ಮಾಯವಾದಿ ಗಂಡನೊಲ್ಲೆನೆ

(ರಾಗ ಕಾಮವರ್ಧನಿ/ಪಂತುವರಾಳಿ ಅಟತಾಳ ) ಮಾಯವಾದಿ ಗಂಡನೊಲ್ಲೆನೆ, ಅವನ ಮಾಯರಾಣಿ ಪೂಜೆ ಮಾಡಲಾರೆನಕ್ಕ ||ಪ || ಹೆಗಲ ಹಸಿಬೆಯೊಳಗಿಟ್ಟ ಮಡಿಯನುಟ್ಟು ಗಗನದಿಂದಿಳಿದ ಗಂಗೆಯ ತೀರದಿ ಅಗೆಯ ಮೃತ್ತಿಕೆಯ ಸರ್ವಾಂಗಕ್ಕೆ ಲೇಪಿಸಿ ಎ- ನಗೆ ಮೈಯ ತೊಳೆಯಲೀಸನೆ ಭ್ರಷ್ಟ ಖೋಡಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಲಾಲಿ ಲಾಲಿ ನಮ್ಮ ಹರಿಯೆ ಲಾಲಿ

(ರಾಗ ಪೀಲು ಆದಿ ತಾಳ ) ಲಾಲಿ ಲಾಲಿ ನಮ್ಮ ಹರಿಯೆ ಲಾಲಿ ||ಪ || ಸುರನರರಿಗೆ ಒಲಿದು ಕರುಣವ ಬೀರುವ ದೊರೆಯೆ ಲಾಲಿ ||ಅ || ರಾಮ ಲಾಲಿ ಮೇಘಶ್ಯಾಮ ಲಾಲಿ ರಮಾಮನೋಹರ ಅಮಿತಸದ್ಗುಣಧಾಮ ಲಾಲಿ || ಕೃಷ್ಣ ಲಾಲಿ ಸರ್ವೋತ್ಕೃಷ್ಟ ಲಾಲಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಲಕ್ಷ್ಮೀಕಾಂತ ಬಾರೋ

(ರಾಗ ಶಂಕರಾಭರಣ ಆದಿ ತಾಳ ) ಲಕ್ಷ್ಮೀಕಾಂತ ಬಾರೋ ಶುಭಲಕ್ಷಣವಂತ ಬಾರೋ ಪಕ್ಷಿವಾಹನವೇರಿದನೆ ಪಾವನಮೂರ್ತಿ ಬಾರೋ ||ಪ || ಆದಿಮೂಲ ವಿಗ್ರಹವಿನೋದಿ ನೀನೆ ಬಾರೋ ಸಾಧುಸಜ್ಜನ ಸತ್ಯಯೋಗಿ(/ಸತ್ಯಯೋನಿ?) ದಾನಿ ನೀನೆ ಬಾರೋ || ಗಾಡಿಗಾರ ಕೃಷ್ಣ ನಿನ್ನ ಬೇಡಿಕೊಂಬೆ ಬಾರೋ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಲಗ್ಗೆಯೋ ವೈಕುಂಥ ಲಗ್ಗೆಯೋ

(ರಾಗ ಕಲ್ಯಾಣಿ ಅಟತಾಳ) ಲಗ್ಗೆಯೋ ವೈಕುಂಥ ಲಗ್ಗೆಯೋ ||ಪ || ಒಗ್ಗಿಲಿ ಶ್ರೀಹರಿಯನಾಡೊ ಸುಜನರ್ಗೆ ||ಅ || ಸಂಸಾರವೆಂಬೋದು ಸದರವಲ್ಲವೆಂದು ಸಂಶಯವೆಂಬೋದು ಇನಿತಿಲ್ಲದೆ ಹಂಸನ ತನ್ನ ಮನೆಯೊಳು ನೇಮಿಸಿ ಕಂಸಾರಿಯೆಡೆಯೊಳು ಕಡುಸ್ನೇಹ ಮಾಳ್ವಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಲೊಟಪಾಟ ಸಂಸಾರ ಏನಣ್ಣ

(ರಾಗ ಕಾಮವರ್ಧನಿ/ಪಂತುವರಾಳಿ ಅಟತಾಳ ) ಲೊಟಪಾಟ ಸಂಸಾರ ಏನಣ್ಣ ಲೊಟಪಾಟ ಸಂಸಾರದೊಳಗೆ ಸಿಲುಕಿ ನಾ ವಿಠಲ ನಿನ್ನ ಧ್ಯಾನವ ಮರೆತೆನಯ್ಯ ||ಪ|| ಹುಟ್ಟಿದ್ದ ಮುಂಚೆ ಹಸಿವೆಯನರಿಯೆ ಕೊಟ್ಟಿಗೆಯೊಳಗೆ ಎಂಟು ಆನೆಯ ಕಂಡೆ ಮನೆಯ ಒಳಗೆ ಏಳು ಕುದುರೆಯ ಕಂಡೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಧ್ವ ಮುನಿಯೇ ನಮ್ಮ ಗುರು

(ರಾಗ ಕಾಮವರ್ಧಿನಿ/ಪಂತುವರಾಳಿ ಆದಿ ತಾಳ ) ಮಧ್ವಮುನಿಯೇ ನಮ್ಮ ಗುರು ಮಧ್ವಮುನಿಯೇ ||ಪ || ಮಧ್ವಮುನಿ ನಮ್ಮನ್ನೆಲ್ಲ ಉದ್ಧರಿಸುವ ಕಾಣಿರೋ ||ಅ || ಹಿಂದೆ ಹನುಮಂತನಾಗಿ ಬಂದು ರಾಮರ ಪಾದಾರ- ವಿಂದವ ಸೇವಿಸುತ ಆನಂದದಿಂದ ಶೋಭಿಸಿದ || ಏಣಾಂಕ ವಂಶಾಬ್ಧಿಸೋಮ ಕ್ಷೋಣಿಪಾಲಕರ ಶಿರೋ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮನವೆನ್ನ ಮಾತ ಕೇಳದು ಮಂದಜ್ಞಾನದಿ

(ರಾಗ ಶಂಕರಾಭರಣ ಅಟತಾಳ ) ಮನವೆನ್ನ ಮಾತ ಕೇಳದು ಮಂದಜ್ಞಾನದಿ ತನುವಿನಾಸೆಯು ಬಿಡಲೊಲ್ಲದು ||ಪ || ದೇಹಸಂಬಂಧಿಗಳಾದವರೈವರು ಮೋಹಪಾಶದಿ ಕಟ್ಟಿ ಬಿಗಿದಿಹರೈ ದೇಹವನಿತ್ಯವೆಂಬುದ ಗುರುತರಿಯದೆ ಮಾಯ ಪ್ರಪಂಚವೆಂಬುದು ಬದ್ಧವಾಗಿದೆ || ಸಾಧುಸಜ್ಜನರ ಸಂಗವ ಮಾಡಿ ಪರಗತಿಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಾನಹೀನನಿಗಭಿಮಾನವೇಕೆ

(ರಾಗ ಕಾಂಭೋಜ ಅಟತಾಳ ) ಮಾನಹೀನನಿಗಭಿಮಾನವೇಕೆ ||ಪ || ಜ್ಞಾನವಿಲ್ಲದವಂಗೆ ಗುರುಬೋಧೆಯೇಕೆ ||ಅ || ಕಾಡೊಳಗೆ ತಿರುಗುವಗೆ ಕನಕಭೂಷಣವೇಕೆ ಓಡೊಳೊಗೆ ತಿಂಬುವಗೆ ಹರಿವಾಣವೇಕೆ ಬೇಡಿದರೆ ಕೊಡದಿಹಗೆ ಕಡುಬಿಂಕತನವೇಕೆ ಪಾಡಲರಿಯದವಂಗೆ ಪ್ರೌಢತನವೇಕೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಾಧವ ಮದುಸೂಧನ

(ರಾಗ ಸಾವೇರಿ ಅಟತಾಳ ) ಮಾಧವ ಮಧುಸೂಧನ ಯಾದವಕುಲರನ್ನ ಬಾರೆಂದು ಕರೆದಳೆಶೋದೆ ಮುದ್ದಿಸಿ ಮಗನ ||ಪ || ಸಂಗಡಿಗರನೆಲ್ಲ ಬಿಟ್ಟು ಬಾರಯ್ಯ ಚೆಲುವ ಮುಂಗಯ್ಯ ವಾಕು ಬೆರಳ್ಹೊನ್ನುಂಗುರ ಝಂಗಿಪ ಉಡಿಗೆಜ್ಜೆ ಉಡಿದಾರವ ಕಂಡು ಅಂಗನೆಯರು ನಿನ್ನನೊಯ್ವರೊ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮದ್ದು ಮಾಡಲರಿಯೆ

(ರಾಗ ಮಧ್ಯಮಾವತಿ ತ್ರಿಪುಟ ತಾಳ ) ಮದ್ದು ಮಾಡಲರಿಯೆ ಮುದ್ದು ರಮಾದೇವಿ ||ಪ || ಮುದ್ದು ಬಾಲಕೃಷ್ಣನಲಿ ಮನ ಸಿದ್ಧವಾಗಿ ನಿಲ್ಲುವಂತೆ || ವಚನಗಳೆಲ್ಲ ವಾಸುದೇವನ ಕಥೆಯೆಂದು ರಚನೆ ಮಾಡುವಲ್ಲಿ ರಕ್ತಿ ನಿಲ್ಲೋ ಹಾಗೆ || ಸಂತೆ ನೆರಹಿದ ಸತಿಸುತರು ತನ್ನವರೆಂಬ
ದಾಸ ಸಾಹಿತ್ಯ ಪ್ರಕಾರ
ಬರೆದವರು