ಸದರವಲ್ಲವೊ ನಿಜಭಕುತಿ

ಸದರವಲ್ಲವೊ ನಿಜಭಕುತಿ

(ರಾಗ ನಾದನಾಮಕ್ರಿಯಾ ಅಟ ತಾಳ) ಸದರವಲ್ಲವೊ ನಿಜ ಭಕುತಿ, ಸತ್ಯ ಸದಮಲ ಗುರು ಕರುಣಾನಂದ ಮೂರುತಿ ಅಡಿಯಲಂಬರ ಮಾಡೋ ತನಕ, ಅಗ್ನಿ ಕಡಲುಂಡು ಮಲಿನ ಕೊನೆ ನೀಗೋ ತನಕ ಒಡಲಿಬ್ಬರೊಂದಾಗೋ ತನಕ, ಆ ಹಡೆಯದಂಥ ಹೆಣ್ಣು ಪ್ರಸವಾಗೋ ತನಕ ನಾಡಿ ಹಲವು ಕೂಡೋ ತನಕ, ಬ್ರಹ್ಮ ನಾಡಿ ಪೊಕ್ಕು ನಲಿದಾಡುವ ತನಕ ಕಾಡುವ ಕಪಿ ಸಾಯೋ ತನಕ , ಸುಟ್ಟು ಕಾಡಿನೊಳು ರಸ ತೊಟ್ಟಿಡೋ ತನಕ ಆದಿಕುಂಭವ ಕಾಂಬೋ ತನಕ, ಅಲ್ಲಿ ಸಾಧಿಸಿ ಅಮೃತ ಸವಿದುಂಬೋ ತನಕ ಬಾಧೆ ಸಹಿಸಿ ಕೊಂಬೊ ತನಕ, ಆದಿ ಪುರಂದರವಿಠಲನ ಸ್ಮರಿಸೋ ತನಕ
ದಾಸ ಸಾಹಿತ್ಯ ಪ್ರಕಾರ
ಬರೆದವರು