ಸತಿಗೆ ಸ್ವತಂತ್ರವ ಕೊಡದಿರು

(ರಾಗ ಮೋಹನ ಛಾಪು ತಾಳ) ಸತಿಗೆ ಸ್ವತಂತ್ರವ ಕೊಡದಿರು, ನಿನ್ನ ಮತಿಕೆಟ್ಟು ಬಾಯ ಬಿಡದಿರಣ್ಣ ಪತಿಗೆ ಬಣ್ಣದ ಮಾತನಾಡ್ಯಾಳೊ , ಅವಳು ಮಿತಿಯಿಲ್ಲದೆ ವೆಚ್ಚ ಮಾಡ್ಯಾಳೊ ಅತಿ ಹರುಷದಿಂದ ಕೂಡ್ಯಾಳೊ , ಪರ ಗತಿಗೆ ಕರಕರೆ ಮಾಡ್ಯಾಳಣ್ಣ ಹಡೆದ ತಂದೆ ತಾಯ ತೊರೆಸ್ಯಾಳೊ, ತನ್ನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸತತ ಗಣನಾಥ

(ರಾಗ ನಾಟ ಅಟ ತಾಳ) ಸತತ ಗಣ ನಾಥ ಸಿದ್ಧಿಯನೀವ ಕಾರ್ಯದಲಿ ಮತಿ ಪ್ರೇರಿಸುವಳು ಪಾರ್ವತಿ ದೇವಿಯು ಮು- ಕುತಿ ಪಥಕೆ ಮನವೀವ ಮಹಾ ರುದ್ರದೇವ ಭಕುತಿದಾಯಕಳು ಭಾರತೀ ದೇವಿ ಯು- ಕುತಿ ಶಾಸ್ತ್ರಗಳಲ್ಲಿ ವನಜ ಸಂಭವನರಸಿ ಸತ್ಕರ್ಮಗಳ ನಡೆಸಿ ಸುಜ್ಞಾನ ಮತಿಯಿತ್ತು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಾಕು ಸಾಕಿನ್ನು ಸಂಸಾರ ಸುಖವು

(ರಾಗ ಮುಖಾರಿ ಝಂಪೆ ತಾಳ) ಸಾಕು ಸಾಕಿನ್ನು ಸಂಸಾರ ಸುಖವು||ಪ|| ಶ್ರೀಕಾಂತ ನೀನೊಲಿದು ಕರುಣಿಸೈ ಹರಿಯೆ ||ಅ.ಪ|| ಉದಿಸಿದವು ಪಂಚ ಭೂತಗಳಿಂದ ಓಷಧಿಗ- ಳುದಿಸಿದವು ಓಷಧಗಳಿಂದನ್ನವು ಉದಿಸಿದವು ಅನ್ನದಿಂ ಶುಕ್ಲ ಶೋಣಿತವೆರಡು ಉದಿಸಿದವು ಸತಿಪುರುಷರೀರ್ವರೊಳು ಹರಿಯೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಕಲವೆಲ್ಲವು ಹರಿಸೇವೆಯೆನ್ನಿ

(ರಾಗ ಶಂಕರಾಭರಣ ಅಟ ತಾಳ) ಸಕಲವೆಲ್ಲವು ಹರಿ ಸೇವೆಯೆನ್ನಿ ರುಕುಮಿಣಿ ಪತಿಯಿಲ್ಲದನ್ಯವಿಲ್ಲವೆನ್ನಿ ನುಡಿವುದೆಲ್ಲವು ನಾರಾಯಣನ ಕೀರ್ತನೆಯೆನ್ನಿ ನಡೆವುದೆಲ್ಲವು ದೇವರ ಯಾತ್ರೆಯೆನ್ನಿ ಕೊಡುವ ದಾನವ ಕಾಮಜನಕಗರ್ಪಿತವೆನ್ನಿ ಎಡೆಯ ಅನ್ನವು ಹರಿಯ ಪ್ರಸಾದವೆನ್ನಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸದರವಲ್ಲವೊ ನಿಜಭಕುತಿ

(ರಾಗ ನಾದನಾಮಕ್ರಿಯಾ ಅಟ ತಾಳ) ಸದರವಲ್ಲವೊ ನಿಜ ಭಕುತಿ, ಸತ್ಯ ಸದಮಲ ಗುರು ಕರುಣಾನಂದ ಮೂರುತಿ ಅಡಿಯಲಂಬರ ಮಾಡೋ ತನಕ, ಅಗ್ನಿ ಕಡಲುಂಡು ಮಲಿನ ಕೊನೆ ನೀಗೋ ತನಕ ಒಡಲಿಬ್ಬರೊಂದಾಗೋ ತನಕ, ಆ ಹಡೆಯದಂಥ ಹೆಣ್ಣು ಪ್ರಸವಾಗೋ ತನಕ ನಾಡಿ ಹಲವು ಕೂಡೋ ತನಕ, ಬ್ರಹ್ಮ
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಮಣನಿಲ್ಲದ ನಾರಿ

(ರಾಗ ಮುಖಾರಿ ಝಂಪೆ ತಾಳ) ರಮಣನಿಲ್ಲದ ನಾರಿ ಪರರ ಕಣ್ಣಿಗೆ ಮಾರಿ ||ಪ|| ಹಡೆದವಳ ಎದೆ ಕೊರಳ ಕೊಯ್ವಂಥ ಚೂರಿ ||ಅ.ಪ|| ಮಾತು ಕಲಿತರೆ ಏನು ಮಹ ಜಾಣೆಯಾದರೇನು ಚಾತುರ್ಯವಿದ್ದರೇನು ಚೆಲುವೆಯಾದರೇನು ರಾಶಿ ಹಣವಿದ್ದರೇನು ಏಸು ಪೇಳಿದರೇನು ರೀತಿ ಕೆಟ್ಟ ಜನ್ಮ ಪೊರೆಯ ಬೇಕಲ್ಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಾಮ ನಾಮವ ನುಡಿ ನುಡಿ

(ರಾಗ ನಾದನಾಮಕ್ರಿಯ ಆದಿತಾಳ) ರಾಮನಾಮವ ನುಡಿ ನುಡಿ ಕಾಮಕ್ರೋಧಗಳ ಬಿಡಿ ಬಿಡಿ ಶ್ರೀರಾಮ ನಾಮವ ನುಡಿ ನುಡಿ ಗುರುಗಳ ಚರಣವ ಹಿಡಿ ಹಿಡಿ ಹರಿ ನಿರ್ಮಾಲ್ಯವ ಮುಡಿ ಮುಡಿ ಕರಕರೆ ಭವಪಾಶವ ಕಡಿ ಕಡಿ ,ಬಂದ ದುರಿತವನೆಲ್ಲ ಹೊಡಿ ಹೊಡಿ ಸಜ್ಜನರ ಸಂಗವ ಮಾಡೋ ಮಾಡೋ
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಾಗಿ ತಂದೀರ್ಯಾ

(ರಾಗ ನಾದನಾಮಕ್ರಿಯ ಛಾಪು ತಾಳ) ರಾಗಿ ತಂದೀರ್ಯಾ ,ಭಿಕ್ಷಕೆ ರಾಗಿ ತಂದೀರ್ಯಾ ||ಪ|| ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು ||ಅ.ಪ|| ಅನ್ನದಾನವ ಮಾಡುವರಾಗಿ ಅನ್ನ ಛತ್ರವನಿಟ್ಟವರಾಗಿ ಅನ್ಯ ವಾರ್ತೆಯ ಬಿಟ್ಟವರಾಗಿ ಅನುದಿನ ಭಜನೆಯ ಮಾಡುವರಾಗಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪುಟ್ಟಿಸಬೇಡೆಲೊ ದೇವ

(ರಾಗ ಸಾವೇರಿ ಛಾಪು ತಾಳ) ಪುಟ್ಟಿಸಬೇಡೆಲೊ ದೇವ ಎಂದೆಂದಿಗು ಇಂಥ ||ಪ|| ಭ್ರಷ್ಟನಾಗಿ ತಿರುಗುವ ಪಾಪಿ ಜೀವನವ ||ಅ.ಪ|| ನರರ ಸ್ತುತಿಸಿ ನಾಲಿಗೆ ಬರಿದು ಮಾಡಿ ಉ- ದರಪೋಷಣೆಗಾಗಿ ಇವರವರೆನ್ನದೆ ಧರೆಯೊಳು ಲಜ್ಜೆ ನಾಚಿಕೆಗಳನೀಡಾಡಿ ಪರರ ಪೀಡಿಸಿ ತಿಂಬ ಪಾಪಿ ಜೀವನವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪ್ರಾಣನಾಥ ಪಾಲಿಸೋ

(ರಾಗ ನಾಟಕುರಂಜಿ ಆದಿ ತಾಳ) ಪ್ರಾಣನಾಥ ಪಾಲಿಸೋ ನೀ ಎನ್ನ ||ಪ|| ಜಾಣ ಲಕ್ಷ್ಮಣಗೆ ಜೀವವಿತ್ತ ಘನ್ನ ||ಅ.ಪ|| ವಾಣಿಪತಿ ಸಮನಾದವನೆ ರಾಣಿ ಭಾರತಿ ರಮಣನೆ ಅಂಜನಾದೇವಿಯ ಆತ್ಮಜನೆ ಕಂಜಾಕ್ಷ ರಾಮನ ದೂತನೆ || ಪಾಂಡುಸುತ ಭೂಮಂಡಲೇಶ ಪಾಂಡುರಂಗನ ಭಕ್ತರ ಪೋಷ
ದಾಸ ಸಾಹಿತ್ಯ ಪ್ರಕಾರ
ಬರೆದವರು