ಏನಾಯಿತೋ ಈ ಜನಕೆ

( ರಾಗ ಬಿಲಹರಿ. ಅಟ ತಾಳ) ಏನಾಯಿತೋ ಈ ಜನಕೆ ಮೌನವನು ಹಿಡಿದು ಮರೆತರು ಹರಿಯ ||ಪ|| ನಾಲಿಗೆ ಮುರಿದಿತೊ ನೆಗ್ಗಿಲ ಕೊನೆಮುಳ್ಳು ಬಾಲಕತನದಲಿ ಭೂತ ಹಿಡಿಯಿತೊ ಮೇಲೆ ಕೆಳಗಿನ ತುಟಿ ಎರಡು ಒಂದಾಯಿತೊ ಕಾಲ ಮೃತ್ಯುವು ಬಂದು ಕಂಗೆಡಿಸಿತೊ || ಘಟಸರ್ಪ ಕಚ್ಚಿ ವಿಷ ಘನವಾಗಿ ಏರಿತೋ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನಣ್ಣ ನಿನಗೇನಣ್ಣ (ದಶಾವತಾರ)

( ರಾಗ ಆನಂದಭೈರವಿ. ಆದಿ ತಾಳ) ಏನಣ್ಣ ನಿನಗೇನಣ್ಣ ಕಣ್ಣೇಕಣ್ಣ ಮುಚ್ಚವೊಲ್ಲ್ಯಣ್ಣ ಏನಣ್ಣ ನಿನ್ನ ಗೋಳಣ್ಣ ಕಣ್ಣಿಂದ ನೋಡವೊಲ್ಲ್ಯಣ್ಣ ||೧|| ಗೂನಣ್ಣ ಬಲು ಗೂನಣ್ಣ ಗಿರಿಯ ಹ್ಯಾಂಗೆ ನೀ ಹೊತ್ಯಣ್ಣ ಹೀನ ಅಸುರರ ಹ್ಯಾಂಗಣ್ಣ ಮೋಸವ ನೀ ಮಾಡಿದ್ಯಣ್ಣ ||೨||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನನಿತ್ತು ಮೆಚ್ಚಿಸುವೆನೊ

( ರಾಗ ಮೋಹನ. ಆದಿ ತಾಳ) ಏನನಿತ್ತು ಮೆಚ್ಚಿಸುವೆನೊ ಏನೊ ವಿಟ್ಟಲ ||ಪ|| ದೀನರಕ್ಷಕನೆ ನಿನ್ನ ಧ್ಯಾನವೀಯೊ ವಿಠಲಯ್ಯ ||ಅ|| ಓದಿ ನಿನ್ನ ಮೆಚ್ಚಿಸುವೆನೆ ವೇದವ ತಂದಜನಿಗಿತ್ತೆ ವಾದಿಸಿ ನಿನ್ನ ಮೆಚ್ಚಿಸುವೆನೆ ಆದಿಶೇಷ ಶಯನನೆ || ಆಡಿ ನಿನ್ನ ಮೆಚ್ಚಿಸುವೆನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಲೊ ಎಲೊ ಜೀವಾತ್ಮ

( ರಾಗ ಮುಖಾರಿ. ಝಂಪೆ ತಾಳ). ಎಲೊ ಎಲೊ ಜೀವಾತ್ಮ ನೀ ಸುಲಲಿತಾತ್ಮನ ನೆನೆದು ಸುಖಿಯಾಗೊ ಮನವೆ ||ಪ|| ಇಕ್ಷುದಂಡ ಕೈಯೊಳಿರೆ ಇಂಧನವ ಮೆಲಲೇಕೆ ಅಕ್ಷಯ ಪಾತ್ರೆಯಿರಲು ಹಸಿದು ಇರಲೇಕೆ ನಿಕ್ಷೇಪ ನಿಧಿಯಿರಲು ನಿರತ ದಾರಿದ್ರವೇಕೆ ಪಕ್ಷಿವಾಹನನನಿರಲು ಪರದೈವವೇಕೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಲ್ಲಿ ಶ್ರೀ ತುಲಸಿಯ ವನವು

( ರಾಗ ಭೂಪಾಳಿ. ಅಟ ತಾಳ) ಎಲ್ಲಿ ಶ್ರೀ ತುಲಸಿಯ ವನವು ಅಲ್ಲಿ ಒಪ್ಪುವರು ಸಿರಿನಾರಾಯಣರು || ಪ || ಗಂಗೆ ಯಮುನೆ ಗೋದಾವರಿ ಕಾವೇರಿ ಕಂಗೊಳಿಸುವ ಮಣಿಕರ್ಣಿಕೆಯು ತುಂಗಭದ್ರೆ ಕೃಷ್ಣವೇಣಿ ತೀರ್ಥಗಳೆಲ್ಲ ಮುಂಗಾಡಿಸುವ ಮೂಲ ವೃಕ್ಷದಲಿರುವರು || ಸರಸಿಜಭವ ಭವ ಸುರಪ ಪಾವಕ ಚಂ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯ ರಂಗ

( ರಾಗ ಶಂಕರಾಭರಣ. ಅಟ ತಾಳ) ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯ ರಂಗ ನಿಲ್ಲೊ ನಿಲ್ಲೊ ತಾಳೊ ತಾಳೊ ಗೋವಿಂದ ||ಪ || ಮುಖದಲ್ಲಿ ಕಿರುಬೆವರಿಟ್ಟಿದೆ ಹೊಸ ಹೊಸ ಪರಿ ಸುದ್ದಿ ಹುಟ್ಟಿದೆ ನಸುನಗುವೆಲ್ಲ ನಿನ್ನ ಕೀರ್ತಿ ಹೆಚ್ಚಿದೆ || ಕೈಯಲ್ಲಿ ಉಂಗುರ ಎಲ್ಲಿ ಹೋಗಿದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಲ್ಲಾರು ಮಾಡುವುದು ಹೊಟ್ಟೆಗಾಗಿ

( ರಾಗ ಹುಸೇನಿ. ಆದಿ ತಾಳ) ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ||ಪ || ಸಿರಿ ವಲ್ಲಭನ ಭಜಿಸುವುದು ಮುಕ್ತಿಗಾಗಿ ||ಅ || ಪಲ್ಲಕ್ಕಿಯ ಹೊರುವುದು ಹೊಟ್ಟೆಗಾಗಿ, ದೊಡ್ಡ ಮಲ್ಲರೊಡನಾಡುವುದು ಹೊಟ್ಟೆಗಾಗಿ ಸುಳ್ಳಾಗಿ ಪೊಗಳುವುದು ಹೊಟ್ಟೆಗಾಗಿ, ಸಿರಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಲ್ಲಾನು ಬಲ್ಲೆನೆಂಬುವಿರಲ್ಲ

( ರಾಗ ಮಧ್ಯಮಾವತಿ. ಆದಿ ತಾಳ)

ಎಲ್ಲಾನು ಬಲ್ಲೆನೆಂಬುವಿರಲ್ಲ

ಅವಗುಣ ಬಿಡಲಿಲ್ಲ ||ಪ||

ಸೊಲ್ಲಿಗೆ ಶರಣರ ಕಥೆಗಳ ಪೇಳುತ

ಅಲ್ಲದ ನುಡಿಯನು ನುಡಿಯುವಿರಲ್ಲ ||ಅ||

 

ಕಾವಿಯನುಟ್ಟು ತಿರುಗುವಿರಲ್ಲ, ಕಾಮವ ಬಿಡಲಿಲ್ಲ

ನೇಮ ನಿಷ್ಠೆಗಳ ಮಾಡುವಿರಲ್ಲ, ತಾಮಸ ಬಿಡಲಿಲ್ಲ

ತಾವೊಂದರಿಯದೆ ಪರರನು ತಿಳಿಯದೆ, ಶ್ವಾನನ ಕುಳಿಯಲಿ ಬೀಳುವಿರಲ್ಲ ||

 

ಗುರುಗಳ ಸೇವೆ ಮಾಡಿದರಿಲ್ಲ , ಗುರುತಾಗಲಿಲ್ಲ

ಪರಿಪರಿ ದೇಶವ ತಿರುಗಿದರಿಲ್ಲ, ಪೊರೆಯುವರಿನ್ನಿಲ್ಲ

ಅರಿವೊಂದರಿಯದೆ ಆಗಮ ತಿಳಿಯದೆ, ನರಕಕೂಪದಲಿ ಬೀಳುವಿರಲ್ಲ ||

 

ಬ್ರಹ್ಮ ಜ್ಞಾನಿಗಳು ಎನಿಸುವಿರಲ್ಲ, ಹಮ್ಮು ಬಿಡಲಿಲ್ಲ

ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಲೆ ಮನವೆ ಹರಿ ಧ್ಯಾನ ಮಾಡು

( ರಾಗ ನಾಟ. ಅಟ ತಾಳ) ಎಲೆ ಮನವೆ ಹರಿ ಧ್ಯಾನ ಮಾಡು ||ಪ|| ಎಲೆ ಜಿಹ್ವೆ ಕೇಳು ಕೇಶವನಗುಣಗಳ ನುತಿಸು ಎಲೆ ಮನವೆ ಮುರವೈರಿಯಂಘ್ರಿಗಳ ಭಜಿಸು ಎಲೆಲೆ ಕರಗಳಿರ ಶ್ರೀಧರನ ಸೇವೆಯ ಮಾಡಿ ಎಲೆ ಕರ್ಣಗಳಿರ ಅಚ್ಯುತನ ಕಥೆ ಕೇಳಿ || ಎಲೆ ನೇತ್ರಗಳಿರ ಶ್ರೀಕೃಷ್ಣಮೂರ್ತಿಯ ನೋಡಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ದುಗ್ಗಾಣಿ ಎಂಬುದು ದುರ್ಜನ ಸಂಗ

(ರಾಗ ನಾದನಾಮಕ್ರಿಯೆ ಅಟತಾಳ) ದುಗ್ಗಾಣಿ ಎಂಬುದು ದುರ್ಜನ ಸಂಗ ||ಪ || ದುಗ್ಗಾಣಿ ಬಲು ಕೆಟ್ಟದಣ್ಣ ||ಅ|| ಆಚಾರ ಹೇಳೋದು ದುಗ್ಗಾಣಿ, ಬಹು ನೀಚರ ಮಾಡೋದು ದುಗ್ಗಾಣಿ ನಾಚಿಕೆಯಿಲ್ಲದೆ ಮನೆಮನೆ ತಿರುಗಿಸಿ ಛೀ ಛೀ ಎನಿಸೋದು ದುಗ್ಗಾಣಿಯಣ್ಣ || ನೆಂಟತನ ಹೇಳೋದು ದುಗ್ಗಾಣಿ, ಬಹು
ದಾಸ ಸಾಹಿತ್ಯ ಪ್ರಕಾರ
ಬರೆದವರು