ಗೊಲ್ಲತೇರೆಲ್ಲ ಕೂಡಿ

ಗೊಲ್ಲತೇರೆಲ್ಲ ಕೂಡಿ

( ರಾಗ ನಾದನಾಮಕ್ರಿಯ. ಏಕ ತಾಳ) ಗೊಲ್ಲತೇರಲ್ಲ ಕೂಡಿ ಎನ್ನ ಮೇಲೆ ಇಲ್ಲದ ಸುದ್ದಿ ಪುಟ್ಟಿಸಿ ||ಪ|| ಕಳ್ಳನೆಂದು ದೂರುತಾರೆ ಅಮ್ಮಯ್ಯಾ, ನೀ ಕೇಳಬೇಕೆಂದಾಬಗೆಯ ||ಅ|| ಹರವಿಯ ಹಾಲು ಕುಡಿಯಲು, ಎನ್ನ ಹೊಟ್ಟೆ ಕೆರೆಯೇನೆ ಕೇಳೆ ಅಮ್ಮಯ್ಯ ಕರೆದು ಅಣ್ಣನ ಕೇಳು, ಉಂಟಾದರೆ ಒರಳಿಗೆ ಕಟ್ಟು ಇನ್ನೊಮ್ಮೆ || ಮೀಸಲು ಬೆಣ್ಣೆಯ ಮೆದ್ದರೆ, ಅದು ದೋಷವಲ್ಲವೆ ಎನಗೆ ಅಮ್ಮಯ್ಯ ಆಸೆ ಮಾಡಿದರೆ ದೇವರು ಎನ್ನ ಮೋಸ ಮಾಡಿ ಕಣ್ಣು ಮುಚ್ಚನೆ || ಉಂಗುರ ಕರದಿಂದ ಗೋಪಿ, ತನ್ನ ಶೃಂಗಾರದ ಮಗನೆತ್ತಿ ಮಂಗಳಮೂರುತಿ ಪುರಂದರವಿಠಲನ ಹಿಂಗದೆ ಮುದ್ದಾಡಿ ಪಾಡುತಲಿದ್ದಳು ||
ದಾಸ ಸಾಹಿತ್ಯ ಪ್ರಕಾರ
ಬರೆದವರು