ಸ್ನಾನವ ಮಾಡಿರೊ

(ರಾಗ ಪೂರ್ವಿ ಅಟ ತಾಳ) ಸ್ನಾನವ ಮಾಡಿರೊ ಜ್ನಾನ ತೀರ್ಥದಲ್ಲಿ ನಾನು ನೀನೆಂಬಹಂಕಾರವ ಬಿಟ್ಟು ತಂದೆ ತಾಯಿಗಳ ಸೇವೆ ಒಂದು ಸ್ನಾನ ಬಂಧನದವರ ಬಿಡಿಸಲೊಂದು ಸ್ನಾನ ಮುಂದಣ ಮಾರ್ಗ ತಿಳಿದಡೊಂದು ಸ್ನಾನ ಇಂದಿರೇಶನ ಧ್ಯಾನವೆ ಗಂಗಾ ಸ್ನಾನ ಪರಸತಿಯ ಬಯಸದಿದ್ದರೆ ಒಂದು ಸ್ನಾನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸ್ಮರಣೆ ಒಂದೇ ಸಾಲದೆ

(ರಾಗ ರೇಗುಪ್ತಿ ರೂಪಕ ತಾಳ) ಸ್ಮರಣೆ ಒಂದೇ ಸಾಲದೆ , ಗೋವಿಂದನ ನಾಮ ಒಂದೇ ಸಾಲದೆ ||ಪ|| ಪರಮ ಪುರುಷನನ್ನು ನೆರೆ ನಂಬಿದವರಿಗೆ ದುರಿತ ಬಾಧೆಗಳ ಗುರುತು ತೋರುವುದೆ ||ಅ.ಪ|| ಕಡು ಮೂರ್ಖನಾದರೇನು, ದುಷ್ಕರ್ಮದಿಂ ತೊಡೆದಾತನಾದರೇನು ಜಡನಾದರೇನಲ್ಪಜಾತಿಯಾದರೇನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶ್ರೀನಿವಾಸ ನೀನೇ ಪಾಲಿಸೋ

(ರಾಗ ಆನಂದಭೈರವಿ ಆದಿ ತಾಳ) ಶ್ರೀನಿವಾಸ ನೀನೇ ಪಾಲಿಸೋ, ಶ್ರಿತಜನ ಪಾಲ ಗಾನಲೋಲ ಶ್ರೀ ಮುಕುಂದನೇ ||ಪ|| ಧ್ಯಾನ ಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಪ ವೇಣುಗೋಪಾಲ ಮುಕುಂದ ವೇದವೇದ್ಯ ನಿತ್ಯಾನಂದ ||ಅ.ಪ|| ಎಂದಿಗೆ ನಿನ್ನ ಪಾದಾಬ್ಜವ , ಪೊಂದುವ ಸುಖ ಎಂದಿಗೆ ಲಭ್ಯವೋ ಮಾಧವ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶ್ರೀ ತತ್ವವಾದ ಮತವ

(ರಾಗ ಭೂಪಾಳಿ ಝಂಪೆ ತಾಳ) ಶ್ರೀ ತತ್ವವಾದ ಮತವ ಶ್ರೀ ತತ್ವವಾದ ಮತವಾರ್ಧಿ ಶುಭ ಚಂದ್ರಮನ ಭೂತಳದೊಳಪ್ರತಿಮವೆನಿಪ ಶ್ರೀಯತಿವರನ ಪ್ರೀತಿಯಿಂ ಭಜಿಸೆ ಇಷ್ಟಾರ್ಥವನು ಸಲ್ಲಿಸುವ ವಾತದೇವನ ಸ್ಮರಿಸಿರೈ , ಅಯ್ಯ ಶ್ರೀ ಮಾರುತನು ತ್ರೇತೆಯಲಿ ಹನುಮನೆಂದಿಸಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶ್ರೀಪತಿಯ ನಾಭಿಕಮಲದಿ

(ರಾಗ ನಾಟ ) ಶ್ರೀಪತಿಯ ನಾಭಿಕಮಲದಿ ಅಜ ಜನಿಸಿದನು ಅಜನ ಮಾನಸ ಪುತ್ರರೆ ಸನಕಾದಿಗಳು ಸನಕಾದಿಗಳೆ ಶಿಷ್ಯರೇ ದುರ್ವಾಸರು ದುರ್ವಾಸರ ಶಿಷ್ಯರೇ ಪರತೀರ್ಥರು ಪರತೀರ್ಥರ ಶಿಷ್ಯರೇ ಸತ್ಯಪ್ರಜ್ಞರು ಸತ್ಯಪ್ರಜ್ಞರ ಶಿಷ್ಯರೇ ಪ್ರಾಜ್ಞತೀರ್ಥರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶಿವ ನೀನ್ಹೇಗಾದ್ಯೋ

(ರಾಗ ನಾದನಾಮಕ್ರಿಯಾ ಆದಿ ತಾಳ) ಶಿವ ನೀನ್ಹೇಗಾದ್ಯೋ, ತಾಯಿಗಂಡ ಹರ ನೀ ಹೇಗಾದ್ಯೋ ||ಪ|| ಶಿವ ನೀನಾದರೆ ಶಿವನರ್ಧಾಂಗಿಗೆ ಧವನಾಗ ಬೇಕಲ್ಲೋ ಅವಿವೇಕಿ ಮೂಢ ||ಅ.ಪ|| ಗಂಗೆಯ ಶಿರದಲ್ಲಿ ಧರಿಸಿದ ನಮ್ಮ ಶಿವ ಕುಂಭವ ಹೊರದೆ ಬಡಕೊಂಬೆ ಖೋಡಿ ಮಂಟೆಯಲಿ ಮನೆ ಮಾಡಿದ ನಮ್ಮ ಶಿವ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶರಣು ಸಿದ್ಧಿ ವಿನಾಯಕ

(ರಾಗ ಸೌರಾಷ್ಟ್ರ ತ್ರಿಪುಟ ತಾಳ) ಶರಣು ಸಿದ್ಧಿ ವಿನಾಯಕ ಶರಣು ವಿದ್ಯಾ ಪ್ರದಾಯಕ ಶರಣು ಪಾರ್ವತಿ ತನಯ ಮೂರುತಿ ಶರಣು ಮೂಷಿಕ ವಾಹನ ನಿಟಿಲ ನೇತ್ರನ ದೇವಿಸುತನೆ ನಾಗಭೂಷಣ ಪ್ರೀಯನೆ ತಟಿಲತಾಂಕಿತ ಕೋಮಲಾಂಗನೆ ಕರ್ಣ ಕುಂಡಲಧಾರನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶರಣು ನಿನಗೆ ಶರಣಂಬೆನು ವಿಠಲ

(ರಾಗ ಮಧ್ಯಮಾವತಿ ಅಟ ತಾಳ) ಶರಣು ನಿನಗೆ ಶರಣಂಬೆನು ವಿಠಲ ಕರುಣವಾರಿಧಿ ಎನ ಕಾಯೋ ವಿಠಲ ದಶರಥರಾಯನ ಉದರದಿ ವಿಠಲ ಶಿಶುವಾಗಿ ಉದಿಸಿದ್ಯೋ ಶ್ರೀರಾಮವಿಠಲ ಶಶಿಮುಖಿ ಗೋಪಿಯ ಕಂದನೆ ವಿಠಲ ಅಸುರೆ ಪೂತನಿಯ ಕೊಂದ್ಯೋ ಕೃಷ್ಣ ವಿಠಲ ಅರಸಿ ರುಕ್ಮಿಣಿಗೆ ನೀನರಸನಾದ್ಯೋ ವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶರಣು ಭಾರತಿ ದೇವಿಗೆ

(ರಾಗ ನಾಟ ತ್ರಿಪುಟ ತಾಳ) ಶರಣು ಭಾರತಿದೇವಿಗೆ ಶರಣು ವಾಯುರಮಣಿಗೆ ||ಪ|| ಶರಣು ಶರಣರ ಪೊರೆವ ಕರುಣಿಗೆ ಶರಣು ಸುರವರ ದೇವಿಗೆ ||ಅ.ಪ|| ಸುರರು ಮೊದಲಾದವರಿಗೆಲ್ಲ ಪರಮ ಮಂಗಳವೀವಳೆ ಚರಣಕಮಲಕೆ ಮೊರೆಯ ಹೊಕ್ಕೆನು ಕರುಣಿಸೆನಗೆ ಸುಮಂಗಳ ಪಿಂಗಳರೂಪಳೆ ಮಂಗಳಮಹಿಮಳೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸತ್ಯ ಜಗತಿದು ಪಂಚಭೇದವು

(ರಾಗ ಸೌರಾಷ್ಟ್ರ ಝಂಪೆ ತಾಳ) ಸತ್ಯ ಜಗತಿದು ಪಂಚ ಭೇದವು , ನಿತ್ಯ ಶ್ರೀ ಗೋವಿಂದನ ಕೃತ್ಯ ತಿಳಿದು ತಾರತಮ್ಯದಿ ಕೃಷ್ಣನಧಿಕೆಂದು ಸಾರಿರೈ ಜೀವ ಈಶಗೆ ಭೇದ ಸರ್ವತ್ರ ಜೀವ ಜೀವಕೆ ಭೇದವು ಜೀವ ಜಡಕೆ ಜಡ ಜಡಕೆ ಭೇದ ಜೀವ ಜಡ ಪರಮಾತ್ಮಗೆ ಮಾನುಷೋತ್ತಮರಧಿಕ ಕ್ಷಿತಿಪರು
ದಾಸ ಸಾಹಿತ್ಯ ಪ್ರಕಾರ
ಬರೆದವರು