ಹೊಡೀ ನಗಾರಿ ಮೇಲೆ ಕೈಯ

ಹೊಡೀ ನಗಾರಿ ಮೇಲೆ ಕೈಯ

( ರಾಗ ನಾದನಾಮಕ್ರಿಯೆ. ಆದಿ ತಾಳ) ಹೊಡೀ ನಗಾರಿ ಮೇಲೆ ಕೈಯ, ಘಡ ಘಡ ಹೊಡೀ ನಗಾರಿ ಮೇಲೆ ಕೈಯ ||ಪ|| ಮೃಡ ವಂದ್ಯನ ಪದ ಬಿಡದೆ ಭಜಿಪರಘ ಬಿಡಿಸಿ ಪೊರೆವ ಜಗದೊಡೆಯನೆ ಪರನೆಂದು ||ಅ|| ವೇದಗಮ್ಯ ಸಕಲಾರ್ತಿನಿವಾರಕ ಮೋದವೀವ ಮಧುಸೂದನ ಪರನೆಂದು || ನಿಷ್ಠೆಯಿಂದ ಮನಮುಟ್ಟಿ ಭಜಿಪ ಜನರಿ- ಷ್ಟವ ಕೊಡುವ ಶ್ರೀ ಕೃಷ್ಣನೆ ಪರನೆಂದು || ವಂದಿಪ ಜನರಘವೃಂದ ಕಳೆದು ಮುದ- ದಿಂದ ಪೊರೆವ ಮುಕುಂದನೆ ಪರನೆಂದು || ವಾಸುದೇವ ತನ್ನ ದಾಸ ಜನರ ಹೃದ್- ವಾಸನಾಗಿ ಇಹ ಶ್ರೀಶನೆ ಪರನೆಂದು || ಇಂದಿರೇಶ ಪರನೆಂದು ಭಜಿಸುವರ ಬಂದು ಕಾಯ್ವ ಗೋವಿಂದನೆ ಪರನೆಂದು || ಗಾನಲೋಲ ತನ್ನ ಧ್ಯಾನಿಸುವರನೆಲ್ಲ ಮಾನದಿಂದ ಕಾಯ್ವ ಶ್ರೀನಿಧಿ ಪರನೆಂದು || ಈ ಪೃಥಿವೀಯೊಳು ವ್ಯಾಪಕನಾಗಿಹ ಶ್ರೀಪತಿ ಪುರಂದರವಿಠಲನೆ ಪರನೆಂದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು