ಗೆದ್ದೆಯೋ ಹನುಮಂತ

ಗೆದ್ದೆಯೋ ಹನುಮಂತ

( ರಾಗ ಕಲ್ಯಾಣಿ. ಅಟ ತಾಳ) ಗೆದ್ದೆಯೋ ಹನುಮಂತ, ಅಸುರರ ಒದ್ದ್ಯೋ ನೀ ಬಲವಂತ ||ಪ || ಬದ್ಧಾಂಜಲಿಯಿಂದ ರಘುಪತಿಪಾದವ ಹೃದ್ಯದಿ ಭಜನೆ ಮಾಡುವ ಬುದ್ಧಿವಂತ ||ಅ || ಅಂಜನೆ ಸುತನೀತ, ಲಂಕಾಪುರದಿ ಅಕ್ಷಯನ ಕೊಂದಾತ ಕಂಜಾಕ್ಷಿ ಸೀತೆತ್ಯ ಕಂಡು ಮುದ್ರಿಕೆಯಿತ್ತು ಮಂಜುಳ ವಾರ್ತೆಯ ತಂದ ರಾಮನ ದೂತ || ಈರೇಳು ಜಗದೊಳಗೆ, ಇನ್ನು ಮತ್ತೆ ಯಾರು ಸರಿ ನಿನಗೆ ವೀರ ಮಹಾಬಲ ಶೂರ ಪರಾಕ್ರಮ ಧೀರ ಸಮೀರ ಉದಾರ ಗಂಭೀರ || ವಾಂಚಿತ ಫಲವೀವ, ನಾಥ ಮುಖ್ಯ ಪ್ರಾಣ ಮಹಾನುಭಾವ ಕಿಂಚಿತ್ಕಷ್ಟವ ಪಡಲೀಸ ಭಕ್ತರ್ಗೆ ಪಾಂಚಜನ್ಯಧರ ಪುರಂದರವಿಠಲದಾಸ ||
ದಾಸ ಸಾಹಿತ್ಯ ಪ್ರಕಾರ
ಬರೆದವರು