ಹತ್ತಿಗಿಡದ ಕೊನೆ ಹಗೆಯಾಗಿ

( ರಾಗ ಸೌರಾಷ್ಟ್ರ. ಅಟ ತಾಳ) ಹತ್ತಿಗಿಡದ ಕೊನೆ ಹಗೆಯಾಗಿ ಬಿಡದೆ ಮೇಲಿನ್ನೇನಿನ್ನೇನು ಸಮಸ್ತರು ಹಗೆಯಾಗಿ ಸಾಧಿಸಿದ ಮೇಲಿನ್ನೇನಿನ್ನೇನು ||ಪ|| ಗಂಡು ಮಕ್ಕಳೆಂಬೋರು ಪುಂಡರಾದ ಮೇಲಿನ್ನೇನಿನ್ನೇನು ಭಂಡು ಸಂಸಾರವು ಬಯಲಿಗೆ ಬಿದ್ದ ಮೇಲಿನ್ನೇನಿನ್ನೇಲು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಂದಗಮನೆ ಇವನಾರೆ ಪೇಳಮ್ಮ

(ರಾಗ ಮೋಹನ. ಅಟ ತಾಳ )

 

ಮಂದಗಮನೆ ಇವನಾರೆ ಪೇಳಮ್ಮ

ಮಂದರಧರ ಗೋವಿಂದ ಕಾಣಮ್ಮ ||ಪ||

 

ಕೆಂದಳಿರು ನಖ ಶಶಿಬಿಂಬ ಪದಪದ್ಮ

ಅಂದುಗೆ ಇಟ್ಟವನಾರೆ ಪೇಳಮ್ಮ

ಅಂದು ಕಾಳಿಂಗನ ಪೆಡೆಯ ತುಳಿದ ದಿಟ್ಟ

ನಂದನ ಕಂದ ಮುಕುಂದ ಕಾಣಮ್ಮ ||

 

ಉಡುಗೆ ಪೀತಾಂಬರ ನಡುಗೆ ಹೊನ್ನುಡುದಾರ

ಕಡಗ ಕಂಕಣವಿಟ್ಟವನಾರಮ್ಮ

ಮಡದಿ ಕೇಳ್ ಸಕಲ ಲೋಕಂಗಳ ಕುಕ್ಷಿಯೊ-

ಳೊಡನೆ ತೋರಿದ ಜಗದೊಡೆಯ ಕಾಣಮ್ಮ ||

 

ನೀರದನೀಲದಂತೆಸವ ವಕ್ಷದಿ ಕೇ-

ಯೂರಹಾರವನಿಟ್ಟವನಾರಮ್ಮ

ನೀರೆ ಕೇಳು ನಿರ್ಜರರಾದವರಿಗೆ

ಪ್ರೇರಿಸಿ ಫಲವಿತ್ತುದಾರಿ ಕಾಣಮ್ಮ ||

 

ಶಂಖಚಕ್ರವು ಗದೆ ಪದ್ಮ ಕೈಯೊಳಗಿಟ್ಟ-

ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೆತ್ತ ತಾಯಿತಂದೆಗಳ ಚಿತ್ತವ ನೋಯಿಸಿ

( ರಾಗ ಬಿಲಹರಿ. ಆದಿತಾಳ) ಹೆತ್ತ ತಾಯಿತಂದೆಗಳ ಚಿತ್ತವ ನೋಯಿಸಿ ನಿತ್ಯದಾನವ ಮಾಡಿ ಫಲವೇನು ಸತ್ಯಸದಾಚಾರ ಇಲ್ಲದವನು ಜಪ ಹತ್ತುಸಾವಿರ ಮಾಡಿ ಫಲವೇನು ||೧|| ತನ್ನ ಸತಿ ಸುತರು ಬಂಧುಗಳ ನೋಯಿಸಿ ಚಿನ್ನದಾನವ ಮಾಡಿ ಫಲವೇನು ಬಿನ್ನಣದಿಂದಲಿ ದೇಶದೇಶವ ತಿರುಗಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೆಂಡಿರನಾಳುವಳೀ ಕನ್ನಿಕೆ

( ರಾಗ ಶಂಕರಾಭರಣ. ಅಟ ತಾಳ) ಹೆಂಡಿರನಾಳುವಳೀ ಕನ್ನಿಕೆ ಗಂಡನಿಲ್ಲದ ಹೆಂಗಸೀ ಕನ್ನಿಕೆ ||ಪ|| ಮೇರು ಮಂದರವ ಕಡೆಗೋಲನೆ ಮಾಡಿ ಉರಗ ವಾಸುಕಿ ನೇಣಮಾಡಿ ಕ್ಷೀರಾಂಬುಧಿ ಸುರರಸುರರು ಮಥಿಸಲು ಕೂರುಮ ರೂಪವ ಧರಿಸಿದ ಕನ್ನಿಕೆ || ಶಿಶುರೂಪ ತಾಳಿ ಆಲದೆಲೆಯ ಮೇಲೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೊಯ್ಯೋ ಹೊಯ್ಯೋ ಡಂಗುರವ.

( ರಾಗ ಕಾಮವರ್ಧನಿ/ಪಂತುವರಾಳಿ. ಅಟ ತಾಳ) ಹೊಯ್ಯೋ ಡಂಗುರವ ಜಗ- ದಯ್ಯನಯ್ಯ ಶ್ರೀಹರಿಯಲ್ಲದಿಲ್ಲವೆಂದು ಅಷ್ಟೈಶ್ವರ್ಯದ ಲಕ್ಷ್ಮಿಯ ಅರಸನೆ ಸೃಷ್ಟಿ ಸ್ಥಿತಿ ಲಯಾದ್ಯಷ್ಟಕರ್ತ ಘಟ್ಟ್ಯಾಗಿದನು ತಿಳಿದು ಕೃಷ್ಣಾ ಎನದವರೆಲ್ಲ ಭ್ರಷ್ಟರಾದರು ಇಹಪರಕೆ ಬಾಹ್ಯರೆಂದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೊಡೀ ನಗಾರಿ ಮೇಲೆ ಕೈಯ

( ರಾಗ ನಾದನಾಮಕ್ರಿಯೆ. ಆದಿ ತಾಳ) ಹೊಡೀ ನಗಾರಿ ಮೇಲೆ ಕೈಯ, ಘಡ ಘಡ ಹೊಡೀ ನಗಾರಿ ಮೇಲೆ ಕೈಯ ||ಪ|| ಮೃಡ ವಂದ್ಯನ ಪದ ಬಿಡದೆ ಭಜಿಪರಘ ಬಿಡಿಸಿ ಪೊರೆವ ಜಗದೊಡೆಯನೆ ಪರನೆಂದು ||ಅ|| ವೇದಗಮ್ಯ ಸಕಲಾರ್ತಿನಿವಾರಕ ಮೋದವೀವ ಮಧುಸೂದನ ಪರನೆಂದು || ನಿಷ್ಠೆಯಿಂದ ಮನಮುಟ್ಟಿ ಭಜಿಪ ಜನರಿ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಲೋಕ ಭರಿತನೋ

ಲೋಕ ಭರಿತನೋ ರಂಗಾನೇಕ ಚರಿತನೊ ||ಪ|| ಕಾಕು ಜನರ ತರಿದು ತನ್ನೇಕಾಂತ ಭಕ್ತರ ಪೊರೆವ ಕೃಷ್ಣ ||ಅ.ಪ|| ರಾಜಸೂಯ ಯಾಗದಲ್ಲಿ ರಾಜರಾಜರಿರಲು ವಸು- ದೇವಸುತನು ಈತನೆ ಸಭಾಪೂಜೆಗರ್ಹನೆನಿಸಿದಾತ| ಮಿಕ್ಕ ನೃಪರ ಜರಿದು ಅಮಿತವಿಕ್ರಮ ಯದುವರನೆ ತನಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿಯ ದಿವ್ಯ ನಾಮ

( ರಾಗ ಉದಯರಾಗ. ಆಟ ತಾಳ) ಹರಿಯ ದಿವ್ಯ ನಾಮ ||ಪ|| ಹರಿಯ ದಿವ್ಯ ನಾಮ ಮರೆದು ಬಾಯಲಿ ಬರೆ ಮರೆದೊಮ್ಮೆ ಜನ್ಮ ತಾನೆಲ್ಲಿಹುದೊ ||ಅ|| ನಾರಗಾನೆನ್ನಲು ಕೇಳಿ ನಾರಾಯಣ ಕ್ಷೀರಸಾಗರದಲ್ಲಿ ಮಲಗಿರಲು ಬೇಗದಿಂದಲೆ ಒಡಗೊಂಡು ಬನ್ನಿರೊ ಅಜಮಿಳನ ಬಾಧಿಸುತ ಧರೆ ಯಮದೂತರು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿ ಸ್ಮರಿಸಿ ಹರಿ ಭಜಿಸಿ

( ರಾಗ ಕಾಂಭೋಜ. ಝಂಪೆ ತಾಳ) ಹರಿ ಸ್ಮರಿಸಿ ಹರಿ ಭಜಿಸಿ ಹರಿಯ ಮನದೊಳಗಿರಿಸಿ ಹರಿ ಪಾದವಾಶ್ರಯಿಸಿ ಹರಿದಾಸನೆಂದೆನಿಸಿ ||ಪ|| ಘೋರಕರ್ಮವ ಮಾಡಿ ಅನುಭವಿಸಿದಜಮಿಳ ಕಡುಮೋಹದಿ ನಾರಾಯಣನ ನೆನೆದು ಹರಿ ಮಹಾಮಹಿಮನಾ ಚರಣದುಗುರಿನ ಧ್ಯಾನ ಸಿರಿ ಬ್ರಹ್ಮ ಶಿವರೆಲ್ಲ ಮಾಡುತಲಿಹರು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿಸ್ಮರಣೆ ಮಾಡೋ ನಿರಂತರ

( ರಾಗ ಯಮುನಾಕಲ್ಯಾಣಿ. ಛಾಪು ತಾಳ) ಹರಿಸ್ಮರಣೆ ಮಾಡೋ ನಿರಂತರ ||ಪ|| ಪರಗತಿಗೆ ಇದು ನಿರ್ಧಾರ ||ಅ|| ದುರಿತ ಗಜಕ್ಕೆ ಕಂಠೀರವನೆನಿಸಿದ ಶರಣಾಗತರಕ್ಷಕ ಪಾವನ ನೀ || ಸ್ಮರಣೆಗೈದ ಪ್ರಹ್ಲಾದನ ರಕ್ಷಿಸಿದ ದುರುಳ ಹಿರಣ್ಯಕನುದರವ ಸೀಳಿದ || ತರುಣಿ ದ್ರೌಪದಿ ಮೊರೆಯಿಡಲಾಕ್ಷಣ
ದಾಸ ಸಾಹಿತ್ಯ ಪ್ರಕಾರ
ಬರೆದವರು