ಹರಿಕಥಾಮೃತಸೇವೆ ಹರಿದಾಸರಲ್ಲದಲೆ

( ರಾಗ ಮೋಹನ. ಅಟ ತಾಳ) ಹರಿ ಕಥಾಮೃತ ಸೇವೆ ಹರಿದಾಸರಲ್ಲದಲೆ ದುರುಳ ಮೂಢರು ಬಲ್ಲರೆ ||ಪ|| ಸ್ತನ್ಯಪಾನದ ಸವಿಯ ಚಿಣ್ಣರರಿಯುವಂತೆ ಮಣ್ಣು ಬೊಂಬೆಯು ಬಲ್ಲುದೆ ಅನ್ನಪಾನದ ಸವಿಯ ಕೊನೆನಾಲಿಗರಿವಂತೆ ಅಣಿ ಮಾಡಿ ಕೊಡುವಂಥ ಕರ ಬಲ್ಲುದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿ ಹರರು ಸಮರೆಂದು ಅರಿಯದಜ್ಞಾನಿಗಳು

( ರಾಗ ಕಾಂಭೋಜ. ಝಂಪೆ ತಾಳ) ಹರಿ ಹರರು ಸಮರೆಂದು ಅರಿಯದಜ್ಞಾನಿಗಳು ಹರನ ಹೃದಯದೊಳಿರುವ ಹರಿಯ ತಾವರಿಯರು ||ಪ|| ಶರಧಿ ಮಥನದೊಳಂದು ಸಿಂಧುಸುತೆ ಬಂದಾಗ ಹರಿ ಹರ ವಿರಿಂಚಿ ಮೊದಲಾದ ಸುರರ ವರರಾರೆಂದು ನೋಡಿ ಶಂಕೆಯ ಬಿಟ್ಟು ಸಿರಿದೇವಿ ಹರಿ ಸರ್ವವರನೆಂದು ಮಾಲೆ ಹಾಕಿದಳು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಷ್ಟಾದರು ಮುನ್ನ ಕೊಟ್ಟಲ್ಲದಿಲ್ಲ

( ರಾಗ ಕಾಂಭೋಜ. ಝಂಪೆ ತಾಳ) ಎಷ್ಟಾದರು ಮುನ್ನ ಕೊಟ್ಟಲ್ಲದಿಲ್ಲ ||ಪ|| ಪಡೆದಷ್ಟೆ ಅಲ್ಲದೆ ಬೇರೆ ಬಯಸಿದರಿಲ್ಲ ||ಅ|| ಯಾರಾರ ಮನೆಗಳಿಗೆ ಹೋಗಿ ಬಂದರು ಇಲ್ಲ ಊರನಾಳುವ ದೊರೆಯ ಸೇರಿದರಿಲ್ಲ ನೀರೊಳಗೆ ತಾ ಮುಳುಗಿ ಜಪವ ಮಾಡಿದರಿಲ್ಲ ಹೇರಳ ವಿದ್ಯೆಗಳ ಕಲಿತರಿಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎರಡೂ ಒಂದಾಗದು ರಂಗ

( ರಾಗ ಶ್ರೀ. ಅಟ ತಾಳ) ಎರಡೂ ಒಂದಾಗದು ರಂಗ ||ಪ|| ಎರಡೂ ಒಂದಾಗದು ಎಂದೆಂದಿಗು ರಂಗ ||ಅ|| ಒಂದು ವೃಕ್ಷದಲ್ಲಿ ಎರಡು ಪಕ್ಷಿಗಳು ಒಂದೆ ಗೂಡಿನಲ್ಲಿ ಇರುತಿಹವು ಒಂದು ಪಕ್ಷಿ ಫಲಗಳನುಂಬುದು ಮ- ತ್ತೊಂದು ಫಲಂಗಳನುಣ್ಣದು ರಂಗ || ಹಲವು ಕೊಂಬೆಗೆ ಒಂದು ಹಾರಿತು , ಒಂದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನು ವ್ರತವೇನು ಸಾಧನಗಳೇನೊ

( ರಾಗ ಕಾಂಭೋಜ. ಅಟ ತಾಳ) ಏನು ವ್ರತವೇನು ಸಾಧನಗಳೇನೊ || ಸ್ವಾನುಭವದಜ್ಞಾನ ಹೀನ ಮಾನವನೆ ||ಅ|| ಶಾಕವ್ರತವೆನುತ ಫಲ ಶಾಕಗಳ ಬಿಡುವಂತೆ ಬೇಕಾದ ಆಕಾಂಕ್ಷೆ ಬಿಡಬಾರದೆ ಸಾಕೆನಿಸಿದೆ ರತಿಗೆ ಸತತ ಮನ ಕೊಡುವಂತೆ ಶ್ರೀಕಾಂತನೊಳು ಮನವನಿಡಬಾರದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನು ಪೇಳಲೆ ಗೋಪಿ

( ರಾಗ ಆನಂದಭೈರವಿ. ಛಾಪು ತಾಳ) ಏನು ಪೇಳಲೆ ಗೋಪಿ ನಿನ್ನ ಮಗನ ಜಾಲ ಮಾನ ತಪ್ಪಿ ಬಂದ ಮನೆಯೊಳಗೆ ||ಪ|| ಕೊಡ ಹಾಲು ಕುಡಿದನೆ ಗಡಿಗೆಯನೊಡೆದನೆ ಅಡಗಿದ್ದನೆ ದೊಡ್ಡ ಕೊಡದೊಳಗೆ ಹುಡುಗ ಸಿಕ್ಕಿದನೆಂದು ಹೊಡೆಯಲು ಹೋದರೆ ಬಡವರ ಮಗನೇನೆ ಹೊಡೆಯಲಿಕ್ಕೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನು ಮೆಚ್ಚಿದೆಲೆ ಹೆಣ್ಣೆ

( ರಾಗ ಕಾಂಭೋಜ. ಝಂಪೆ ತಾಳ) ಏನು ಮೆಚ್ಚಿದೆಲೆ ಹೆಣ್ಣೆ ಏನು ಮರುಳಾದೆ ||ಪ|| ನೋಟದಿ ಚೆಲುವನಿವನೆಂಬೆನೆ ಚಂಚಲ ಮಾಟದಿ ಚೆಲುವನಿವನೆಂಬೆನೆ ಬೆನ್ನು ಗುಪುಟು ಗೂಟದಂಥ ಹಲ್ಲು ಮೊಳದುದ್ದದೆ ಮೋರೆ ಬೂಟಕತನದಿ ಬಾಯ್ದೆರೆದು ಅಂಜಿಪಗೆ || ಅಣುರೂಪದವನಿವ ನಿಲುವುಳ್ಳ ನರನಲ್ಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾರೋ ಬೇಗ ಬಾರೋ

ಬಾರೋ ಬೇಗ ಬಾರೋ ನೀಲಮೇಘ ವರ್ಣ ಬಾರೋ ಬೇಗ ಬಾರೋ ವೇಲಾಪುರದ ಚೆನ್ನ| ಇಂದಿರೆ ರಮಣ ಗೋವಿಂದ ಬೇಗ ಬಾರೋ ನಂದನಕಂದ ಮುಕುಂದ ಬೇಗ ಬಾರೋ| ರಂಗ ಉತ್ತುಂಗ ನರಸಿಂಗ ಬೇಗ ಬಾರೋ ಮಂಗಳ ಮಹಿಮ ಶುಭಾಂಗ ಬೇಗ ಬಾರೋ| ರುದ್ಧ ಅನಿರುದ್ಧ ನಿರವದ್ಯ ಬೇಗ ಬಾರೋ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆನಂದಮಯಗೆ ಚಿನ್ಮಯಗೆ

ಆನಂದಮಯಗೆ ಚಿನ್ಮಯಗೆ ಶ್ರೀಮನ್ನಾರಾಯಣಗೆ ಆರತಿ ಎತ್ತಿರೆ|| ವೇದವ ತಂದು ಬೆಟ್ಟವ ಪೊತ್ತು ಧರಣೀಯ ಸಾಧಿಸಿ ಕಂಭದೊಳುದಿಸಿದಗೆ| ಭೂದಾನವ ಬೇಡಿ ನೃಪರ ಸಂಹರಿಸಿದ ಆದಿ ಮೂರುತಿಗೆ ಆರತಿ ಎತ್ತಿರೆ|| ಇಂದುವದನೆ ಸೀತೆ ಸಹಿತಲರಣ್ಯದಿ ನಂದಗೋಕುಲದಲ್ಲಿ ನಲಿದವಗೆ|
ದಾಸ ಸಾಹಿತ್ಯ ಪ್ರಕಾರ
ಬರೆದವರು