ಹರಿ ಹರಿ ಹರಿಯೆಂಬೊ

( ರಾಗ ಧನಶ್ರೀ ಆದಿ ತಾಳ) ಹರಿ ಹರಿ ಹರಿಯೆಂಬೊ ನರಗಿನ್ನೇತರ ಭಯವಿಲ್ಲಿಲ್ಲಲ್ಲಾ ||ಪ|| ಧ್ರುವಗೊಲಿದವ ಶ್ರೀಶಾ ಹುಸ್ಸೆನ್ ಧ್ರುವಪದವಿತ್ತನೆ ಹುಸ್ಸೆನ್ ಭಾವಶುದ್ದಿ ಇರುವಲ್ಲಲ್ಲಿ ಭವಭಯವೆಂಬೊದಿಲ್ಲಲ್ಲಾ || ಕರಿಮೊರೆ ಕೇಳಿದ ಶ್ರೀಶಾ ಹುಸ್ಸೆನ್
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿ ಹರರು ಹೇಗೆ ಸಮರು

( ರಾಗ ಪಂತುವರಾಳಿ/ಕಾಮವರ್ಧಿನಿ. ಅಟ ತಾಳ) ಹರಿ ಹರರು ಹೇಗೆ ಸಮರು ಹರಿಹರ ಭಕ್ತರೆ ಇದಕೆ ಸಾಕ್ಷಿ ||ಪ|| ಹರಿಯ ಮಂದಿರ ವೈಕುಂಠಸ್ಥಾನ ಹರನ ಮಂದಿರ ಶ್ಮಶಾನ ಹರಿಯ ಪಟ್ಟದ ರಾಣಿ ಸಿರಿದೇವಿ ಎಂಬರು ಹರನ ಪಟ್ಟದ ರಾಣಿ ಗಿರಿಜೆ ಎಂಬರು || ಹರಿಯು ಉಡುವೋದು ಪೀತಾಂಬರ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾ ಮುಂದೆ ರಂಗ ನೀ ಎನ್ನ ಹಿಂದೆ

(ರಾಗ ಕಾಂಭೋಜಿ. ಝಂಪೆ ತಾಳ ) ನಾ ಮುಂದೆ ರಂಗ ನೀ ಎನ್ನ ಹಿಂದೆ ಎಂದೆಂದು ನಿನ್ನ ನಾಮವ ಎಂದಂಬೆ ||ಪ|| ಅನಾಥನು ನಾನು ಎನಗೆ ಬಂಧು ನೀನು ಹೀನನು ನಾನು ದಯವಂತ ನೀನು ಧ್ಯಾನಮಂತ್ರನು ನೀನು ಧ್ಯಾನಿಸುವನು ನಾನು ಜ್ಞಾನಗಮ್ಯನು ನೀನು ಅಜ್ಞಾನಿ ನಾನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾಚಿಕೆಗೊಳಬೇಡ ಮನದಲಿ

(ರಾಗ ಸುರುಟಿ ಆದಿತಾಳ ) ನಾಚಿಕೆಗೊಳಬೇಡ ಮನದಲಿ , ಯೋಚಿಸಿ ಕೆಡಬೇಡ ||ಪ|| ನೀಚವೇನೊ ನಮ್ಮಚ್ಯುತನೋಲಗ , ಮೆಚ್ಚಿ ಕೊಟ್ಟಿದೆ ನಿನಗ್ಹೆಚ್ಚಿನ ಪದವಿಯು ||ಅ|| ಹರಿ ಹರಿ ಎಂದೊದರೊಹತ್ತಿದ, ದುರಿತಗಳಿಗೆ ಬೆದರೊ ನೀರಜಾಕ್ಷ ನಿರ್ಜರಪತಿ ಹರಿಯೆಂದು, ಚೀರಿ ಹಾರಿ ಭೋರಿಡುತಲಿ ಕುಣಿಯೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮುದ್ದು ತಾರೋ ,ರಂಗ

(ರಾಗ ಧನಶ್ರೀ. ಆದಿ ತಾಳ ) ಮುದ್ದು ತಾರೋ ,ರಂಗ, ಎದ್ದು ಬಾರೋ ||ಪ|| ಅಂದವಾದ ಕರ್ಪೂರದ ಕರಡಿಗೆಯ ಬಾಯೊಳೊಮ್ಮೆ ||ಅ|| ವಿಷವನುಣಿಸಲು ಬಂದ ಅಸುರೆ ಪೂತನಿಯ ಕೊಂದೆ ವಶವಲ್ಲವೊ ಮಗನೆ ನಿನ್ನ ವಿಷವನುಂಡ ಬಾಯೊಳೊಮ್ಮೆ || ಕಡೆವ ಸಮಯದಿ ಬಂದು ಕಡೆವ ಸತಿಯ ಕೈಯ ಪಿಡಿದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿಯೇ ಸರ್ವೋತ್ತಮ ಹರಿಯೆ ಪರದೇವತೆ

( ರಾಗ ಸಾವೇರಿ. ಝಂಪೆ ತಾಳ) ಹರಿಯೇ ಸರ್ವೋತ್ತಮ ಹರಿಯೆ ಪರದೇವತೆ ||ಪ|| ಹರಿಯಲ್ಲದನ್ಯತ್ರ ದೈವಗಳುಂಟೆಂದು ಉರಗನ ಮುಂಡಿಗೆಯ ಯಾರಾದರೆತ್ತಲಿ ||ಅ || ವಿಶ್ವತಶ್ಚಕ್ಷು ನೀನೇ ವಿಶ್ವತೋಮುಖ ನೀನೇ ವಿಶ್ವತೋಬಾಹು ವಿಶ್ವದುದರ ನೀನೇ ವಿಶ್ವವ್ಯಾಪಕ ವಿಶ್ವಸೂತ್ರಧರ ನೀನೇ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮುಟ್ಟಬೇಡವೋ ಎನ್ನನು ಕೃಷ್ಣಯ್ಯ

(ರಾಗ ಝಂಜೂಟಿ. ಛಾಪು ತಾಳ ) ಮುಟ್ಟಬೇಡವೋ ಎನ್ನನು ಕೃಷ್ಣಯ್ಯ ನೀ ||ಪ|| ದುಡುಕು ಮಾಡಲು ಬೇಡವೋ ದೂರ ನಿಲ್ಲೋ ||ಅ|| ದೊರೆತನದ ಬಾಳು ಮತ್ತು ಕೇಳಯ್ಯ ಕೃಷ್ಣ ಹಿರಿತನದ ಪೆರ್ಮೆಯುಳ್ಳ ದೊರೆಮಗನಾದರೇನು ಸಲ್ಲದೊ ಈ ಕಾರ್ಯ ಸೆರಾ ಬಿಡಲೊ ರಂಗ ಚರಣಕ್ಕೆ ಎರಗುವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿಯಧಿಕ ಹರನಧಿಕನೆಂದು ಬಡೆದಾಡದಿರಿ

( ರಾಗ ಕಾಂಭೋಜ. ಝಂಪೆ ತಾಳ) ಹರಿಯಧಿಕ ಹರನಧಿಕನೆಂದು ಬಡೆದಾಡದಿರಿ ಹರಿಹರ ಭಕುತರೆ ಇದಕೆ ಸಾಕ್ಷಿ ||ಪ|| ಹರಿಯು ಬಾಗಿಲ ಕಾಯ್ದು ಬಲಿ ಭಾಗ್ಯವಂತನಾದ ಹರನು ಬಾಗಿಲ ಕಾಯ್ದು ಬಾಣನಳಿದ ಹರಿಯೊಲಿದು ಭೀಮನಿಗೆ ಪರಿಪೂರ್ಣ ವರವಿತ್ತ ಹರನೊಲಿದು ಜರಾಸಂಧ ಹತನಾದುದರಿಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೇಗೆ ಮೆಚ್ಚಿಸಲಿ ಅರ್ಚಿಸಲಿ ನಿನ್ನ

( ರಾಗ ಶಂಕರಾಭರಣ. ತ್ರಿಪುಟ ತಾಳ) ಹೇಗೆ ಮೆಚ್ಚಿಸಲಿ ಅರ್ಚಿಸಲಿ ನಿನ್ನ ನಾಗಶಯನನ ನಾರದ ವಂದನೆ ದೇವ ||ಪ|| ಮಂಗಳಾಭಿಷೇಕಕೆ ಉದಕ ತರುವೆನೆನೆ ಗಂಗೆಯಂಗುಷ್ಠದಿ ಪಡೆದಿರುವೆ ಸಂಗೀತ ಕೀರ್ತನೆ ಪಾಡುವೆನೆಂದರೆ ತುಂಬುರು ನಾರದರು ಪಾಡುತಿಹರೋ ದೇವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೇಗೆ ಮಾಡಬೇಕೋ ವಿಠಲ ತಂದೆ

( ರಾಗ ಕಮಾಚ್. ಆದಿ ತಾಳ) ಹೇಗೆ ಮಾಡಬೇಕೋ ವಿಠಲ ತಂದೆ , ಹೇಗೆ ಮಾಡಬೇಕೋ ||ಪ|| ಹೇಗಾದರು ದುರಿತಗಳೆನ್ನ ಕಾಡದ , ಹಾಗೆ ಮಾಡಬೇಕೋ ||ಅ|| ಇಂದಿನ ನರಜನ್ಮವೋ ನಿನ್ನ ಕೃಪೆಯಿಂದ ದೊರಕಿತಲ್ಲೊ ಮುಂದೆನ್ನ ತಾಯ ಗರ್ಭದಿಂದ ಜನಿಸಿದ ಹಾಗೆ ಮಾಡಬೇಕೋ ವಿಠಲ ತಂದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು