ಧೂಪಾರತಿಯ ನೋಡುವ ಬನ್ನಿ ನಮ್ಮ(೨).

( ರಾಗ ಗಮನಶ್ರಮ. ಚಾಪು ತಾಳ) ಧೂಪಾರತಿಯ ನೋಡುವ ಬನ್ನಿ, ನಮ್ಮ ಗೋಪಾಲ ಕೃಷ್ಣ ದೇವರ ಪೂಜೆಯ || ಪ|| ಮದ್ದಳೆ ಝಾಗಟೆ ತಾಳ ದುಂದುಭಿ ಭೇರಿ ತದ್ಧಿಮಿ ಧಿಮಿಕೆಂಬ ವಾದ್ಯಗಳು ಅದ್ಭುತ ಶಂಖನಾದಗಳಿಂದಲಿ ನಮ್ಮ ಪದ್ಮನಾಭದೇವರ ದಿವ್ಯ ಪೂಜೆಯ || ಅಗರುಚಂದನ ಧೂಪ ಗುಗ್ಗುಳ
ದಾಸ ಸಾಹಿತ್ಯ ಪ್ರಕಾರ
ಬರೆದವರು

ದೇವಕಿಯುದರಸಂಜಾತನೆ ತ್ರುವ್ವಿ

( ರಾಗ ಜೋಗುಳ. ಆಟ ತಾಳ) ದೇವಕಿಯುದರ ಸಂಜಾತನೆ ತ್ರುವ್ವಿ ಕಾಮನ ಪಿತ ಕಮಲಾಕ್ಷನೆ ತ್ರುವ್ವಿ ಶ್ರೀ ವೈಭವ ಸಚ್ಚಿದಾನಂದ ತ್ರುವ್ವಿ ಭಾವಕಿ ಗೋಪಿಯ ಕಂದನೆ ತ್ರುವ್ವಿ || ಮಧುರೆಯೊಳುದಿಸಿದ ಮಹಿಮನೆ ಜೋ ಜೋ ಯದುಕುಲ ತಿಲಕ ಯಾದವರಾಯ ಜೋ ಜೋ ಮಧುಕೈಟಭ ಮುರ ಮರ್ದನ ಜೋ ಜೋ
ದಾಸ ಸಾಹಿತ್ಯ ಪ್ರಕಾರ
ಬರೆದವರು

ದಾಸನೆಂತಾಗುವೆನು

( ರಾಗ ಕಾಂಭೋಜ. ಝಂಪೆ ತಾಳ) ದಾಸನೆಂತಾಗುವೆನು ಧರೆಯೊಳಗೆ ನಾನು || ವಾಸುದೇವನಲ್ಲಿ ಲೇಶ ಭಕುತಿಯ ಕಾಣೆ ||ಅ|| ಗೂಟನಾಮವ ಹೊಡೆದು ಗುಂಡುತಂಬಿಗೆ ಹಿಡಿದು ಗೋಟಂಚು ಧೋತರ ಮಡಿಯನುಟ್ಟು ದಾಟುಗಾಲಿಡುತ ನಾ ಧರೆಯೊಳಗೆ ಬರಲೆನ್ನ ಬೂಟಕತನ ನೋಡಿ ಭ್ರಮಿಸದಿರಿ ಜನರೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನು ಅನುಮಾನ ಮಾಡುತೀ

( ರಾಗ ಮಾಂಜಿಶಭೈರವಿ. ಆದಿ ತಾಳ)

 

ಏನು ಅನುಮಾನ ಮಾಡುತೀ , ವ್ಯರ್ಥ ಮಾಡುತಿ

ಶ್ರೀನಿವಾಸನ ನಾಮವೇ ಗತಿಯೋ ||ಪ||

 

ನೀರ ಮೇಲಿನ ಗುಳ್ಳೆಗೆ ಸರಿ ಈ ಶ-

ರೀರ ಸ್ಥಿರವೆಂದು ನಂಬದಿರೋ

ನಾರೀಮಣಿಯರ ನೋಡಿ ಮೋಹಿಸುವುದು

ನಿರಯವೋ ನಿತ್ಯನಿಧಾನ ತಿಳಿಯೋದು ||

 

ಆಗಭೋಗ ದೇಹತ್ಯಾಗಕಾಲದಲ್ಲಿ

ಸಾಗಿಬಾರರೊಂದು ತಿಳಿದುನೋಡೋ

ಭೋಗಿಶಯನನ ನಿತ್ಯನೇಮದಕಿಂತ

ಭಾಗ್ಯವ ಕಾಣೆ ಕಲಿಯುಗದಲ್ಲಿ ||

 

ಸತಿ ಸುತರಲ್ಲಿ ನೀ ಮಾಡುವ ಪ್ರೀತಿ ಶ್ರೀ-

ಪತಿಯಲಿ ಮಾಡೋ ನಿಮಿಷ ಮಾತ್ರ

ಸತತ ಸಚ್ಚಿದಾನಂದಮೂರುತಿಯ

ಸ್ತುತಿಸಿದವರ ಕಾಯುವೆನೆಂಬೋ ಪ್ರಖ್ಯಾತ||

 

ಮೂಢ ಮನುಜರ ಸೇವೆ ಬಿಡೊ

ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನಾಯಿತೋ ನಿನಗೆ ಶ್ರೀಹರಿ

( ರಾಗ ಶಂಕರಾಭರಣ. ಆದಿ ತಾಳ) ಏನಾಯಿತೋ ನಿನಗೆ ಶ್ರೀಹರಿ ಹರಿ ||ಪ|| ನಾನಿನ್ನೇನು ಮಾಡಲಿ ಕಂದ ||ಅ|| ಅಂಗಳದೊಳಗಾಡೋ ಗೋಪೀಕಂದಗೆ ಗ್ರಹ ಸೋಕಿ ಅಂಗಾರನಿಟ್ಟಳು ಗೋಪಿ ತಾ ರಕ್ಷೆಯ ಕಟ್ಟಿದಳು ಅಂಗನೆ ಹರಿಯ ಕಂಡು ಗೋಪಿ ತಾ ಕಂಗೆಟ್ಟಳು ಆಗ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಧರ್ಮ ಏಕೋ ಸಹಾಯಃ

( ರಾಗ ಕಾಪಿ. ಅಟ ತಾಳ) ಧರ್ಮ ಏಕೋ ಸಹಾಯಃ ||ಪ|| ಪರಬ್ರಹ್ಮ ಮೂರುತಿಯ ಪಾದವ ಭಜಿಪ ಸುಜನರಿಗೆ ||ಅ|| ಹರಿಭಕುತಿಯನು ಮಾಳ್ವ ಪರಮ ಭಾಗವತರಿಗೆ ಕರೆದು ಭೂಸುರರಿಗನ್ನವನಿತ್ತಗೆ ಪರ ಸತಿಯರನು ಕಂಡು ಮನವೆಳಸದಿದ್ದವಗೆ ಪರರುಪದ್ರವ ಬಿಡಿಸಿ ಪೊರೆವ ಸುಜನರಿಗೆಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ದಾರೆನೇಂದರೊ ರಂಗಯ್ಯ

( ರಾಗ ಶಂಕರಾಭರಣ. ಅಟ ತಾಳ) ದಾರೆನೇಂದರೊ ರಂಗಯ್ಯ ನಿನ್ನ ದಾರೇನೆಂದರೊ ||ಪ|| ದಾರೇನೆಂದರು ಭೂಸುರ ಲೋಕದ ಕೃತ್ಯ ತ್ರಿಜಗ ವಂದಿತ ಮುರಹರ ಮೋಹನ ನಿನ್ನ || ಸಕ್ಕರೆ ಚೀನಿಪಾಲು ಸವಿದ ತನುವಿನ ಉಕ್ಕುವ ನೊರೆ ಹಾಲುಗಳ ಮುದ್ದು ರಂಗಯ್ಯ ನಿನ್ನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಡಂಭಕ ಭಕ್ತಿಗೆ

( ರಾಗ ಕಾಂಭೋಜ. ಝಂಪೆ ತಾಳ) ಡಂಭಕ ಭಕ್ತಿಗೆ ಮೆಚ್ಚಿ ಕೊಡ(ಳ್ಳ?)ನು ಕೃಷ್ಣ ||ಪ|| ಡೊಂಬ ಲಾಗವ ಹಾಕಿ ಡೊಂಡೊಂಡೆ ಹೊರಳಿದರಿಲ್ಲ ||ಅ|| ಹೆಚ್ಚೆಚ್ಚು ಬಯಸಿದರಿಲ್ಲ ಹೆಚ್ಚರಿಕೆ ತತಿಗಿಲ್ಲ ಕಚ್ಚೆಕೈ ಶುದ್ಧವಿಲ್ಲದೆ ಕರ್ಮವಿಲ್ಲ ಬಚ್ಚಿಟ್ಟರಿಲ್ಲ ನಿರ್ಭಾಗ್ಯರಿಗೆ ಇಂದೆನ್ನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಛೀ ಹಳಿ ಥೂ ಖೋಡಿ ಪಾಪಿ ಮನವೆ

( ರಾಗ ರೇಗುಪ್ತಿ. ಝಂಪೆ ತಾಳ) ಛೀ ಹಳಿ ಥೂ ಖೋಡಿ ಪಾಪಿ ಮನವೆ ||ಪ|| ಕುಹಕ ಬುದ್ಧಿಗಳನ್ನು ಬಿಡು ಕಂಡ್ಯ ಮನವೆ ||ಅ|| ಬಣ್ಣದ ಬೀಸಣಿಗ್ಯಂತೆ ಹೆಣ್ಣು ತಿರುಗೋದು ಕಂಡು ಕಣ್ಣು ಸನ್ನೆಯ ಮಾಡಿ ಕೈಹೊನ್ನು ತೋರಿ ಸುಣ್ಣದ್ಹರಳಿನ ಮೇಲೆ ತಣ್ಣೀರು ಹೊಯ್ದಂತೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬ್ರಹ್ಮಾನಂದದ ಸಭೆಯೊಳಗಲ್ಲಿ

( ರಾಗ ನಾದನಾಮಕ್ರಿಯಾ. ಏಕ ತಾಳ) ಬ್ರಹ್ಮಾನಂದದ ಸಭೆಯೊಳಗಲ್ಲಿ ಸುಮ್ಮನೆ ಇರುತಿಹುದೇನಯ್ಯ ||ಪ|| ಮೂಡದು ಕೂಡದು ಉಣ್ಣದು ಮಾಣದು ಕಾಡದು ಬೇಡದು ಕಂಗೆಡದು ನಾಡ ಮಾತುಗಳ ಬಲ್ಲುದು ಆದದು ರೂಢಿಯೊಳಿರುತಿಹುದೇನಯ್ಯ || ಪೊಡವಿಗಧಿಕವೆಂಬುವರಿಗೆ ಬಲ್ಲುದು
ದಾಸ ಸಾಹಿತ್ಯ ಪ್ರಕಾರ
ಬರೆದವರು