ಗೋಕುಲದಲಿ ನಾನಿರಲಾರೆ

ಗೋಕುಲದಲಿ ನಾನಿರಲಾರೆ

( ರಾಗ ವಸಂತಭೈರವಿ. ಆದಿ ತಾಳ) ಗೋಕುಲದಲಿ ನಾನಿರಲಾರೆ, ಗೋಪ್ಯಮ್ಮ ಕೇಳೇ ||ಪ || ಹಾಲು ಮೊಸರ ನಾನೊಲ್ಲೆಂಬೆ ಭರದಿಂದಲಿ ಬಂದು ಕಾಲಲಿ ಬಿದ್ದು ಕುಡಿಸುವರು ||ಅ || ತನುವಿಗೆ ಬಲವೆಂದು ಬೆಳೆಯಬೇಕೆಂದು ಒಳಕಳುಹುತ ಕಳವಿನಿಕ್ಕಿಲಿ ಮಗುವು ಒಳಗಿನ ಗುಟ್ಟು ಬೈಲ ಮಾಡಿ ನಮ್ಮ ಕದವನಿತ್ತೆ ಎನ್ನ ಬೆದರಿಸುತ್ತಾರೆ || ಮಂದಗಮನೇರು ತಾವು ಬಂದು ಕೈಹಿಡಿದುಕೊಂಡು ಬಾ ಗೋವಿಂದನೆಂದು ಕರೆದು ಸದನದೊಳಗೆ ಮಿಂದು ಹಾಸಿಗೆ ಹಾಸಿ ನಮ್ಮ ಆಧರವ ಸವಿದು ಅವರ ಅಧರಧರಕ್ಕೆ ನಾ ಗಡಗಡ ನಡುಗಿದೆ || ತಮ್ಮ ಪುರುಷರ ಪ್ರೀತಿ ಬಿಟ್ಟು ಚೆನ್ನಾಗಿ ಎನ್ನ ಬೆನ್ನಗೊಂಡರು ಹಗಲು ಇರುಳು ರತಿದೇವಿ ಕೃತಿ ಅತಿಶಯ ದುಃಖಕೆ ರತಿಪತಿ ಶರದೆ ವ್ರತದೊಳಗೆ ಪುರಂದರವಿಠಲನ್ನದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು