೂಡೆಲೊ, ಧಾನ್ಯದ ದೊಡ್ಡ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗಜುಗನಾಡುತಲಿರ್ದನು

( ರಾಗ ಕೇದಾರಗೌಳ. ಛಾಪು ತಾಳ) ಗಜುಗನಾಡುತಲಿರ್ದನು ನಮ್ಮ ರಂಗ ||ಪ|| ವ್ರಜದ ಮಕ್ಕಳ ಕೂಡ ಹರುಷದಿಂದಲಿ ಬಲು ||ಅ || ಒಂದನ್ನೆ ಹಾರಿಸಿದ ವೇಗದಿ ಮ- ತ್ತೊಂದರಿಂದಲಿ ತಾ ಬಡೆದ ಒಂದೆ ಬಾರಿಗೆ ಎಲ್ಲ ಗಜುಗವ ಗೆಲಿದನು || ಬಚ್ಚಿಟ್ಟ ಗಜ್ಜುಗವ ಹುಡುಕೆಂದು ಅಚ್ಯುತ ನಗುತ ನಿಂತ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗುಣವಾಯಿತೆನ್ನ ಭವರೋಗ

( ರಾಗ ಹಿಂದುಸ್ಥಾನಿಕಾಪಿ. ಆದಿತಾಳ) ಗುಣವಾಯಿತೆನ್ನ ಭವರೋಗ ಕೃಷ್ಣನೆಂಬ ವೈದ್ಯನು ದೊರಕಿದನು ಗುಣವಾಗುವವರಿಗೆ ಎಣೆಯಿಲ್ಲ ಗುಣವಂತರಾಗುವರು ಭವದೆಲ್ಲ ||ಪ|| ಸಂತತ ಹರಿಭಕ್ತಿಯನು ಪಾನ ಸಂತತ ಗುರುಭಕ್ತಿ ಮರುಪಾನ ಸಂತತ ಈಶ್ವರನ ಕಠಿನ ಪಥ್ಯ ಸಂತತ ಕೀರ್ತನ ಉಷ್ಣೋದಕ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಲ್ಲಿ ವಿರಾಟಪೂಜೆ (ಹೃದಯಕಮಲ ಮಾನಸ ಪೂಜೆ)

( ರಾಗ ಭೈರವಿ. ಝಂಪೆ ತಾಳ) ಎಲ್ಲಿ ವಿರಾಟಪೂಜೆ ಹೃದಯಕಮಲ ಅಷ್ಟದಳ ಹೃಷೀಕೇಶ ನಾರಾಯಣಾ ಹಂಸಗಮನ ||ಪ|| ತುಂದಿ ತುದಿಯಲ್ಲಿ ಕೇಸರದಲ್ಲಿ ಧುಮುಕಿ ಕರ್ಣಿಕಾನಾಳದಲಿ ಕಮಲ ಮೂಲ ನಾಭಿಗೆ ಹೃತ್ಕಮಲಕ್ಕೆಲ್ಲ ಹತ್ತು ಅಂಗುಷ್ಟ ಕಮಲ ಕೋಮಲನಾಳ ಕಮಲ ಅಧೋಮುಖ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನು ಬರೆದೆಯೊ ಬ್ರಹ್ಮ

( ರಾಗ ತೋಡಿ. ಆದಿ ತಾಳ) ಏನು ಬರೆದೆಯೊ ಬ್ರಹ್ಮ ಎಷ್ಟು ನಿರ್ದಯವೋ ||ಪ|| ಅಭಿ- ಮಾನವನು ತೊರೆದು ಪರರನ್ನು ಬೇಡುವುದ ||ಅ|| ಗೇಣೊಡಲು ಪೊರೆವುದಕೆ ಪೋಗಿ ಪರರನು ಪಂಚ- ಬಾಣಸಮರೂಪ ನೀನೆಂದು ಪೋಗಳೆ ಆನೆ ನಿನ್ನಾಣಿಲ್ಲ ನಾಳೆ ಬಾರೆಂದೆನಲು ಗಾಣ ತಿರುಗುವ ಎತ್ತಿನಂತೆ ಬಳಲುವುದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನೆಂದಳಯ್ಯ ಸೀತೆ

( ರಾಗ ನಾದನಾಮಕ್ರಿಯಾ. ಝಂಪೆ ತಾಳ) ಏನೆಂದಳಯ್ಯ ಸೀತೆ, ಹನುಮ ನಿನಗೆ ಏನ್ನುಡಿದಿಹಳು ಪ್ರೀತೆ ||ಪ|| ಚೆನ್ನಿಗ ಚೆಲುವನೆ ಕೇಳೋ , ಜಾನಕಿಯು ನಿನ್ನ ಬಿಟ್ಟಿರಲಾರಳು ನಿನ್ನಿರುಳು ನೀ ನೀಲಕುಂತಳೆ ಕನಸಿನಲಿ ಚೆನ್ನಾಗಿ ನಿಂತಿಹಳೊ ರಾಮ || ಸ್ವಾಮಿರಾಯರ ಪಾದವ, ಎಲೆ ಕಪಿಯೆ ನಾನೆಂತು ಬಿಟ್ಟಿರಲಿ ದಾನವನ ಶಿರವರಿದು ಲಂಕೆಯ ಪುರವನ್ನು ದಹನವನು ಮಾಡೆಂದಳೊ ರಾಮ || ಎಲ್ಲಿಂದ ಬಂದೆ ಹನುಮ, ನೀನೆಂದ ಸೊಲ್ಲ ಕೇಳೋ ಪ್ರೇಮ ವಲ್ಲಭ ಕಾಣದೆ ನಿಮಿಷ ಯುಗವಾಗಿದೆ ನಿಲ್ಲಲಾರೆ ಎಂದಳು ರಾಮ || ಚಿಂತಿಸುತ ಬಡವಾದಳೊ, ಜಾನಕಿಯು ಕಾಂತೆ ತಾನಾಗಿಹಳೊ ಅಂತರಂಗದಿ ಅನಂತ ಅನಂತ ಎನುತ ಭ್ರಾಂತಿಲಿ ಮರುಗುತಿಹಳೊ ರಾಮ|| ಅಂಜನೆಯತನಯ ಕೇಳೋ, ನೀ ಪೋಗೆ ಕಂಜನಾಭನಿಗೆ ಹೇಳೊ ಕುಂಜರನ ಕಾಯ್ದ ಶ್ರೀಪುರಂದರವಿಠಲನ್ನ
ದಾಸ ಸಾಹಿತ್ಯ ಪ್ರಕಾರ
ಬರೆದವರು