ಹರಿನಾರಾಯಣ ಹರಿನಾರಾಯಣ (೨)

ಹರಿನಾರಾಯಣ ಹರಿನಾರಾಯಣ (೨)

( ರಾಗ ಶಂಕರಾಭರಣ. ಆದಿ ತಾಳ) ಹರಿನಾರಾಯಣ ಹರಿನಾರಾಯಣ ಹರಿನಾರಾಯಣ ಎನು ಮನವೆ ||ಪ|| ನಾರಾಯಣನೆಂಬ ನಾಮದ ಬೀಜವ ನಾರದ ಬಿತ್ತಿದ ಧರೆಯೊಳಗೆ ||ಅ|| ತರಳ ಧ್ರುವನಿಂದ ಅಂಕುರಿಸಿತು ಅದು ವರ ಪ್ರಹ್ಲಾದನಿಂದ ಮೊಳಕೆ ಆಯ್ತು ಧರಣೀಶ ರುಕ್ಮಾಂಗದನಿಂದ ಚಿಗುರಿತು ಗುರುಪಿತಾಮಹನಿಂದ ಹೂವಾಯಿತು || ವಿಜ್ಯನ ಸತಿಯಿಂದ ಫಲವಾಯಿತು ಅದು ಗಜರಾಜನಿಂದ ದೊರೆ ಹಣ್ಣಾಯಿತು ದಿವಿಜ ಶುಕಮುನಿಯಿಂದ ಫಲ ಪಕ್ವವಾಯಿತು ಅಜಮಿಳ ತಾನುಂಡು ರಸ ಸವಿದ || ಕಾಮಿತ ಫಲವೀವ ನಾಮವೊಂದಿರಲಿಕೆ ಹೋಮನೇಮ ಜಪತಪವೇಕೆ ಸ್ವಾಮಿ ಪುರಂದರವಿಠಲನಾಮವ ನೇಮದಿಂದ ನೆನೆ ಮನವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು