ಏನು ಗತಿಯೋ ಎನಗೆ

(ರಾಗ ಪೂರ್ವಿ. ಅಟ ತಾಳ.) ಏನು ಗತಿಯೋ ಎನಗೆ, ಎಲೈ ಹರಿ ||ಪ|| ನಾ ನಿನ್ನ ನೆನೆಯದೆ ಮೋಸ ಹೋದೆನಲ್ಲೋ ||ಅ.ಪ|| ಅಂಕದಲಾಡುವ ಶಿಶುವಿನ ಮುದ್ದಾದ ಇಂಬಿನ ನುಡಿಗಳ ಕೇಳುತಲಿ ಕಿಂಕಿಣಿ ಧ್ವನಿಯಿಂದ ಕಿವಿಗೊಟ್ಟು ಕೇಳುವ ಮಂಕಾದ ಹರಿಣನಂತಾದೆನಲ್ಲೊ ಹರಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನು ಬೇಡಲಿ ಹರಿಯ

(ರಾಗ ಶಂಕರಾಭರಣ. ಅಟ ತಾಳ) ಏನು ಬೇಡಲಿ ಹರಿಯ ||ಪ|| ಜಾಹ್ನವೀಜನಕನ ಕಂದರ್ಪನಯ್ಯನ ||ಅ.ಪ|| ಏನು ಬೇಡಲಿ ಚಿತ್ತ ಚಂಚಲ ಕಠಿನನ ಮೌನದಿಂದಲಿ ಧರೆ ಕೋರೆಲೆತ್ತಿದನ, ಇಂಥವನ || ಕರುಳಹಾರದವನ ಧರಣಿಯನು ಮೆಟ್ಟಿ ಈರಡಿ ಮಾಡಿದ ಕೊಲೆಗಡುಕನ, ಇಂಥವನ || ಅರಣ್ಯದಿ ಚರಿಸಿ ಸತಿಯ ಕಳೆದನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಂಥಾ ಪುಣ್ಯವೆ ಗೋಪಿ

(ರಾಗ ಸಾವೇರಿ. ತ್ರಿಪುಟ ತಾಳ) ಎಂಥಾ ಪುಣ್ಯವೆ ಗೋಪಿ ,ಎಂಥಾ ಭಾಗ್ಯವೆ ಯಶೋದೆ ಇಂಥಾ ಮಗನ ಕಾಣೆನೆ ||ಪ|| ಚಿಂತಿಸಿದರು ದೊರಕ ಚೆಲುವ ರಾಜಗೋಪಾಲ ಭ್ರಾಂತಿ ಮಾತುಗಳಲ್ಲವೆ, ಬಹು ನಿಜವೆ ||ಅ.ಪ|| ಸರಸಿಜನಾಭನ ಸುಮ್ಮನೆ ಕಂಡರೆ ದುರಿತವೆಲ್ಲವು ಪೋಪುದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೀನ್ಯಾಕೋ ನಿನ್ನ ಹಂಗ್ಯಾಕೋ

(ರಾಗ ಕಾನಡ ಆದಿ ತಾಳ ) ನೀನ್ಯಾಕೊ, ನಿನ್ನ ಹಂಗ್ಯಾಕೋ , ನಿನ್ನ ನಾಮದ ಬಲವೊಂದಿದ್ದರೆ ಸಾಕೋ ಕರಿ ಮಕರಿಗೆ ಸಿಕ್ಕಿ ಮೊರೆಯಿಡುತಿರುವಾಗ ಆದಿ ಮೂಲನೆಂಬ ನಾಮವೆ ಕಾಯ್ತೋ ಪ್ರಹ್ಲಾದನ ಪಿತ ಬಾಧಿಸುತಿರುವಾಗ ನರಹರಿಯೆಂಬ ನಾಮವೆ ಕಾಯ್ತೋ ಬಾಲೆಯ ಸಭೆಯಲಿ ಸೀರೆಯ ಸೆಳೆವಾಗ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನ ಭಕುತಿಯನು ಬೀರೋ

(ರಾಗ ಶಂಕರಾಭರಣ. ತ್ರಿಪುಟ ತಾಳ ) ನಿನ್ನ ಭಕುತಿಯೆನು ಬೀರೋ, ದೇವ ಎನ್ನ ಮನ್ನಿಸಿ ಸಲಹುವರಾರೋ ||ಪ|| ಸನ್ನುತ ಸನ್ಮಾರ್ಗ ತೋರೋ, ಪ್ರ- ಸನ್ನ ರಕ್ಷಕ ಬೇಗ ಬಾರೋ ||ಅ.ಪ|| ಪನ್ನಗಶಯನ ಲಕ್ಷ್ಮೀಶ, ವೇದ- ಸನ್ನುತಪಾದ ಸರ್ವೇಶ ಇನ್ನು ಬಿಡಿಸೊ ಮೋಹಪಾಶ ಆ- ಪನ್ನ ರಕ್ಷಕ ಶ್ರೀನಿವಾಸ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೀನೆ ಗತಿ ನೀನೆ ಮತಿ

(ರಾಗ ಪೂರ್ವಿ. ಝಂಪೆ ತಾಳ ) ನೀನೆ ಗತಿ ನೀನೆ ಮತಿ ನೀನೆ ಸ್ವಾಮಿ ನೀನಲ್ಲದನ್ಯತ್ರ ದೈವಗಳ ನಾನರಿಯೆ || ನಿನ್ನ ಪಾದಾರವಿಂದದ ಸೇವೆಯ ಮಾಡಿ ನಿನ್ನ ಧ್ಯಾನದಲಿರುವ ಹಾಗೆ ಮಾಡು ನಿನ್ನ ದಾಸರ ಸಂಗದಿಂದ ದೂರಿಡದೆನಗೆ ಸನ್ಮಾರ್ಗದಿರಿಸೊ ಜಗದೀಶ ಅಘನಾಶ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೀನೇ ದಯಾಳೋ

(ರಾಗ ಆನಂದಭೈರವಿ. ಅಟ ತಾಳ ) ನೀನೇ ದಯಾಳೋ ನಿರ್ಮಲ ಚಿತ್ತ ಗೋವಿಂದ ನಿಗಮ ಗೋಚರ ಮುಕುಂದ ||ಪ|| ಜ್ಞಾನಿಗಳರಸ ನೀನಲ್ಲದೆ ಜಗಕಿನ್ನು ಮಾನದಿಂದಲಿ ಕಾವ ದೊರೆಗಳ ನಾ ಕಾಣೆ ||ಅ.ಪ|| ದಾನವಾಂತಕ ದೀನಜನ ಮಂದಾರನೆ ಧ್ಯಾನಿಪರ ಮನ ಸಂಚಾರನೆ ಮೌನನಾದೆನು ನಿನ್ನ ಧ್ಯಾನಾನಂದದಿ ಈಗ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿಲ್ಲಬೇಕಯ್ಯ ಕೃಷ್ಣಯ್ಯ

(ರಾಗ ಮೋಹನ. ಅಟ ತಾಳ ) ನಿಲ್ಲಬೇಕಯ್ಯ ಕೃಷ್ಣಯ್ಯ ನೀ ||ಪ|| ನಿಲ್ಲಬೇಕಯ್ಯ ಮಲ್ಲಮರ್ದನ ಸಿರಿ- ವಲ್ಲಭ ಎನ್ನ ಹೃದಯದಲ್ಲಿ ಸಂತತ ನೀ ||ಅ.ಪ|| ಸುಪ್ಪಾಣಿ ಮುತ್ತಿಟ್ಟು ನೋಡುವೆ, ಸದಾ ಚಪ್ಪಾಳೆ ತಟ್ಟಿ ನಾ ಪಾಡುವೆ ಅಪ್ಪಾ ಶ್ರೀ ಕೃಷ್ಣನೆ ಎತ್ತಿ ಮುದ್ದಿಸಿಕೊಂಬೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೆನೆವೆ ನಾನನುದಿನ

(ರಾಗ ಸೌರಾಷ್ಟ್ರ. ಆದಿ ತಾಳ ) ನೆನೆವೆ ನಾನುದಿನ ನಿಮ್ಮೀ ಮಹಿಮೆಯನು, ಮಧ್ವರಾಯ ||ಪ|| ಸನಕಾದಿವಂದ್ಯ ಸೇವಿತ ಪದಾಬ್ಜ ,ಮಧ್ವರಾಯ ||ಅ.ಪ|| ಕಲಿಮಲದಿಂ ಕಲುಷಿತವಾಗಲು ಜ್ಞಾನ, ಮಧ್ವರಾಯ ನಳಿನಾಕ್ಷನಾಜ್ಞದಿ ಇಳೆಯೊಳಗುದಿಸಿದ್ಯೋ, ಮಧ್ವರಾಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾರಾಯಣ ನಿನ್ನ ನಾಮದ

(ರಾಗ ಆನಂದಭೈರವಿ. ರೂಪಕ ತಾಳ ) ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರಾಮೃತವೆನ್ನ ನಾಲಿಗೆಗೆ ಬರಲಿ ಕೂಡುವಾಗಲಿ ನಿಂತಾಡುವಾಗಲಿ ಮತ್ತೆ ಹಾಡುವಾಗಲಿ ಹರಿದಾಡುವಾಗಲಿ ಖೋಡಿ ವಿನೋದದಿ ನೋಡದೆ ನಾ ಬಲು ಮಾಡಿದ ಪಾಪ ಬಿಟ್ಟೋಡಿ ಹೋಗೋ ಹಾಗೆ ಊರಿಗೇ ಹೋಗಲಿ ಊರೊಳಗಿರಲಿ
ದಾಸ ಸಾಹಿತ್ಯ ಪ್ರಕಾರ
ಬರೆದವರು