ಹಾ ಹಾ ಹಾ ಹಾ ಮಾನವ ಹೀಗೇಕೆ ಕೆಟ್ಟೆ
( ರಾಗ ದೇಸ್. ಆದಿ ತಾಳ)
ಹಾ ಹಾ ಹಾ ಹಾ ಮಾನವ ಹೀಗೇಕೆ ಕೆಟ್ಟೆ ||ಪ||
ಹರಿ ಭಜನೆಯ ಬಿಟ್ಟೆ ||ಅ||
ಜನ್ಮಾಂತರದಲಿ ಮಾಡಿದ ಪುಣ್ಯದಿಂದಿಗೆ ಭೂಸುರ ಜನ್ಮವಕೊಟ್ಟ ದೇವವರೇಣ್ಯ
ಸನ್ಮಾನದಿ ಮಾನ್ಯ ಮನ್ಮಥನಯ್ಯನ ಧನ್ಯಚರಿತ್ರನ ಒಮ್ಮಾದರು ನೀ ಮನ್ನಿಸಲಿಲ್ಲ ಟೊಣ್ಯ ||
ತನುವಿನ ಚಿಂತೆ ತನಯರ ಚಿಂತೆ ಧನ ಧಾನ್ಯದ ಚಿಂತೆ
ವನಿತೇರ ಚಿಂತೆ ಉದರದ ಚಿಂತೆ ಅನುದಿನದಲಿ ತನುವ ನೆನೆಸುತ ಕನಗನಂತೆ ||
ಮಡದಿಮಕ್ಕಳಿಗೆ ಒಡವೆಯ ಗಳಿಸಬೇಕೆಂಬೊ ಚಿಂತೆ ಮನೆ ಚಿಂತೆ
ಮಾನ್ಯದ ಚಿಂತೆ ಮನುಜರಿಗೆ ಅನುದಿನ ಪುರಂದರವಿಠಲನ ನೆನೆಯದೆ ಕನಗನಂತೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments