ಏನು ಮಾಡಿದರೇನು ಭವ ಹಿಂಗದು

( ರಾಗ ಮುಖಾರಿ. ಝಂಪೆ ತಾಳ) ಏನು ಮಾಡಿದರೇನು ಭವ ಹಿಂಗದು ದಾನವಾಂತಕ ನಿನ್ನ ದಯವಾಗದನಕ ||ಪ|| ಅರುಣೋದಯದಲೆದ್ದು ಅತಿ ಸ್ನಾನಗಳ ಮಾಡಿ ಬೆರಳನೆಣಿಸಿದೆ ಅದರ ನಿಜವರಿಯದೆ ಚರಣ ಸಾಷ್ಟಾಂಗವನು ಮಾಡಿ ನಾ ದಣಿದೆನೊ ಹರಿ ನಿನ್ನ ಕರುಣಾಕಟಾಕ್ಷವಾಗದನಕ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿಯ ಬಿಟ್ಟರೆ ಗತಿಯಿಲ್ಲ

( ರಾಗ ನಾದನಾಮಕ್ರಿಯಾ. ಆದಿ ತಾಳ) ಹರಿಯ ಬಿಟ್ಟರೆ ಗತಿಯಿಲ್ಲ ಮಾರುತಿ ಮರೆತಗೆ ಸಾಧನವಿಲ್ಲ ||ಪ|| ಹರಿ ಒಲಿದವರಿಗೆ ಹನುಮ ಒಲಿವ ಹನುಮ ಒಲಿಯದಿರೆ ಹರಿ ಒಲಿಯಲಿಲ್ಲ ಹರಿಸಂಕಲ್ಪವೆಲ್ಲ ಹನುಮ ಬಲ್ಲ ಹನುಮ ಬಿಟ್ಟುದನು ಹರಿ ತಾನೊಲ್ಲ || ಮೂರವತಾರದಿ ಬಂದು, ಮುಕ್ತಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿ ಕುಣಿದ ನಮ್ಮ

( ರಾಗ ಬೆಹಾಗ್. ಆದಿ ತಾಳ) ಹರಿ ಕುಣಿದ, ನಮ್ಮ ಹರಿ ಕುಣಿದ ||ಪ|| ಅಕಳಂಕಚರಿತ ಮಕರಕುಂಡಲಧರ ಸಕಲರ ಪಾಲಿಪ ಹರಿ ಕುಣಿದ || ಅರಳೆಲೆಮಾಗಾಯಿ ಕೊರಳ ಮುತ್ತಿನ ಸರ ತರಳೆಯರೊಡಗೂಡಿ ಹರಿ ಕುಣಿದ || ಅಂದುಗೆ ಅರಳೆಲೆ ಬಿಂದುಲ್ಲಿ ಬಾಪುರಿ ಚೆಂದದಿ ನಲಿವುತ್ತ ಹರಿ ಕುಣಿದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿ ಹರಿಯೆನಲಿಕ್ಕೆ ಹೊತ್ತಿಲ್ಲ

( ರಾಗ ಪೂರ್ವಿ ಏಕ ತಾಳ) ಹರಿ ಹರಿಯೆನಲಿಕ್ಕೆ ಹೊತ್ತಿಲ್ಲ, ಈ ನರಜನ್ಮ ವ್ಯರ್ಥವಾಗಿ ಹೋಗುತದಲ್ಲ ||ಪ|| ಹರಿಜಾಗರಣೆಯಲ್ಲಿ ಪಾರಣೆ ಚಿಂತೆ ನಿರತ ಯಾತ್ರೆಯಲ್ಲಿ ಶಾಕದ ಚಿಂತೆ ಸರುವ ಸತ್ಕಾರ್ಯದಿ ಧನದ ಮೇಲಿನ ಚಿಂತೆ ಪುರಾಣ ಕೇಳ್ವಾಗ ಗೃಹದ ಚಿಂತೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಣ್ಣು ತಾ ಬೆಣ್ಣೆ ತಾ

( ರಾಗ ಪಂತುವರಾಳಿ/ಕಾಮವರ್ಧಿನಿ. ಅಟ ತಾಳ) ಹಣ್ಣು ತಾ ಬೆಣ್ಣೆ ತಾ, ಗೋಪಮ್ಮ ಹಣ್ಣು ತಾ ಬೆಣ್ಣೆ ತಾ ||ಪ|| ಅಡವಿಯೊಳಗೆ ಅಸುರನ ಕೊಂದ ಕೈಗೆ ಮಡುವಿನೊಳಗೆ ಮಕರನ ಸೀಳ್ದ ಕೈಗೆ ಪೊಡವಿಯೊಳಗೆ ಚೆಂಡನಾಡಿದ ಕೈಗೆ ಕಡುಬೇಗದಿಂದಲಿ ಬೇಡಿದ ಕೈಗೆ || ಶಂಖಚಕ್ರಗಳನು ಪಿಡಿದಂಥ ಕೈಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಾಲು ಉಕ್ಕಿತೋ ರಂಗ ಹಾದಿಯ ಬಿಡೊ

( ರಾಗ ಪುನ್ನಾಗವರಾಳಿ. ಅಟ ತಾಳ) ಹಾಲು ಉಕ್ಕಿತೋ ರಂಗ ಹಾದಿಯ ಬಿಡೊ ||ಪ|| ಹಾಲು ಬೇಕೇನೋ ನಿನಗೆ ಸೆರಗ ಬಿಡೊ ||ಅ|| ಕರವ ಪಿಡಿದರೆನ್ನ ನೌರಸಮುತ್ತಿನ ಸರಗಳು ಹರಿದಾವು ಮುಟ್ಟದಿರೊ ರಂಗ ಭರದಿ ಮುದ್ದು ಕೊಡುವರೇನೊ ಅತ್ತತ್ತ ಸರಿಯೋ ನಮ್ಮವರು ಕಂಡಾರು ಕೃಷ್ಣ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗಡಿಗೆಯ ಮಗಳೆ ಮನೆಗೊಯ್ಯಲಾ

( ರಾಗ ಪೀಲು. ಆದಿ ತಾಳ) ಗಡಿಗೆಯ ಮಗಳೆ ಮನೆಗೊಯ್ಯಲಾ ಅದರೊಳು ಅಡಿಗೆಯ ಮಾಡೋದು ಬಲು ಸವಿಯಣ್ಣ ||ಪ|| ಚಿತ್ತಾರ ಜಾಜಿ ಬರೆಯೋದು ಗಡಿಗೆ ಮತ್ತೆ ಮನೆ ಮನೆ ಬೀರೋದು ಗಡಿಗೆ ಮುತ್ತೈದೆರೆಲ್ಲರು ಅರ್ತಿಲಿ ರೈಠಣ ಮಂಡೆಯಲಿ ಹೊತ್ತು ತಾನೊಯ್ವುದು ಗಡಿಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಷ್ಟು ತಾಳಲಿ ಗೋಪ್ಯಮ್ಮ

( ರಾಗ ಕೇದಾರಗೌಳ. ಅಟ ತಾಳ) ಎಷ್ಟು ತಾಳಲಿ ಗೋಪ್ಯಮ್ಮ , ಏನು ಮಾಡಲಿ ನಿಮ್ಮ ಕೃಷ್ಣನಟ್ಟುಳಿಯ ಘನ, ಇಂದಿನ ದಿನ ||ಪ|| ಉದಯವಾಗದ ಮುನ್ನ ಉದಧಿಶಯನ ನಿನ್ನೆ ದಧಿಘೃತದ ಓಕುಳಿಯೆಮ್ಮೊಳು ಆದಿ ಚದುರೆರೆಲ್ಲರು ಕೂಡಿ ಸಾರಿಯಾಜ್ಞೆಯ ಮಾಡಿ ಸೂರೆಗೊಂಬುವರೆ ಹೀಗೇ ಸುಮ್ಮನೆ ಹೇಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನು ಮರುಳಾದ್ಯಮ್ಮ ಎಲೆ ಭಾರತಿ

( ರಾಗ ಕಾಂಭೋಜ. ಝಂಪೆ ತಾಳ) ಏನು ಮರುಳಾದ್ಯಮ್ಮ ಎಲೆ ಭಾರತಿ ವಾನರನಿಕರದೊಳು ಶ್ರೇಷ್ಠನಾದವಗೆ ||ಪ|| ಕಣ್ಣಿಲ್ಲದವಳ ಗರ್ಭದಲಿ ಜನಿಸಿಬಂದು ನಿನ್ನ ತೊರೆದು ಬ್ರಹ್ಮಚಾರಿಯಾಗಿ ಹಣ್ಣಿಗಾಗಿ ಹೋಗಿ ವನವ ಕಿತ್ತೀಡಾಡಿ ಉಣ್ಣ ಭರದಲಿ ಎಂಜಲೆಲೆಯನೊಯ್ದವಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನು ಕೌತುಕವೊ

( ರಾಗ ಸಾವೇರಿ. ಝಂಪೆ ತಾಳ) ಏನು ಕೌತುಕವೊ ಕೃಷ್ಣ ತಾನೆ ಕನಸಿನೊಳು ಮಾನವರ ತೆರನಂತೆ ಮರುಳಾಡಿಸಿದನೆನ್ನ ||ಪ|| ಹಿಂದೆ ಮಾಡಿದ ಪದವ ಒಂದು ಹೇಳೆಂದೆನುತ ಮುಂದೆ ಅದರಂದವನು ಎಲ್ಲ ತಾ ಪೇಳ್ದ ಒಂದು ದೋಸೆಯ ತನಗೆ ತಂದು ಕೊಡು ಎಂದೆನಲು ತಿಂದು ಮೀಸಲು ಕೊಡೆನು ಎಂದು ಹೇಳಿದನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು