ಮರೆಯದಿರೆಲೆ ಮನವಿಲ್ಲಿ

(ರಾಗ ಪೂರ್ವಿ ಅಟತಾಳ ) ಮರೆಯದಿರೆಲೆ ಮನವಿಲ್ಲಿ, ಯಮ ಪುರಿಗೆ ಒಯ್ದು ಬಾಧಿಸುತ್ತಿಹರಲ್ಲಿ ||ಪ|| ಪರ ನಾರಿಯರ ಸಂಗವಿಲ್ಲಿ, ಉಕ್ಕು ಎರದ ಸತಿಯರ ತಕ್ಕೈಸುವರಲ್ಲಿ ಗುರು ಹರಿಯರ ನಿಂದೆಯಿಲ್ಲಿ, ಬಾಯೋ- ಳರೆದು ಸೀಸವ ಕಾಸಿ ಹೊಯಿಸುವರಲ್ಲಿ || ಉಂಡ ಮನೆಯ ಕೊಂಬುದಿಲ್ಲಿ, ಎದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮರೆಯದಲೆ ಮನದಲ್ಲಿ

(ರಾಗ ಕಾಂಭೋಜ ಝಂಪೆ ತಾಳ ) ಮರೆಯದಲೆ ಮನದಲ್ಲಿ ಸಿರಿವರನ ಚರಣವನು ಸ್ಮರಿಸುವಂಥವರಿಗೆ ನರರೆನ್ನಬಹುದೆ ||ಪ|| ಮುರಹರಗೆ ಎರಗುವಾ ಶಿರ ದ್ವಾರಕಾಪುರವು ಹರಿಕಥೆಯ ಕೇಳುವಾ ಕರ್ಣ ಗೋಕರ್ಣ ಬಿರುದು ಪೊಗಳುವ ಜಿಹ್ವೆ ಸುರರ ಕ್ಷೀರಾರ್ಣವವು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮರೆಯ ಬೇಡ ಮನವೆ ನೀನು

(ರಾಗ ಶಂಕರಾಭರಣ ರೂಪಕ ತಾಳ ) ಮರೆಯ ಬೇಡ ಮನವೆ ನೀನು, ಹರಿಯ ಚರಣವ ಅರುಣ ಕಿರಣ ಚರಣ ಶರಣ, ಪಾತಕ ಪಾವನ ||ಪ || ಸಾಧು ಸಜ್ಜನ ಸಂಗವ ಮಾಡಿ, ವೇದ ಶಾಸ್ತ್ರವನೋದು ನೀ ಮೋದದಿಂದಲಿ ವೇದಗಮ್ಯನ ಪಾದಪಂಕಜ ಧ್ಯಾನಿಸೋ || ಸತಿಯು ಸುತರು ಗತಿಯು ಎಂದು, ಮತಿಯು ಕೆಟ್ಟು ತಿರುಗ ಬೇಡ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮನೆಯೊಳಗಾಡೋ ಗೋವಿಂದ

(ರಾಗ ಕಾಮವರ್ಧನಿ/ಪಂತುವರಾಳಿ ಅಟತಾಳ ) ಮನೆಯೊಳಗಾಡೋ ಗೋವಿಂದ, ನೆರೆ- ಮನೆಗಳಿಗೇಕೆ ಪೋಗುವೆಯೋ ಮುಕುಂದ ||ಪ|| ನೊಸಲಿಗೆ ತಿಲಕವನಿಡುವೆ, ಅಚ್ಚ ಹೊಸ ಬೆಣ್ಣೆಯನಿಕ್ಕಿ ಕಜ್ಜಾಯ ಕೊಡುವೆ ಹೊಸ ಆಭರಣಗಳನಿಡುವೆ, ಮುದ್ದು ಹಸುಳೆ ನಿನ್ನನು ನೋಡಿ ಸಂತೋಷಪಡುವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಣ್ಣಿಂದ ಕಾಯ ಮಣ್ಣಿಂದ

(ರಾಗ ಶಂಕರಾಭರಣ ಅಟತಾಳ ) ಮಣ್ಣಿಂದ ಕಾಯ ಮಣ್ಣಿಂದ ||ಪ|| ಮಣ್ಣಿಂದ ಸಕಲ ದರುಶನಗಳೆಲ್ಲ ಮಣ್ಣಿಂದ ಸಕಲ ವಸ್ತುಗಳೆಲ್ಲ ಮಣ್ಣು ಬಿಟ್ಟವರಿಗೆ ಆಧಾರವಿಲ್ಲ ಅಣ್ಣಗಳಿರೆಲ್ಲರು ಕೇಳಿರಯ್ಯ ||ಅ|| ಅನ್ನ ಉದಕ ಊಟವೀಯೋದು ಮಣ್ಣು ಬಣ್ಣ ಭಂಗಾರ ಬೊಕ್ಕಸವೆಲ್ಲ ಮಣ್ಣು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮನ್ಮಥಜನಕನ ಮರೆತ ಮನುಜರು

(ರಾಗ ಧನಶ್ರೀ ಆದಿ ತಾಳ ) ಮನ್ಮಥಜನಕನ ಮರೆತ ಮನುಜರು ಮರ ಮರ ಮರ ಮರಾ ಮರಾ ಚಿನ್ಮಯರೂಪನ ಚಿಂತಿಸದವನು ಛಿ ಛಿ ಛಿ ಛಿ ಛೀ ಮನುಜ ||ಪ|| ಸುರರಿಂ ವಂದ್ಯನ ಸುತ್ತದ ಕಾಲು ಸೂಳೆಮನೆಮಂಚದ ಕಾಲು ಉರಗಶಯನನ ನುಡಿಯದ ನಾಲಿಗೆ ಉಡುವಿನ ನಾಲಿಗೆಯು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮುದ್ದು ಕೊಡೊ ಬಾರೊ

(ರಾಗ ಮೋಹನ. ಛಾಪು ತಾಳ ) ಮುದ್ದು ಕೊಡೊ ಬಾರೊ ತಂದೆ ರಂಗಯ್ಯ, ನಿನ್ನ ಸುದ್ದಿ ಕೇಳಿದರೆ ಸಾಕೋ ಕೃಷ್ಣಯ್ಯ ||ಪ|| ಎಲ್ಲಿ ಹುಟ್ಟಿದರೇನೊ ರಂಗಯ್ಯ, ನೀನು ಗೊಲ್ಲನಲ್ಲನೆಂಬೊ ಸಿರಿ ಕೃಷ್ಣಯ್ಯ || ರಾಯರ ಮನೆಯಲ್ಲಿ ರಂಗಯ್ಯ, ನಿನ್ನ ಮಾಯ ಮರ್ಮವನು ಕಾಣೆ ಕೃಷ್ಣಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮುಕ್ಕಾ ನಿನ್ನೊಡನೆ.

(ರಾಗ ಮಧ್ಯಮಾವತಿ. ಛಾಪು ತಾಳ ) ಮುಕ್ಕಾ ನಿನ್ನೊಡನೆ ನೋಡೊ ಮುಕ್ಕಾ ||ಪ || ಮುಕ್ಕಾ ನಿನ್ನೊಡನೆ ನೋಡೋ ಸೊಕ್ಕಬೇಡವೆಲೊ ಮುಂದೆ ಕಕ್ಕಸ ಪಡುವಿ ಕನ್ನಡಿ ಒಡೆದರೆ ದಕ್ಕಿಸಿಕೊಂಬ್ಯಾ ಎಲ ಹುಚ್ಚು ಮೂಳ ||ಅ|| ಗುರುಹಿರಿಯರ ನಿಂದೆ ಮಾಡಿ ತಾಯಿತಂದೆಗಳ ಚರಣಸೇವೆಗಳ ಹೋಗಾಡಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮೂಢ ಬಲ್ಲನೆ ಜ್ಞಾನದೃಢಭಕ್ತಿಯ

(ರಾಗ ಮುಖಾರಿ. ಝಂಪೆ ತಾಳ ) ಮೂಢ ಬಲ್ಲನೆ ಜ್ಞಾನದೃಢಭಕ್ತಿಯ ಕಾಡಕಪಿ ಬಲ್ಲುದೆ ಮಾಣಿಕದ ಬೆಲೆಯ ||ಪ|| ಕೋಣ ಬಲ್ಲುದೆ ವೀಣೆ ನುಡಿಯುವ ಸುನಾದವನು ಗೋಣಿ ಬಲ್ಲುದೆ ಎತ್ತಿನ ದುಃಖವ ಪ್ರಾಣ ತೊಲಗಿದ ದೇಹ ಕಿಚ್ಚೇನು ಬಲ್ಲುದೆ ಕ್ಷೋಣಿಯೊಳು ಕುರುಡ ಬಲ್ಲನೆ ಹಗಲು ಇರುಳ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿದಾಸರ ಸಂಗ ದೊರಕಿತು

( ರಾಗ ಆರಭಿ. ಅಟ ತಾಳ) ಹರಿದಾಸರ ಸಂಗ ದೊರಕಿತು ಎನಗೀಗ ಇನ್ನೇನಿನ್ನೇನು ವರಗುರು ಉಪದೇಶ ನೆರವಾಯ್ತು ಎನಗೆ ಇನ್ನೇನಿನ್ನೇನು ||ಪ|| ಮಾಯದ ಸಂಸಾರ ಮಮಕಾರ ತಗ್ಗಿತು ಇನ್ನೇನಿನ್ನೇನು ತೋಯಜಾಕ್ಷನ ನಾಮ ಜಿಹ್ವೆಯೊಳ್ ನೆಲೆಸಿತು ಇನ್ನೇನಿನ್ನೇನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು