ಮುಟ್ಟಿ ಮುಟ್ಟಿ ಮುಟ್ಟಿ ಮುದ್ದು ವಿಟ್ಠಲ

(ರಾಗ ಮೇಚಗೌಳ ಧ್ರುವ ತಾಳ ) ಮುಟ್ಟಿ ಮುಟ್ಟಿ ಮುಟ್ಟಿ ಮುದ್ದು ವಿಟ್ಠಲ ನಿಷ್ಠೆಯಿಂದ ನೈವೇದ್ಯ ಇಡುವ ತನಕ ||ಪ|| ಪಂಚರಾತ್ರಾಗಮ ಪೂಜೆಗಳಿಂದ ಕಿಂಚಿತು ಭಕುತಿಯಿಂದಲೆ ಮಾಡಲು ಚಂಚಲಮನವ ಮಾಡಗೊಡಲು ಬೇಡ ಪಂಚಪಾಂಡವಪ್ರಿಯ ವಿರಿಂಚಾಧೀಶನೆ || ಸಣ್ಣಕ್ಕಿ ಅನ್ನ ಪರಮಾನ್ನಗಳಿಂದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಾಡಬಾರದೆ ಮದ್ದು

(ರಾಗ ಶಂಕರಾಭರಣ ಆದಿ ತಾಳ ) ಮಾಡಬಾರದೆ ಮದ್ದು ಮಾಯಾದೇವಿ, ಮಾಡಬಾರದೆ ||ಪ || ಕರಗಳಿಂದಲಿ ಹರಿಯ ಮಂದಿರದ ಕಸವ ತೆಗೆಯೋದಕ್ಕೆ ನಿರತದಲ್ಲಿ ಬೇಸರದೆ ಹರುಷ ಪುಟ್ಟೋ ಹಾಗೆ || ವಚನಗಳೆಲ್ಲ ಶಾಸ್ತ್ರಪ್ರವಚನೆಯೆಂದು ತಿಳಿದುಕೊಂಡು ಅಚಲಿತಭಕ್ತಿಯಲಿ ನಿತ್ಯ ರಚನೆ ಪುಟ್ಟೋ ಹಾಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಾರುತವತಾರನೀತ

(ರಾಗ ಶಂಕರಾಭರಣ ಆದಿ ತಾಳ ) ಮಾರುತವತಾರನೀತ ನಮ್ಮ ಗುರು ಕಾಣಿರೋ ಭಾರತಿಯ ರಮಣನೇ ಮೂಲಗುರು ಕಾಣಿರೋ ||ಪ || ಸಂತತಿಸಹಿತ ರಾವಣಬಲವ ತರಿದ ಹೊಂತಕಾರಿ ಹನುಮಂತ ನಮ್ಮ ಗುರು ಕಾಣಿರೋ ಅಂತಕನ ಪುರಿಗೆ ಕೌರವರನು ಕಳುಹಿದ ಪಂಥದೊಳು ಭೀಮಸೇನ ಮೂಲ ಗುರು ಕಾಣಿರೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹುಚ್ಚು ಕುನ್ನಿ ಮನವೇ ನೀ

( ರಾಗ ಶಂಕರಾಭರಣ ಆದಿ ತಾಳ) ಹುಚ್ಚು ಕುನ್ನಿ ಮನವೇ ನೀ , ಹುಚ್ಚುಗೊಂಬುದು ಘನವೆ ಕಚ್ಚುಕದನತನವ ಬಿಟ್ಟು , ಅಚ್ಯುತನ ಪಾದ ಮುಟ್ಟು ||ಪ|| ಸ್ನಾನ ಮಾಡಿದರೇನು, ಸಂಧ್ಯಾನ ಮಾಡಿದರೇನು ಹೀನತನವ ಬಿಡಲಿಲ್ಲ ನೀ , ಸ್ವಾನುಭವವ ಕೂಡಲಿಲ್ಲ || ಜಪ ಮಾಡಿದರೇನು ನೀ, ತಪ ಮಾಡಿದರೇನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹುಚ್ಚು ಹಿಡಿಯಿತು ಎನಗೆ

( ರಾಗ ಗೌಳಿಪಂತು ಆದಿ ತಾಳ) ಹುಚ್ಚು ಹಿಡಿಯಿತು ಎನಗೆ, ಹುಚ್ಚು ಹಿಡಿಯಿತು ||ಪ|| ಅಚ್ಯುತನ ಧ್ಯಾನವೆಂಬೊ ಅಚ್ಚುಮೆಚ್ಚು ತಲೆಗೆ ಏರಿ ||ಅ || ವಾಸುದೇವನೆಂಬ ನಾಮ ವದನದಲ್ಲಿ ಒದರುವೆ, ಮಾಯಾ ಪಾಶವೆಂಬೊ ಅಂಗಿಯನ್ನು ಹರಿದು ಹರಿದು ಹಾಕುವೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಾಂಗೆ ಇರಬೇಕು ಸಂಸಾರದಲ್ಲಿ

( ರಾಗ ಮುಖಾರಿ ಅಟತಾಳ)

ಹಾಂಗೆ ಇರಬೇಕು ಸಂಸಾರದಲ್ಲಿ

ಹ್ಯಾಂಗೆ ಬರೆದಿತ್ತೋ  ಪ್ರಾಚೀನದಲ್ಲಿ ||

 

ಪಕ್ಷಿ ಅಂಗಳದಲ್ಲಿ ಬಂದು ಕೂತಂತೆ

ಆ ಕ್ಷಣದಲ್ಲಿ ಹಾರಿ ಹೋದಂತೆ

ನಾನಾ ಪರಿಯಲ್ಲಿ ಸಂತೆ ನೆರೆದಂತೆ

ನಾನಾ ಪಂಥವ ಹಿಡಿದು ಹೋದಂತೆ ||


ವಸ್ತಿಗಾರನು ವಸ್ತಿ ಬಂದಂತೆ 

ಹೊತ್ತಾರೆ ಎದ್ದು ಹೊರಟುಹೋದಂತೆ 

ಸಂಸಾರವೆಂಬೋ ಪಾಶ ನೀನೇ ಬಿಡಿಸಯ್ಯ 

ಕಂಸಾರಿ ಪುರಂದರವಿಠಲರಾಯ  ||

 

( ....

ಆಡುವ ಮಕ್ಕಳು ಮನೆ ಕಟ್ಟಿದರು ಆಟ ಸಾಕೆಂದು ಮುರಿದು ಓಡಿದರು ....) 

 

 

ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೇಳಬಾರದೆ ಬುದ್ಧಿಯ ಕೃಷ್ಣಯ್ಯಗೆ

( ರಾಗ ಘಂಟಾರವ ಏಕ ತಾಳ) ಹೇಳಬಾರದೆ ಬುದ್ಧಿಯ ಕೃಷ್ಣಯ್ಯಗೆ ||ಪ|| ಗಟ್ಯಾಗಿ ಕದವನಿಕ್ಕಿ ನಾವೆಲ್ಲ ಕೊಟ್ಟಿಗೆಯಲೊರಗಿದ್ದೆವು ನಟ್ಟ- ನಡುವಿನಲ್ಲಿದ್ದ ಚಿಕ್ಕ ಮಕ್ಕಳೆಲ್ಲ ಕಟ್ಟಕಡೆಯಲಿಟ್ಟನೆ ಗೋಪ್ಯಮ್ಮ || ಹಾಲುಗಳ್ಳನೆಂದು ನಿನ್ನ ಮಗನ ಹಾದಿಗ್ಹೋಗದಿದ್ದೇವೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕುದುರೆ ಬಂದಿದೆ ಚೆಲುವ

ಕುದುರೆ ಬಂದಿದೆ ಚೆಲುವ ಕುದುರೆ ಬಂದಿದೆ |ಪ| ವಾದಿರಾಜರಿಗೊಲಿದು ಬಂದು ಸ್ವಾದಿಪುರದಲ್ಲಿ ನಿಂದ|ಅ.ಪ| ಮುಂಗಾಲು ಕೆದರಿ ಕುಣಿವ ಕುದುರೆ ಹಿಂಗಾಲಿಲಸುರರ ಒದೆವ ಕುದುರೆ| ರಂಗನೆಂದರೆ ಸಲಹೊ ಕುದುರೆ ತುಂಗ ಹಯವದನ ಕುದುರೆ|| ಹಲ್ಲಣದೊಳಗೆ ನಿಲ್ಲದು ಕುದುರೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಈ ಮುದ್ದು ಕೃಷ್ಣನ

ಈ ಮುದ್ದು ಕೃಷ್ಣನ ಕ್ಷಣದ ಸುಖವೇ ಸಾಕು ಶ್ರೀ ಮಧ್ವಮುನಿಯ ಮನೆದೈವ ಉಡುಪಿನ ಕೃಷ್ಣ|| ಚೆಲುವ ಚರಣದ್ವಂದ್ವ ಜಂಘಜಾನೂರುಕಟಿ ವಳಿ ಪಂಕ್ತಿ ಜಠರ ವಕ್ಷಸ್ಕಂಬುಕಂಧರದಿ| ನಳಿತೋಳು ಮುದ್ದುಮುಖ ನಳಿನ ನಾಸಿಕ ಕರ್ಣ ಸುಳಿಗುರುಳು ಮಸ್ತಕದ ನಳಿನನಾಭನ ಸೊಬಗು||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮತದೊಳಗೆ ಒಳ್ಳೆ ಮತ ಮಧ್ವಮತವು,

(ರಾಗ ರೇಗುಪ್ತಿ ಝಂಪೆ ತಾಳ ) ಮತದೊಳಗೆ ಒಳ್ಳೆ ಮತ ಮಧ್ವಮತವು, ರಘು- ಪತಿ ಪೂಜಾ ವಿಧಾನಕ್ಕೆ ಪಾವನ ಮತವು ಇದು ಪಾವನ ಮತವು ||ಪ || ನಾರಾಯಣನ ನಾಮಸ್ಮರಣೆ ನಂಬಿದಾ ಮತವು , ಇದು ನಂಬಿದಾ ಮತವು ಪಾರಾಯಣಕೆ ಅನುಕೂಲ ಮತವು ತಾರತಮ್ಯದಿ ಉದ್ಧರಿಸಿ ಶ್ರುತಿಗಳನೊರೆದ
ದಾಸ ಸಾಹಿತ್ಯ ಪ್ರಕಾರ
ಬರೆದವರು