ಹರಿನಾರಾಯಣ ಹರಿನಾರಾಯಣ (೨)

( ರಾಗ ಶಂಕರಾಭರಣ. ಆದಿ ತಾಳ) ಹರಿನಾರಾಯಣ ಹರಿನಾರಾಯಣ ಹರಿನಾರಾಯಣ ಎನು ಮನವೆ ||ಪ|| ನಾರಾಯಣನೆಂಬ ನಾಮದ ಬೀಜವ ನಾರದ ಬಿತ್ತಿದ ಧರೆಯೊಳಗೆ ||ಅ|| ತರಳ ಧ್ರುವನಿಂದ ಅಂಕುರಿಸಿತು ಅದು ವರ ಪ್ರಹ್ಲಾದನಿಂದ ಮೊಳಕೆ ಆಯ್ತು ಧರಣೀಶ ರುಕ್ಮಾಂಗದನಿಂದ ಚಿಗುರಿತು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿನಾರಾಯಣ ಹರಿನಾರಾಯಣ (೧)

( ರಾಗ ಶಂಕರಾಭರಣ. ಆದಿ ತಾಳ) ಹರಿನಾರಾಯಣ ಹರಿನಾರಾಯಣ ಹರಿನಾರಾಯಣ ಎನು ಮನವೆ ||ಪ|| ದುರಿತಶರಧಿಯನುತ್ತರಿಸಬೇಕಾದರೆ ಸಿರಿಯರಸನ ನುತಿಸಿರು ಮನವೆ||ಅ|| ಘೋರತರದ ಸಂಸಾರವು ದುಃಖದ ವಾರಿಧಿ ಇದರೊಳಗೇನುಂಟು ಮೂರುದಿನದ ಬಾಳಿಕೆ ಇದರೊಳಗಾರೈಸುವುದೇತರ ನಂಟು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಣ್ಣು ಬಂದಿದೆ ಜನರು ಹಣ್ಣು ಕೊಳ್ಳಿರೊ

( ರಾಗ ಪಂತುವರಾಳಿ/ಕಾಮವರ್ಧಿನಿ ಛಾಪು ತಾಳ) ಹಣ್ಣು ಬಂದಿದೆ ಜನರು ಹಣ್ಣು ಕೊಳ್ಳಿರೊ ||ಪ|| ಹಣ್ಣು ಎಂಬೊ ಹರಿನಾಮ ಎಂಬೊ ಶ್ರುತಿಯ ನಿಂಬೆಯ ||ಅ|| ಮನದ ಭೂಮಿಯಲಿ ಪುಟ್ಟಿ ಮತಿಗಳಿಂದ ಪಲ್ಲವಿಸಿ ತಮಗೆ ತಮಗೆ ತಿಳಿದ ಹೊತ್ತು ಭಕುತಿಯಿಂದಲಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಣ್ಣಿನಂತೆ ಲಕ್ಷಣ ಇರಬೇಕು

( ರಾಗ ಶಂಕರಾಭರಣ. ಛಾಪು ತಾಳ) ಹಣ್ಣಿನಂತೆ ಲಕ್ಷಣ ಇರಬೇಕು, ಬಾಳೇ- ಹಣ್ಣಿನ ರುಚಿಯಂತೆ ಗುಣವಿರಬೇಕು ||ಪ|| ಒಡಲನೆ ಕಟ್ಟಿ ಒಬ್ಬರಿಗಿಡಬೇಕು ಸುಡುಗಾಡಿಗಳ ಮಾತು ನೀ ಮರೆಯಲುಬೇಕು ನೋಡಿದರೆ ನೋಡಲಿಲ್ಲೆಂಬುದಿರಬೇಕು ನಡತೆಗುಣದಲಿ ಪಾರ್ವತಿಸಮವಿರಬೇಕು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಾ ಹಾ ಹಾ ಹಾ ಮಾನವ ಹೀಗೇಕೆ ಕೆಟ್ಟೆ

( ರಾಗ ದೇಸ್. ಆದಿ ತಾಳ) ಹಾ ಹಾ ಹಾ ಹಾ ಮಾನವ ಹೀಗೇಕೆ ಕೆಟ್ಟೆ ||ಪ|| ಹರಿ ಭಜನೆಯ ಬಿಟ್ಟೆ ||ಅ|| ಜನ್ಮಾಂತರದಲಿ ಮಾಡಿದ ಪುಣ್ಯದಿಂದಿಗೆ ಭೂಸುರ ಜನ್ಮವಕೊಟ್ಟ ದೇವವರೇಣ್ಯ ಸನ್ಮಾನದಿ ಮಾನ್ಯ ಮನ್ಮಥನಯ್ಯನ ಧನ್ಯಚರಿತ್ರನ ಒಮ್ಮಾದರು ನೀ ಮನ್ನಿಸಲಿಲ್ಲ ಟೊಣ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನು ಮಾಡುವುದಿಲ್ಲವಮ್ಮ

( ರಾಗ ರೇಗುಪ್ತಿ. ಝಂಪೆ ತಾಳ) ಏನು ಮಾಡುವುದಿಲ್ಲವಮ್ಮ ನಾನಂತು ನೋಡುವುದಿಲ್ಲವಮ್ಮ ||ಪ|| ನಾನು ಗೋಪರಿಗಾಗಿ ಮನೆಮನೆ ಸುಳಿದರೆ ಮಾನಿನೀರೆಲ್ಲರು ದೂರುಮಾಡುತೈದಾರೆ ||ಅ|| ಕಣ್ಣುಮುಚ್ಚಾಟಕೆ ನಾನು ಅವರ ಬಣ್ಣದ ಸೀರೆಯಲ್ಲಡಗಿದೆನು ಸಣ್ಣವಣಾಟಕ್ಕೆ ನವನೀತ ಮೆದ್ದರೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನು ಮಾಡಿದರೇನು ಹಿಂದಿನ ಕರ್ಮಫಲ

( ರಾಗ ಮುಖಾರಿ. ಝಂಪೆ ತಾಳ) ಏನು ಮಾಡಿದರೇನು ಹಿಂದಿನ ಕರ್ಮಫಲ ತಾನು ಮಾಡಿದ ಕರ್ಮ ತನಗಲ್ಲದೆ ||ಪ|| ಮರಳಿ ಮರಳಿ ನೀರಿನೊಳಗೆ ಪೊಕ್ಕರು ಇಲ್ಲ ಹೊರೆ ಹೊತ್ತು ತಲೆಪರಟಿಯಾದರಿಲ್ಲ ಭರದಿಂದ ಭೂಮಿಯನು ತೋಡಿ ನೋಡಿದರಿಲ್ಲ ಪರರಿಗೆ ಬಾಯ್ದೆರೆದು ಪಲ್ಕಿರಿದರಿಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿಕಥಾಶ್ರವಣ ಮಾಡೋ

( ರಾಗ ಯಮುನಾಕಲ್ಯಾಣಿ. ಆದಿ ತಾಳ) ಹರಿಕಥಾಶ್ರವಣ ಮಾಡೋ, ಪಾಡೋ ಹರಿಕಥಾ ಶ್ರವಣ ಮಾಡೋ ||ಪ|| ಪಥ ವೈಕುಂಠಕಿದು ನೋಡೋ ||ಅ|| ಸರಸಿಜನಾಭನ ಸರ್ವದಾ ಹೊಗಳುತ ದುರಿತ ದೂರಕಿಡಾಡೋ || ಧ್ಯಾನ ಭಕುತಿ ವೈರಾಗ್ಯವೀವ ನಮ್ಮ ಆನಂದತೀರ್ಥರ ಪಾಡೋ || ಪರಮಪುರುಷ ಶ್ರೀಪುರಂದರವಿಠಲನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿಚಿತ್ತ ಸತ್ಯ

( ರಾಗ ಪೂರ್ವಿಕಲ್ಯಾಣಿ. ಅಟ ತಾಳ) ಹರಿಚಿತ್ತ ಸತ್ಯ ಹರಿಚಿತ್ತ ||ಪ|| ನರಚಿತ್ತಕೆ ಬಂದದ್ದು ಲವಲೇಶ ನಡೆಯದು ||ಅ| ಸುದತಿ ಮಕ್ಕಳ ಭಾಗ್ಯ ಬಯಸೋದು ನರಚಿತ್ತ ಮದುವ್ಯಾಗದಿರುವುದು ಹರಿಚಿತ್ತವು ಕುದುರೆ ಅಂದಣ ಆನೆ ಬಯಸೋದು ನರಚಿತ್ತ ಪದಚಾರಿಯಾಗೋದು ಹರಿಚಿತ್ತವಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿನಾಮದರಗಿಣಿಯು ಹಾರುತಿದೆ ಜಗದಿ

( ರಾಗ ಕಾಂಭೋಜ. ಅಟ ತಾಳ) ಹರಿನಾಮದರಗಿಣಿಯು ಹಾರುತಿದೆ ಜಗದಿ ಪರಮ ಭಾಗವತರು ಬಲೆಯ ಬೀಸುವರು ||ಪ|| ಕೋಪವೆಂಬ ಮಾರ್ಜಾಲ ಕಂಡರೆ ನುಂಗುವುದು ತಾಪವೆಂಬುವ ಹುಲಿಯು ಕೊಂಡೊಯ್ವುದು ಕಾಪಾಡಲದನೊಯ್ದು ಹೃದಯದೊಳಗಿಂಬಿಟ್ಟು ಆಪತ್ತಿಗೊದಗುವುದು ಆ ಮುದ್ದು ಅರಗಿಣಿಯು ||
ದಾಸ ಸಾಹಿತ್ಯ ಪ್ರಕಾರ
ಬರೆದವರು