ಸತಿಗೆ ಸ್ವತಂತ್ರವ ಕೊಡದಿರು

ಸತಿಗೆ ಸ್ವತಂತ್ರವ ಕೊಡದಿರು

(ರಾಗ ಮೋಹನ ಛಾಪು ತಾಳ) ಸತಿಗೆ ಸ್ವತಂತ್ರವ ಕೊಡದಿರು, ನಿನ್ನ ಮತಿಕೆಟ್ಟು ಬಾಯ ಬಿಡದಿರಣ್ಣ ಪತಿಗೆ ಬಣ್ಣದ ಮಾತನಾಡ್ಯಾಳೊ , ಅವಳು ಮಿತಿಯಿಲ್ಲದೆ ವೆಚ್ಚ ಮಾಡ್ಯಾಳೊ ಅತಿ ಹರುಷದಿಂದ ಕೂಡ್ಯಾಳೊ , ಪರ ಗತಿಗೆ ಕರಕರೆ ಮಾಡ್ಯಾಳಣ್ಣ ಹಡೆದ ತಂದೆ ತಾಯ ತೊರೆಸ್ಯಾಳೊ, ತನ್ನ ಕಡೆಗೆ ಬಾಯೆಂದು ಕರೆಸ್ಯಾಳೊ ಬಿಡದೆ ಒಂಟಿಯ ಮಾಡಿ ನಿಲಸ್ಯಾಳೊ, ಒಂದು ಪಡಿ ಭತ್ತಕೆ ಬಾಯ ಬಿಡಿಸ್ಯಾಳಣ್ಣ ತಂದದ್ದರೊಳಗರ್ಧ ಕದ್ದಾಳೊ, ತನ್ನ ಸಂದು ಸುಳಿವು ನೋಡಿ ಮೆದ್ದಾಳೊ ಮುಂದಿದ್ದ ಕೂಸನ್ನು ಒದ್ದಾಳೊ, ಹತ್ತು ಮಂದಿಲಿ ಮಾನವ ಕೆಡಿಸ್ಯಾಳಣ್ಣ ಉಂಡು ಉಟ್ಟ ಮನೆ ಎಣಿಸ್ಯಾಳೊ, ಅವನ ಭಂಡು ಮಾಡಿ ಬಾಯ ಬಿಡಿಸ್ಯಾಳೊ ಮಂಡೆ ಕೆದರಿ ಕೊಂಡು ಸೆಣೆಸ್ಯಾಳೊ , ದೊಡ್ಡ ಕೊಂಡ ಕೋತಿಯಂತೆ ಕುಣಿಸ್ಯಾಳಣ್ಣ ಕರಕರೆ ಸಂಸಾರ ತರವಲ್ಲ, ಇಂಥ ದುರುಳ ಹೆಣ್ಣಿನ ಸಂಗವಿರೆ ಸಲ್ಲ ನೆರೆಹೊರೆ ನೋಡಿ ನಗುವರಲ್ಲ, ಸಿರಿ ಪುರಂದರ ವಿಟ್ಠಲ ತಾ ಬಲ್ಲ
ದಾಸ ಸಾಹಿತ್ಯ ಪ್ರಕಾರ
ಬರೆದವರು