ಹರಿಸ್ಮರಣೆ ಮಾಡೋ ನಿರಂತರ

ಹರಿಸ್ಮರಣೆ ಮಾಡೋ ನಿರಂತರ

( ರಾಗ ಯಮುನಾಕಲ್ಯಾಣಿ. ಛಾಪು ತಾಳ) ಹರಿಸ್ಮರಣೆ ಮಾಡೋ ನಿರಂತರ ||ಪ|| ಪರಗತಿಗೆ ಇದು ನಿರ್ಧಾರ ||ಅ|| ದುರಿತ ಗಜಕ್ಕೆ ಕಂಠೀರವನೆನಿಸಿದ ಶರಣಾಗತರಕ್ಷಕ ಪಾವನ ನೀ || ಸ್ಮರಣೆಗೈದ ಪ್ರಹ್ಲಾದನ ರಕ್ಷಿಸಿದ ದುರುಳ ಹಿರಣ್ಯಕನುದರವ ಸೀಳಿದ || ತರುಣಿ ದ್ರೌಪದಿ ಮೊರೆಯಿಡಲಾಕ್ಷಣ ಭರದಿಂದಕ್ಷಯವಿತ್ತ ಮಹಾತ್ಮನ || ಅಂದು ಅಜಾಮಿಳ ಕಂದನ ಕರೆಯಲು ಬಂದು ಸಲಹಿ ಆನಂದವ ತೋರಿದ || ಶ್ರೀಶ ಪುರಂದರವಿಟ್ಠಲರಾಯನ ಸೃಷ್ಟಿಗೊಡೆಯನ ಮುಟ್ಟಿ ಭಜಿಸಿ ನೀ ||
ದಾಸ ಸಾಹಿತ್ಯ ಪ್ರಕಾರ
ಬರೆದವರು