ಎಂಥವನೇ ಗೋಪಿ ನಿನ್ನ ಕಂದ

( ರಾಗ ಪೂರ್ವಿ. ಅಟ ತಾಳ) ಎಂಥವನೇ ಗೋಪಿ, ನಿನ್ನ ಕಂದ ಎಂಥವನೇ ಗೋಪಿ ||ಪ|| ಮದಗಜಗಮನೇರು ಇದಿರಿಗೆ ಬಂದರೆ ಎದೆಬದಿ ಮುಟ್ಟುವುದಿದೇನು ಚಂದ || ಸೊಕ್ಕಿನಿಂದಲಿ ಬಂದು ತೆಕ್ಕೆಯೊಳ್ ಪಿಡಿವನು ಚಿಕ್ಕವನೇನಿವ ಠಕ್ಕ ಗೋವಿಂದ || ಚೆಲುವ ಪುರಂದರವಿಠಲರಾಯನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಲಿಂಗ ರಾಮಲಿಂಗ ಎನ್ನಂತರಂಗ

ಲಿಂಗ ರಾಮಲಿಂಗ ಎನ್ನಂತರಂಗ ಮಂಗಳಾಂಗನೆ ಸರ್ವೋತ್ತುಂಗನೇ ||ಪ|| ಮಂದಾಕಿನಿಧರಗೆ ಗಂಗಾಂಬು ಮಜ್ಜನವೇ ಚಂದ್ರಮೌಳಿಗೆ ಗಂಧ ಕುಸುಮಾರ್ಪಣೆಯೇ ಇಂದು ರವಿ ನೇತ್ರನಿಗೆ ಕರ್ಪೂರದಾರತಿಯೇ ಕಂದರ್ಪ ಜಿತಗೆ ಮಿಗಿಲಾಪೇಕ್ಷೆಯೇ ಘನ ವಿದ್ಯಾತುರಗೆ ಮಂತ್ರ ಕಲಾಪವೇ?
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗುಮ್ಮನೆಲ್ಲಿಹ ತೋರಮ್ಮ

( ರಾಗ ತೋಡಿ. ಆದಿ ತಾಳ) ಗುಮ್ಮನೆಲ್ಲಿಹ ತೋರಮ್ಮ, ಸುಮ್ಮನಂಜಿಸಬೇಡಮ್ಮ ||ಪ|| ಪಂಚಾಶತ್ಕೋಟಿ ವಿಸ್ತೀರ್ಣದ ಭೂಮಿಯ ವಂಚನೆಯಿಲ್ಲವೆ ತಿರುಗಿ ಬಂದೆನೆ ನಾನು ಹಂಚಿಸಿ ಕೊಟ್ಟನೆ ಅವರವರಿಗೆ ನಾ ಹಾಂಗು ನೋಡಿದರು ಕಾಣೆನೆ ಗುಮ್ಮನ || ಸಿಂಧುವಿನೊಳಗೆ ಆನಂದದಿ ಮಲಗಿದ್ದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿದಾಸರು ಕಂಡ ಶಿವ - ಶಿವರಾತ್ರಿಗೆ ಶಿವಸ್ಮರಣೆ...

ವಾಮದೇವ ವಿರಿಂಚಿ ತನಯ ಉ ಮಾಮನೋಹರ ಉಗ್ರ ಧೂರ್ಜಟಿ ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ ಕಾಮಹರ ಕೈಲಾಸ ಮಂದಿರ ಸೋಮಸೂರ್ಯಾನಳವಿಲೋಚನ ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ
ಬಗೆ

ನಮಃ ಪಾರ್ವತೀ ಪತಿ ನುತಜನಪರ

ನಮಃ ಪಾರ್ವತೀ ಪತಿ ನುತಜನಪರ ನಮೊ ನಮೋ ವಿರೂಪಾಕ್ಷ ರಮಾರಮಣನಲ್ಲಮಲಭಕುತಿ ಕೊಡು ನಮೋ ವಿಶಾಲಾಕ್ಷ ನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತರಕ್ಷ ಫಾಲನೇತ್ರ ಕಪಾಲ ರುಂಡಮಣಿ ಮಾಲಾ ಧೃತ ವಕ್ಷ ಶೀಲರಮ್ಯ ವಿಶಾಲ ಸುಗುಣ ಸಲ್ಲೀಲ ಸುರಾಧ್ಯಕ್ಷ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ಧವಳ ಗಂಗೆಯ ಗಂಗಾಧರ ಮಹಾಲಿಂಗ

ರಾಗ: ಮೋಹನ ತಾಳ: ಝಂಪಾ ಧವಳ ಗಂಗೆಯ ಗಂಗಾಧರ ಮಹಾಲಿಂಗ ಮಾ ಧವನ ತೋರೋ ಗುರುಕುಲೋತ್ತುಂಗಾ ಅರ್ಚಿಸಿದವರಿಗಭೀಷ್ಟವ ಕೊಡುವ ಹೆಚ್ಚಿನ ಅಘಗಳ ತರಿದು ಬಿಸುಟುವಾ ದುಶ್ಚರಿತಗಳೆಲ್ಲ ದೂರದಲ್ಲಿಡುವ ನ ಮ್ಮಚ್ಚುತಗಲ್ಲದ ಅಸುರರ ಬಡಿವಾ ಮಾರನ ಗೆದ್ದ ಮನೋಹರ ಮೂರ್ತಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗುಡುಗುಡಿಯನು ಸೇದಿ ನೋಡೊ

( ರಾಗ ಪುನ್ನಾಗವರಾಳಿ. ಆದಿ ತಾಳ) ಗುಡುಗುಡಿಯನು ಸೇದಿ ನೋಡೊ ಸೇದಿ ನೋಡೊ ||ಪ|| ನಿನ್ನ ಒಡಲ ಪಾಪಂಗಳನೆಲ್ಲ ಈಡಾಡೋ ||ಅ|| ಮನವೆಂಬೊ ಸಂಚಿಯ ಬಿಚ್ಚಿ, ನಿನ್ನ ದಿನದ ಪಾಪಗಳೆಂಬೊ ಭಂಗಿಯ ಕೊಚ್ಚಿ ತನುವೆಂಬೊ ಚಿಲುಮೆಯೊಳಿಕ್ಕಿ, ಅಚ್ಯು- ತನ ಧ್ಯಾನವೆಂತೆಂಬೊ ಬೆಂಕಿಯ ಹಚ್ಚಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗುದ್ದಿದವನೆ ಬಲ್ಲ

( ರಾಗ ನಾದನಾಮಕ್ರಿಯ. ಏಕ ತಾಳ) ಗುದ್ದಿದವನೆ ಬಲ್ಲ ಗುದ್ದಿಸಿ ಕೊಂಡವನೆ ಬಲ್ಲ ಸುದ್ದಿಗೆ ಠಾವಿಲ್ಲ ಬೌದ್ಧರೆ ಕೇಳಿರಿ ನೀವೆಲ್ಲ ||ಪ|| ಜೀವದೊರಸೆ ಕೊಂದ , ಹವಣಿಸಿ ನೆವಸದ ನುಂಗಿದ ಬಹು ಭಾಷೆಯ ಕಡಿದ ಶಿವ ಶಿವ ತಾನಾಗೆ ಬಿರಿದ || ಆರಿಗೆ ಮೊರೆಯಿಡಲಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗೋವಿಂದನ ಧ್ಯಾನ ಬಲು ಶುಭಕರವೋ

( ರಾಗ ಶಹಾನ. ಆದಿ ತಾಳ) ಗೋವಿಂದನ ಧ್ಯಾನ ಬಲು ಶುಭಕರವೋ ||ಪ|| ಭಾವಿಸಿ ನೋಡಲು ಬಹು ಜನ್ಮಗಳ ಪಾಪಹರವೋ || ಒಂದಾವರ್ತಿ ನೆನೆಯಲು ಭವಬಂಧ ಖಿಲವೋ ಹಿಂದಿನ ಸುಕೃತಕೆ ಮುಂದಿನ ಸುಕೃತಾನಂದ ಫಲವೋ || ವಿಧವಿಧ ಸಾಧನಕಿಂತ ಇದು ಘನವೋ ಉದರಂಭರಣಕ್ಕೆ ಉಡುವೋ ವಸನಕ್ಕೆ ಇದು ಸುಸಾಧವನವೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗೋವಿಂದಾ ನಿನ್ನಾನಂದ

( ರಾಗ ಮಧ್ಯಮಾವತಿ. ಆದಿ ತಾಳ) ಗೋವಿಂದಾ ನಿನ್ನಾನಂದ ಸಕಲ ಸಾಧನವು ||ಪ|| ಅಣುರೇಣು ತೃಣಕಾಷ್ಟ ಪರಿಪೂರ್ಣ ಗೋವಿಂದ ನಿರ್ಮಲಾತ್ಮಕನಾಗಿ ಇರುವುದೆ ಆನಂದ || ಸೃಷ್ಟಿಸ್ಥಿತಿಲಯಕಾರಣ ಗೋವಿಂದ ಈ ಪರಿ ಮಹಿಮೆಯ ತಿಳಿಯುವುದೆ ಆನಂದ || ಮಂಗಳಮಹಿಮ ಶ್ರೀ ಪುರಂದರವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು