ಆವ ಕಡೆಯಿಂದ ಬಂದೆ

ಆವ ಕಡೆಯಿಂದ ಬಂದೆ ವಾಜಿವದನನೆ ಭಾವಿಸುವ ವಾದಿರಾಜ ಮುನಿಯ ಕಾಣುತ| ಮೇವರೀಸಿ ಮೈವ ತಡವಿ ಸ್ನೇಹದಿಂದಲಿ ಮೇಲು ನೈವೇದ್ಯವನು ಮಿಲಿಯ ಬಂದಿಯಾ| ಮತಿಯ ದೈತ್ಯ ಹೃದಯ ಲೋಭೆ ಮಧ್ವವಲ್ಲಭ ವಲಿಯ ವಾದಿರಾಜ ಮುನಿಗೆ ಸಲಹೋ ಬಂದಿಯಾ| ಇಂತ ಭಕುತಿ ಬೆಲ್ಲಗಡಲೆ ವೈರಾಗ್ಯವ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಣ್ಣು ಕೊಂಡನು ಬಾಲಕೃಷ್ಣನು

( ರಾಗ ಬೇಗಡೆ. ಆದಿ ತಾಳ) ಹಣ್ಣು ಕೊಂಡನು ಬಾಲಕೃಷ್ಣನು ||ಪ|| ಹಣ್ಣು ಬೇಕು ಎಂದು ಸಣ್ಣ ಕೃಷ್ಣನು ಬಂದು ಕಣ್ಣೀರ ತಂದು ಬೆಣ್ಣೆ ಕಳ್ಳ ನಿಂತ ||ಅ|| ದುಡುಕು ಮಾಡಿದ ಪಿಡಿ ನೆಲ್ಲನೆ ಕೊಂಡ ಕಡುವೇಗದಿಂದ ಮಡದಿ ಬಳಿಗೆ ಬಂದ ಸಡಗರದಿಂದ ಪಿಡಿ ನೆಲ್ಲನ ಕೊಟ್ಟ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಣ್ಣು ಕೊಂಬರು ಬನ್ನಿ

( ರಾಗ ಶಂಕರಾಭರಣ. ಅಟ ತಾಳ) ಹಣ್ಣು ಕೊಂಬರು ಬನ್ನಿ, ಹರಿದಾಸರು ಚಿಣ್ಣ ಬಾಲಕೃಷ್ಣನೆಂಬೊ ಹೆಸರಿನ ಹಣ್ಣು ||ಪ|| ಅಜನ ಪಡೆದ ಹಣ್ಣು ಗಜವ ಸಲಹಿದ ಹಣ್ಣು ತ್ರಿಜಗಾದಿ ಗುರುವಿಗೆ ತೋರ್ದ ಹಣ್ಣು ತ್ರಿಜಗವಂದಿತ ಪಾಲನೆಂಬೊ ಮಾವಿನ ಹಣ್ಣು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಣ್ಣು ಬಂದಿದೆ ಕೊಳ್ಳಿರೋ

( ರಾಗ ಬಿಲಹರಿ. ಅಟ ತಾಳ) ಹಣ್ಣು ಬಂದಿದೆ ಕೊಳ್ಳಿರೋ ನೀವೀಗ ಚೆನ್ನ ಬಾಲಕೃಷ್ಣನೆಂಬೊ ಕನ್ನೆ ಬಾಳೆ ||ಪ|| ಹವ್ಯಕವ್ಯದ ಹಣ್ಣು, ಸವಿ ಸಕ್ಕರೆ ಹಣ್ಣು ಭವರೋಗಗಳನೆಲ್ಲ ಕಳೆವ ಹಣ್ಣು ನವನೀತ ಚೋರನೆಂಬೊ ಜವನ ಅಂಜಿಪ ಹಣ್ಣು ಅವನಿಯೊಳು ಶ್ರೀರಾಮನೆಂಬೊ ಹಣ್ಣು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎತ್ತ ಪೋದನಮ್ಮ ವಿಪ್ರನ

( ರಾಗ ಸುರುಟಿ. ಆದಿ ತಾಳ) ಎತ್ತ ಪೋದನಮ್ಮ, ವಿಪ್ರನ ಎಲ್ಲಿ ಹುಡುಕಲಮ್ಮ ||ಪ|| ಮುತ್ತಿನ ಮೂಗುತಿ ಮುಕ್ತಿಲಿ ಬ್ರಾಹ್ಮಣ ಇಕ್ಕೊ ಈಗಲೆಂದು ಮಾಯವಾದನು ||ಅ|| ಪಂಢರಪುರವಂತೆ, ಅಲ್ಲಿ ಪಾಂಡುರಂಗನಂತೆ ತಂಡತಂಡದಿ ಹರಿ ಕೀರ್ತನೆ ಮಾಡುತ ಕಂದನ ಲಗ್ನಕೆ ಪೋಗಬೇಕೆನುತ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏತರ ಕಟಪಟಿ

( ರಾಗ ಕಾಪಿ. ಆದಿ ತಾಳ) ಏತರ ಕಟಪಟಿ ಒಂದಿನ ಹೋಗುತಿದ್ದೆ ಲಟಪಟಿ || ಬರೋವಾಗ್ಗೆ ಏನು ತಂದೆ ಬರುತಲೆ ಎಲ್ಲಾನು ನನ್ನದೆಂದೆ ದುಡ್ಡು ಕೂಡಿಟ್ಟು ಬಳಿದು ಹೋಗುವಾಗ ಬಳಲಿ ಬಳಲಿ ಅಳುಮಾರಿಗೆ ಬಂದೆ || ದೊಡ್ಡ ಮನೆಯ ಕಟ್ಟಿ ಅದರೊಳು ಮಡದಿಯ ಒಯ್ದಿಟ್ಟೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏತರ ಚೆಲುವ ರಂಗಯ್ಯ

( ರಾಗ ಕೇದಾರಗೌಳ. ಛಾಪು ತಾಳ) ಏತರ ಚೆಲುವ ರಂಗಯ್ಯ (, ಇನ್ನೇತರ ಚೆಲುವ )||ಪ|| ಹರಿಯೆಂಬ ಮಾತಿಗೆ ಮರುಳಾದೆನಲ್ಲದೆ ||ಅ|| ದೇಶಕೋಶಗಳುಳ್ಳೊಡೆ ತಾ ಕ್ಷೀರದ ರಾಶಿಯೊಳಗೆ ಮನೆ ಕಟ್ಟುವನೆ ಹಾಸುವುದಕೆ ಹಾಸಿಗೆಯುಳ್ಳೊಡೆ ತಾ ಶೇಷನ ಬೆನ್ನಿಲಿ ಮಲಗುವನೆ ರಂಗ || ಬುದ್ಧಿಯ ಪೇಳುವ ಪಿತನುಳ್ಳೊಡೆ ಬೆಣ್ಣೆ ಕದ್ದು ಚೋರನೆಂದೆನಿಸುವನೆ ಬದ್ಧವಾಹನ ತನಗಿದ್ದರೆ ಹಾರುವ ಹದ್ದಿನ ಮೇಲೇರಿ ತಿರುಗುವನೆ ರಂಗ || ಹಡೆದ ತಾಯಿ ತನಗುಳ್ಳೊಡೆ ಗೋಪರ ಒಡಗೂಡಿ ತುರುವಿಂಡು ಕಾಯುವನೆ ಮಡದಿಯು ಉಳ್ಳೊಡೆ ಅಡವಿಯೊಳಾಡುವ ಹುಡುಗಿಯರ ಸಂಗ ಮಾಡುವನೆ ರಂಗ || ಸಂಗಡ ಉದಿಸಿದ ಅಣ್ಣನಿದ್ದರೆ ನರ- ಸಿಂಗನ ರೂಪವ ಧರಿಸುವನೆ ಅಂಗದ ಮೇಲಿನ ಆಸೆಯಿದ್ದೊಡೆ ಕಾಳಿಂಗನ ಮಡುವಿಲಿ ಧುಮುಕುವನೆ ರಂಗ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎರವಿನ ಸಿರಿಗೆ ಬಿಮ್ಮನೆ ಬೆರೆತರೆ

( ರಾಗ ಸೌರಾಷ್ಟ್ರ. ಅಟ ತಾಳ) ಎರವಿನ ಸಿರಿಗೆ ಬಿಮ್ಮನೆ ಬೆರೆತರೆ ನೀರ ಕಡೆದರುಂಟೆ ಬೆಣ್ಣೆ ಜೀವವೆ ಉರಗಳ ಹೆಡೆಯ ನೆಳಲ ಸೇರಿದ ಕಪ್ಪೆ ಸ್ಥಿರಕಾಲ ಬಾಳ್ವುದೆ ಜೀವವೆ ||ಪ|| ಸತಿ ಸುತರೆಂದು ನೆಚ್ಚಲುಬೇಡ ಮನದೊಳು ಹಿತವರೊಬ್ಬರ ಕಾಣೆ ಜೀವವೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನು ಮ್ಯಾ ರಾವಣ

( ರಾಗ ಮುಖಾರಿ. ಆದಿ ತಾಳ) ಏನು ಮ್ಯಾ ರಾವಣ ನೀನು ಮ್ಯಾ ಸೀತೆಯ ತಂದಿದ್ಯಾ ||ಪ|| ನಿನ್ನ ಬಳಿಗೆ ರಾಮ ಎನ್ನ ಕಳುಹಿಕೊಟ್ಟ ಇನ್ನಾದರು ಸೀತೆಯ ಬಿಡುವಿಯೇನು ಮ್ಯಾ ||ಅ|| ಕಾಣದೆ ಹೀಗೆ ಕದ್ದು ತರಬಹುದೆ ನನ್ನಿಂದ ತಪ್ಪೆಂದು ಹೊನ್ನ ಕಾಣಿಕೆಯಿತ್ತು ಬೆನ್ನ ಮರೆಯಾಗಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನು ಮರುಳಾದ್ಯಮ್ಮ ಎಲೆ ರುಕ್ಮಿಣಿ

( ರಾಗ ಕಾಂಭೋಜ. ಝಂಪೆ ತಾಳ) ಏನು ಮರುಳಾದ್ಯಮ್ಮ ಎಲೆ ರುಕ್ಮಿಣಿ ||ಪ|| ಹೀನಕುಲಗೊಲ್ಲ ಶ್ರೀ ಗೋಪಾಲಕೃಷ್ಣನಿಗೆ ||ಅ|| ಹಾಸಿಕಿಲ್ಲದೆ ಹಾವಿನ ಮೇಲೆ ಒರಗಿದವ ಹೇಸಿಕಿಲ್ಲದೆ ಕರಡಿಯ ಕೂಡಿದ ಗ್ರಾಸಕಿಲ್ಲದೆ ತೊತ್ತಿನ ಮಗನ ಮನೆಲುಂಡ ದೋಷಕಂಜದೆ ಮಾವನ ಶಿರ ತರಿದವಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು