ಹರಿ ಸ್ಮರಿಸಿ ಹರಿ ಭಜಿಸಿ

ಹರಿ ಸ್ಮರಿಸಿ ಹರಿ ಭಜಿಸಿ

( ರಾಗ ಕಾಂಭೋಜ. ಝಂಪೆ ತಾಳ) ಹರಿ ಸ್ಮರಿಸಿ ಹರಿ ಭಜಿಸಿ ಹರಿಯ ಮನದೊಳಗಿರಿಸಿ ಹರಿ ಪಾದವಾಶ್ರಯಿಸಿ ಹರಿದಾಸನೆಂದೆನಿಸಿ ||ಪ|| ಘೋರಕರ್ಮವ ಮಾಡಿ ಅನುಭವಿಸಿದಜಮಿಳ ಕಡುಮೋಹದಿ ನಾರಾಯಣನ ನೆನೆದು ಹರಿ ಮಹಾಮಹಿಮನಾ ಚರಣದುಗುರಿನ ಧ್ಯಾನ ಸಿರಿ ಬ್ರಹ್ಮ ಶಿವರೆಲ್ಲ ಮಾಡುತಲಿಹರು || ಅಸುರ ಕುಲದಲಿ ಜನಿಸಿ ಮಧ್ವಮತ ಅನುಸರಿಸಿ ಅದ್ವೈತ ಐಕ್ಯವೆಂದು ಪೇಳುವರ ಸಂಹ- ರಿಸಿ ವಿಷ್ಣು ಪದವನಾಶ್ರಯಿಸಿ ಅನ್ಯಮತ ಹುಸಿಯೆನಿಸಿ ಪ್ರಹ್ಲಾದ ನರಸಿಂಹಭಕ್ತನೆಂದೆನಿಸಿ || ಭೂಪತಿ ಪ್ರಾರಬ್ಧ ಕರ್ಮದಲಿ ಮುನಿ- ಶಾಪದಿಂದ ಗಜಯೋನಿ ಜನಿಸಿ ಹಲವು ಕಾಲ ಜಲದೊಳಗಾನೆಗಳ ಬಾಯಲಿ ಸಿಲುಕಿ ಪುರಂದರವಿಠಲನ್ನ ನಿಜಪದವಿ ಸೇರಿದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು