ಎಂಥಾ ಸಣ್ಣವನೆ ನಿನ್ನ ಮಗ

( ರಾಗ ನಾಟಕುರಂಜಿ. ಅಟ ತಾಳ) ಎಂಥಾ ಸಣ್ಣವನೆ , ನಿನ್ನ ಮಗ- ನೆಂಥಾ ಸಣ್ಣವನೆ ||ಪ || ಎಂಥ ಸಣ್ಣವನಿವನಂಥವರಿಲ್ಲವು ಹೊಂತಕಾರಿ ಬಲವಂತರಿಗಧಿಕನು || ಅ|| ತರಳರಂತಿಪ್ಪನು ತರುಣಿಯರೊಳಾಡುವ ಕಿರಿಬೆರಳುಗುರಿನಲಿ ಗಿರಿಯನೆತ್ತಿದವ || ಕಾಳಿಂಗಸರ್ಪನ ಕಾಲಿಲಿ ತುಳಿದವ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಂಥಾ ಪುಣ್ಯವೆ ಗೋಪಿ ನಿನಗೆ

( ರಾಗ ಖಮಾಸ್. ಅಟ ತಾಳ) ಎಂಥಾ ಪುಣ್ಯವೆ ಗೋಪಿ ನಿನಗೆ ಪೇಳೆ ||ಪ|| ಇಂಥಾ ಕೃಷ್ಣಯ್ಯ ನಿನ್ ಸುತನಾಗಿರುವನಲ್ಲೆ ||ಅ|| ಸೊಲ್ಲುಗಳು ಇಲ್ಲ ಅವನ ಮಹಿಮೆ ಪೇಳೆ ಕಲ್ಲಾಗಿ ಗುಂಡಾಗಿ ನಿನ್ ತೊಟ್ಟಿಲೊಳಿಹನಮ್ಮ || ವನಜನಾಭನ್ನ ಎತ್ತುವ ಭಾಗ್ಯವ ಕಂಡು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎನ್ನ ಜನ್ಮ ಸಫಲವಾಯಿತು

( ರಾಗ ಆನಂದಭೈರವಿ. ಅಟ ತಾಳ) ಎನ್ನ ಜನ್ಮ ಸಫಲವಾಯಿತು ಎನ್ನನುದ್ಧರಿಸಲಾಗದೆ ||ಪ|| ಎನ್ನ ಜನ್ಮ ಸಫಲವಾಯಿತನ್ಯರನು ಬಯಸಲೇಕೆ ತನ್ನ ತಾನೊಲಿದ ವ್ಯಾಸಮುನಿರಾಯನ ಕೈಯ ಸೇರಿರೋ ||ಅ|| ಸಿರಿಯರಸನ ಕರುಣದಾಳು ಸರಸಿಜಸಂಭವನ ಪಿತನ ಸುರರೊಡೆಯನ ಸಕಲ ವೇದವರಸುವಂಥ ಹರಿಯ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೈಲಾಸವಾಸ ಗೌರೀಶ ಈಶ

ರಚನೆ -ವಿಜಯದಾಸರು ಕೈಲಾಸವಾಸ ಗೌರೀಶ ಈಶ ತೈಲಧಾರೆಯಂತೆ ಮನಸು ಕೊಡೊ ಹರಿಯಲ್ಲಿ, ಶಂಭೋ || ಪಲ್ಲವಿ|| ಅಹೋರಾತ್ರಿಯಲ್ಲಿ ನಾನು ಅನುಚರಾಗ್ರಣಿಯಾಗಿ ಮಹಿಯೊಳಗೆ ಚರಿಸಿದೆನೊ ಮಹದೇವನೆ ಅಹಿ ಭೂಷಣನೆ ಎನ್ನ ಅವಗುಣಗಳೆಣಿಸದಲೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬರಬೇಕೋ ರಂಗಯ್ಯ ನೀ

( ರಾಗ ಶಂಕರಾಭರಣ. ಅಟ ತಾಳ) ಬರಬೇಕೋ ರಂಗಯ್ಯ ನೀ ಬರಬೇಕೋ ||ಪ|| ಬರಬೇಕೋ ಬಂದು ಒದಗಬೇಕೋ ಮಮ ಗುರು ನರಹರಿ ನಾರಾಯಣ ನೀನಾ ಸಮಯಕ್ಕೆ ||ಅ|| ಕಂಠಕ್ಕೆ ಪ್ರಾಣ ಬಂದಾಗ ಎನ್ನ ನೆಂಟರಿಷ್ಟರು ಬಂದಳುವಾಗ ಗಂಟು ಹುಬ್ಬಿನ ಕಾಲಭಂಟರು ಕವಿದೆನ್ನ ಗಂಟಲೌಕುವಾಗ ವೈಕುಂಠ ನಾರಾಯಣ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎನ್ನ ರಕ್ಷಿಸೊ ನೀನು

( ರಾಗ ಹುಸೇನಿ. ರೂಪಕ ತಾಳ) ಎನ್ನ ರಕ್ಷಿಸೊ ನೀನು ದೇವರ ದೇವ ||ಪ|| ಎನ್ನ ರಕ್ಷಿಸೋ ನೀನು ಯಾದವಶಿರೋಮಣಿ ಮುನ್ನ ದ್ರೌಪದಿಯಭಿಮಾನ ಕಾಯಿದ ಕೃಷ್ಣ ||ಅ|| ಬಾಲನ ಮೊರೆಯನ್ನು ಕೇಳಿ ಕೃಪೆಯಿಂದ ಪಾಲಿಸಿದ್ಯೋ ನರಸಿಂಹರೂಪದಿಂದ || ಪಾಷಾಣವ ಚರಣದಿ ಯೋಷಾರೂಪವ ಮಾಡಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನೇನು ಮಾಡಿದರೇನು ಫಲವಯ್ಯ

( ರಾಗ ಮೋಹನ. ತ್ರಿಪುಟ ತಾಳ) ಏನೇನು ಮಾಡಿದರೇನು ಫಲವಯ್ಯ||ಪ|| ಭಾನುಕೋಟಿ ತೇಜ ಶ್ರೀನಿವಾಸನ್ನ ಭಜಿಸದೆ ||ಅ|| ಹಲವು ಓದಿದರೇನು ಕೆಲವು ಕೇಳಿದರೇನು ಜಲದೊಳಗೆ ಮುಳುಗಿ ಕುಳಿತಿದ್ದರೇನು ಛಲವಾಗಿ ಮುಸುಕಿಟ್ಟು ಬೆರಳನೆಣಿಸಿದರೇನು ಚೆಲುವ ದೇವನೊಳು ಎರಕವಿಲ್ಲದ ತನಕ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮೋಸ ಹೋದೆನಲ್ಲ

ರಾಗ: ಸುರಟಿ ಆದಿತಾಳ ಮೋಸ ಹೋದೆನಲ್ಲ ಸಕಲವು ವಾಸುದೇವ ಬಲ್ಲ ಭಾಸುರಾಂಗ ಶ್ರೀ ವಾಸುಕಿಶಯನನ ಸಾಸಿರ ನಾಮವ ಲೇಸಾಗಿ ಪಠಿಸದೆ* |ಪ| ದುಷ್ಟ ಜನರ ಕೂಡಿ ನಾನತಿ ಭ್ರಷ್ಟನಾದೆ ನೋಡಿ ಶ್ರೇಷ್ಠರೂಪ ಮುರ ಮುಷ್ಟಿಕ ವೈರಿಯ ನಿಷ್ಠೆಯಿಂದ ನಾ ದೃಷ್ಟಿಸಿ ನೋಡದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಂದಿಗೆ ಧನ್ಯ ನಾನೆಂದಿಗೆ ಪುಣ್ಯಜೀವಿ

( ರಾಗ ಪಂತುವರಾಳಿ/ಕಾಮವರ್ಧಿನಿ. ತ್ರಿಪುಟ ತಾಳ) ಎಂದಿಗೆ ಧನ್ಯ ನಾನೆಂದಿಗೆ ಪುಣ್ಯಜೀವಿ ||ಪ|| ಎಂದು ನಿನ್ನಯ ಕೃಪೆ ಬಾಹೋದಚ್ಯುತನೆ ||ಅ|| ಫಲವೃಕ್ಷಬಳ್ಳಿಗಳ ಮಲದಲಿಪ್ಪತ್ತು ಲಕ್ಷ ಜಲದೊಳಗೆ ಒಂಬತ್ತು ಲಕ್ಷ ಜೀವಿಸಿ ಅಳಲಿದೆ ಏಕಾದಶ ಲಕ್ಷ ಕ್ರಿಮಿಯಾಗಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎನಗೊಂದು ಮಾತು ಹೇಳದೆ ಹೋದೆ ಹಂಸ

( ರಾಗ ಶೋಕ ಪಂತುವರಾಳಿ. ಛಾಪು ತಾಳ) ಎನಗೊಂದು ಮಾತು ಹೇಳದೆ ಹೋದೆ ಹಂಸ ||ಪ|| ತನುವಿನೊಳಗೆ ಅನುದಿನವಿದ್ದು ||ಅ|| ಜ್ವಾಲಾಧರವೆಂಬೊ ಮಾಳಿಗೆ ಮನೆಯಲ್ಲಿ ಈಹೋದು ಒಂಭತ್ತು ಬಾಗಿಲ ಗಾಳಿ ಬಂದು ಕುಟ್ಟಿ ಎಲೆ ಹಾರಿ ಹೋಗುವಾಗ ಬೇರಿಗೆ ಹೇಳಿ ಹೋಯಿತೆ ಒಂದು ಮಾತ ||
ದಾಸ ಸಾಹಿತ್ಯ ಪ್ರಕಾರ
ಬರೆದವರು